More

    ಕಾಬುಲ್​ನಿಂದ ಹೊರಟಿದೆ, 85 ಭಾರತೀಯರನ್ನು ಹೊತ್ತ ಐಎಎಫ್​​ ವಿಮಾನ

    ನವದೆಹಲಿ: ಅಫ್ಘಾನಿಸ್ತಾನದಲ್ಲಿರುವ ಭಾರತೀಯ ನಾಗರೀಕರನ್ನು ತೆರವುಗೊಳಿಸುವ ಕಾರ್ಯವನ್ನು ಭಾರತ ಸರ್ಕಾರ ಮುಂದುವರಿಸಿದ್ದು, ಐಎಎಫ್​ನ ವಿಮಾನವೊಂದು 85 ಜನರನ್ನು ಭಾರತಕ್ಕೆ ವಾಪಸ್​ ತರುತ್ತಿದೆ ಎನ್ನಲಾಗಿದೆ. ಭಾರತೀಯ ವಾಯುಪಡೆಯ ಸಿ-130ಜೆ ಸಾರಿಗೆ ವಿಮಾನವು ಇಂದು ಬೆಳಿಗ್ಗೆ ಕಾಬುಲ್​ನಿಂದ ಹೊರಟಿದ್ದು, ತಾಜಿಕಿಸ್ತಾನದಲ್ಲಿ ಇಂಧನ ಭರ್ತಿಗಾಗಿ ನಿಂತಿದೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಭಾರತವು ತನ್ನೆಲ್ಲಾ ಡಿಪ್ಲೊಮಾಟಿಕ್​ ಸಿಬ್ಬಂದಿಯನ್ನು ಅಫ್ಘಾನಿಸ್ತಾನದಿಂದ ಈ ಮೊದಲೇ ತೆರವುಗೊಳಿಸಿತ್ತು. ಆದರೆ ತಾಲಿಬಾನ್​ ಮುಷ್ಠಿಯಲ್ಲಿರುವ ಅಫ್ಘಾನಿಸ್ತಾನದ ಹಲವು ನಗರಗಳಲ್ಲಿ ಸುಮಾರು 1,000 ಭಾರತೀಯರು ಇನ್ನೂ ಇದ್ದಾರೆ. ಇವರಲ್ಲಿ ಎಲ್ಲರೂ ಭಾರತೀಯ ಎಂಬೆಸಿಯಲ್ಲಿ ನೋಂದಣಿ ಮಾಡಿಕೊಂಡಿಲ್ಲವಾದ್ದರಿಂದ, ಅವರಿರುವ ಸ್ಥಳ ಮತ್ತು ಪರಿಸ್ಥಿತಿಗಳನ್ನು ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

    ಇದನ್ನೂ ಓದಿ: ಇಡೀ ಆಫ್ಘನ್ ಗೆದ್ದ ತಾಲಿಬಾನ್​ಗೆ ಅದೊಂದು ಪ್ರಾಂತ್ಯ ಮಾತ್ರ ನಡುಕ ಹುಟ್ಟಿಸಿದೆ: ರೋಚಕ ಸ್ಟೋರಿ ಇದು!

    ಮತ್ತಷ್ಟು ಭಾರತೀಯರನ್ನು ದೇಶಕ್ಕೆ ವಾಪಸ್​ ತರುವುದಕ್ಕಾಗಿ, ವಾಯುಪಡೆಯ ಮತ್ತೊಂದು ಸಿ-17 ಸಾರಿಗೆ ವಿಮಾನವು, ಕಾಬುಲ್​ಗೆ ತೆರಳಲು ಸ್ಟ್ಯಾಂಡ್​ಬೈನಲ್ಲಿದ್ದು ಸಿದ್ಧವಾಗಿದೆ. ತಾಲಿಬಾನ್​ ಚೆಕ್​ಪೋಸ್ಟ್​​ಗಳಿಂದಾಗಿ ಜನರು ವಿಮಾನ ನಿಲ್ದಾಣ ತಲುಪುವುದು ಕಷ್ಟಕರವಾಗಿದ್ದು, ಸಾಕಷ್ಟು ಭಾರತೀಯರು ನಿಲ್ದಾಣ ತಲುಪಿದಂತೆ, ಮತ್ತೆ ತೆರವುಗೊಳಿಸಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್)

    Good News: ಮಕ್ಕಳಿಗೂ ಬಂತು ಕರೊನಾ ಲಸಿಕೆ! ಸೂಜಿರಹಿತ ‘ಜೈಕೋವಿ-ಡಿ’ ತುರ್ತುಬಳಕೆಗೆ ಅನುಮೋದನೆ

    VIDEO | ‘ಅಫ್ಘಾನಿಸ್ತಾನಕ್ಕೆ ಹೋಗಿಬಿಡಿ, ಅಲ್ಲಿ ಪೆಟ್ರೋಲ್​ ಬೆಲೆ ಕಡಿಮೆ ಇದೆ’ ಎಂದ ಬಿಜೆಪಿ ನಾಯಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts