More

    ಐಎಎಸ್ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆ!

    ಬೆಂಗಳೂರು: ಈ ಹಿಂದೆ ಬೆಂಗಳೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಐಎಎಸ್ ಅಧಿಕಾರಿ ವಿಜಯಶಂಕರ್ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಐಎಂಎ ಜುವೆಲ್ಲರಿ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿ, ನಂತರ ಜಾಮೀನಿನ ಮೇಲೆ ಹೊರಬಂದಿದ್ದರು. ಇಂದು ತಮ್ಮ ನಿವಾಸದಲ್ಲೇ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಐಎಂಎ ಕಂಪನಿಯಿಂದ ಒಂದೂವರೆ ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ವಿಶೇಷ ತನಿಖಾ ತಂಡ ಕಳೆದ ವರ್ಷ ಜುಲೈ 8ರಂದು ಬಂಧಿಸಿತ್ತು. ನಂತರ ನ್ಯಾಯಾಧೀಶರು ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ವಿಜಯಶಂಕರ್ ಅವರನ್ನು ಇರಿಸಲಾಗಿತ್ತು. ಬಂಧನದ ಹಿನ್ನೆಲೆಯಲ್ಲಿ ಸರ್ಕಾರ ಅವರನ್ನು ಸೇವೆಯಿಂದ ಅಮಾನತು ಮಾಡಿತ್ತು.

    ಇದನ್ನೂ ಓದಿ: ಮತ್ತೆ 20 ದಿನ ದೇಶಾದ್ಯಂತ ಕಂಪ್ಲೀಟ್​ ಲಾಕ್​ಡೌನ್​?

    ನಂತರ ಕೆಲವೇ ದಿನಗಳಲ್ಲಿ ಎಸ್‌ಐಟಿ ತಂಡ ಅವರ ಮನೆಯಿಂದ ಎರಡೂವರೆ ಕೋಟಿ ರೂ. ನಗದು ವಶಪಡಿಸಿಕೊಂಡಿತ್ತು. ಇದರಲ್ಲಿ ಐಎಂಎ ಹಗರಣದ ಸೂತ್ರಧಾರ ಮಹಮದ್ ಮನ್ಸೂರ್ ಖಾನ್ ಕೊಟ್ಟಿದ್ದ ಲಂಚದ ಹಣವೂ ಒಳಗೊಂಡಿತ್ತು. ಉಳಿದ ಹಣವೂ ಲಂಚದ ರೂಪದಲ್ಲಿ ಇತರರಿಂದ ಸ್ವೀಕರಿಸಿದ್ದು ಎಂದು ಪೊಲೀಸರು ಹೇಳಿದ್ದರು.

    ಸಚಿವ ಸುಧಾಕರ್‌ಗೆ ಅಮಿತ್ ಶಾ ಫೋನ್ ಕರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts