More

    ಕೋರ್ಟ್‌ನಲ್ಲಿ ಗಳಗಳನೆ ಅತ್ತಿದ್ದ ಐಎಎಸ್ ಅಧಿಕಾರಿ ವಿಜಯಕುಮಾರ್!

    ಬೆಂಗಳೂರು: ತಮ್ಮ ನಿವಾಸದಲ್ಲಿ ಇಂದು ಆತ್ಮಹತ್ಯೆ ಮಾಡಿಕೊಂಡ ಐಎಎಸ್ ಅಧಿಕಾರಿ ವಿಜಯಕುಮಾರ್ ಅವರು ಐಎಂಎ ಹಗರಣದ ಆರೋಪಿಯಾಗಿ ಕೋರ್ಟಿನ ಕಟಕಟೆಯಲ್ಲಿ ನಿಲ್ಲುವ ಸಂದರ್ಭ ಎದುರಾದಾಗ ಅಕ್ಷರಶಃ ಗಳಗಳನೆ ಅತ್ತುಬಿಟ್ಟಿದ್ದರು!

    ಕಳೆದ ವರ್ಷ ಜುಲೈ 8ರಂದು ಬಂಧಿತರಾಗಿದ್ದ ಅವರನ್ನು ಪೊಲೀಸರು ಮೂರು ದಿನಗಳ ಕಾಲ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ನಂತರ ಜುಲೈ 12ರಂದು ಎಸ್‌ಐಟಿ ಪೊಲೀಸರು ಅವರ ಮನೆಗೆ ರೇಡ್ ಮಾಡಿದಾಗ ಎರಡೂವರೆ ಕೋಟಿ ರೂ. ಅಕ್ರಮ ನಗದು ಹಣ ಪತ್ತೆಯಾಗಿತ್ತು.

    ಬಳಿಕ ವಿಜಯಶಂಕರ್ ಅವರನ್ನು ಪೊಲೀಸರು ಕೋರ್ಟಿಗೆ ಹಾಜರುಪಡಿಸಿದಾಗ ಇಡೀ ಕೋರ್ಟ್ ಹಾಲ್ ಕಿಕ್ಕಿರಿದು ತುಂಬಿತ್ತು. ಆಗ ಅಲ್ಲಿನ ಸಿಬ್ಬಂದಿ, ವಿಜಯಶಂಕರ್‌ಗೆ ಕಟಕಟೆಯಲ್ಲಿ ನಿಂತುಕೊಳ್ಳುವಂತೆ ಸೂಚಿಸಿದಾಗ ಈ ಐಎಎಸ್ ಅಧಿಕಾರಿಯ ಕಣ್ಣಲ್ಲಿ ಅಶ್ರುಧಾರೆ ಹರಿದಿತ್ತು. ಆದರೆ ಜತೆಯಲ್ಲಿದ್ದ ಪೊಲೀಸರು ಅವರಿಗೆ ಕೋರ್ಟಿನ ನಿಯಮಗಳ ಪ್ರಕಾರ ಕಟಕಟೆಯಲ್ಲಿ ನಿಲ್ಲಲೇಬೇಕೆಂದು ತಾಕೀತು ಮಾಡಿದಾಗ ಅನ್ಯ ಮಾರ್ಗ ಕಾಣದೆ ವಿಜಯಶಂಕರ್ ಕಟಕಟೆಯೇರಿದ್ದರು.

    ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಸಚಿವ ಸುರೇಶ್‌ಕುಮಾರ್ ವಿರುದ್ಧ ಕೋರ್ಟ್‌ಗೆ ದೂರು

    ಅವರನ್ನು ಮತ್ತು ಅವರ ಜತೆಗೆ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದವರನ್ನು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸುತ್ತಿರುವುದಾಗಿ ನ್ಯಾಯಾಧೀಶರು ಹೇಳಿದಾಗ, ‘‘ಇನ್ನು ಜೈಲಿಗೆ ಹೋಗುವುದು ಗ್ಯಾರಂಟಿಯಾಯಿತಲ್ಲ’’ ಎಂದು ವಿಜಯಶಂಕರ್ ಕಣ್ಣೀರಿಟ್ಟಿದ್ದರು. ವಿಜಯಶಂಕರ್ ಪರವಾಗಿ ವಾದಿಸಲು ಅಲ್ಲಿ ಹಾಜರಾಗಿದ್ದ ಕೆಲವು ವಕೀಲರು ಸಮಾಧಾನಪಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಇದನ್ನು ಆಗ ಅವರ ಜತೆಗಿದ್ದ ಪೊಲೀಸರೇ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು. ಅಂತಹ ಐಎಎಸ್ ಅಧಿಕಾರಿ ಈಗ ತಮ್ಮ ಜೀವನವನ್ನು ತಾವೇ ಅಂತ್ಯಗೊಳಿಸಿಕೊಂಡಿದ್ದಾರೆ.

    ಐಎಎಸ್ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts