More

    ಕೋವಿಡ್ 19 ವಿರುದ್ಧ ಹೋರಾಟಕ್ಕೆ ಸ್ಫೂರ್ತಿ ಒದಗಿಸಿದ ಜೋಗಿಂದರ್ ಶರ್ಮ, ಐಸಿಸಿ ಮೆಚ್ಚುಗೆ

    ನವದೆಹಲಿ: ಕರೊನಾ ಪಿಡುಗಿನಿಂದ ವಿಶ್ವದಾದ್ಯಂತ ಲಕ್ಷಾಂತರ ಜನರು ಬಾಧಿತರಾಗಿದ್ದು, ಸಾವಿರಾರು ಜನರು ಮೃತಪಟ್ಟಿದ್ದಾರೆ. ಇದೇ ವೇಳೆ ಈ ಪಿಡುಗು ಮನುಷ್ಯರ ಅಂತರಂಗದಲ್ಲಿ ಸುಪ್ತವಾಗಿರುವ ಶ್ರೇಷ್ಠ ಗುಣವನ್ನು ಬಹಿರಂಗಕ್ಕೆ ತರುವಲ್ಲೂ ಯಶಸ್ವಿಯಾಗಿದೆ.
    ಈ ಪಿಡುಗು ಜನರಲ್ಲಿ ದಿಗಿಲು ಮತ್ತು ಹತಾಶೆಯನ್ನು ಉಂಟು ಮಾಡಿರುವ ಬೆನ್ನಲ್ಲೇ ಇದರ ವಿರುದ್ಧ ಹೋರಾಡಲು ಹಲವು ಹೀರೋಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂಥವರಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಜೋಗಿಂದರ್ ಶರ್ಮ ಕೂಡ ಒಬ್ಬರಾಗಿದ್ದಾರೆ.

    ಕೋವಿಡ್ 19 ವಿರುದ್ಧ ಹೋರಾಟಕ್ಕೆ ಸ್ಫೂರ್ತಿ ಒದಗಿಸಿದ ಜೋಗಿಂದರ್ ಶರ್ಮ, ಐಸಿಸಿ ಮೆಚ್ಚುಗೆ

    ಯಾರು ಜೋಗಿಂದರ್ ಶರ್ಮ? ಬರಿ ಜೋಗಿಂದರ್ ಶರ್ಮ ಎಂದರೆ ತಕ್ಷಣಕ್ಕೆ ಇವರ ನೆನಪಾಗುವುದಿಲ್ಲ. ಆದರೆ 2007ರ ಟಿ20 ವಿಶ್ವಕಪ್‌ನ ೈನಲ್‌ನಲ್ಲಿ ಪಾಕ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ಎಸೆದು ಮಿಸ್ಬಾ ಉಲ್ ಹಕ್ ವಿಕೆಟ್ ಕಬಳಿಸಿದವರು ಎನ್ನುತ್ತಲೇ ಇವರ ನೆನಪಾಗುತ್ತದೆ. ವಿಶ್ವಕಪ್ ಅನ್ನು ಗೆದ್ದುಕೊಟ್ಟ ಬಳಿಕವೂ ಇವರು ಹೆಚ್ಚುಕಾಲ ಕ್ರಿಕೆಟ್ ಆಡಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಇವರು ಹರಿಯಾಣ ಪೊಲೀಸ್ ಪಡೆಯನ್ನು ಸೇರ್ಪಡೆಗೊಂಡ ಇವರು ಡಿವೈಎಸ್‌ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಕರೊನಾ ವೈರಸ್ ಹಾವಳಿಯ ಹೊರತಾಗಿಯೂ ಅದರ ವಿರುದ್ಧ ಹೋರಾಡಲು ಮಾಸ್ಕ್ ತೊಟ್ಟ ಜೋಗಿಂದರ್ ಶರ್ಮ ರಸ್ತೆಗಿಳಿದು, ಜನರಲ್ಲಿ ಜಾಗೃತಿ ಉಂಟು ಮಾಡುವ ಜತೆಗೆ ಸ್ಫೂರ್ತಿಯನ್ನು ಉಕ್ಕಿಸಿದರು. ಕಾರ್ಯನಿರ್ವಹಿಸುವಾಗಿನ ಅವರ ೆಟೋ ಪತ್ರಿಕೆಗಳಲ್ಲಿ ಪ್ರಕಟವಾಗಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದನ್ನು ಗಮನಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಜೋಗಿಂದರ್ ಶರ್ಮ ಅವರ ಕರ್ತವ್ಯನಿಷ್ಠೆ, ದೇಶಪ್ರೇಮವನ್ನು ಕೊಂಡಾಡಿ ಟ್ವೀಟ್ ಮಾಡಿದೆ.

    ಕೋವಿಡ್ 19 ವಿರುದ್ಧ ಹೋರಾಟಕ್ಕೆ ಸ್ಫೂರ್ತಿ ಒದಗಿಸಿದ ಜೋಗಿಂದರ್ ಶರ್ಮ, ಐಸಿಸಿ ಮೆಚ್ಚುಗೆ
    ಐಸಿಸಿಯ ಈ ಟ್ವೀಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ. ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿದ ಜೋಗಿಂದರ್ ಶರ್ಮ ಕೋವಿಡ್-19 ಅನ್ನೂ ಮಣಿಸುತ್ತಾರೆ ಎಂದು ರಾಹುಲ್ ಸಿಂಗ್ ಎಂಬುವರು ಟ್ವೀಟ್ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts