More

    ವೈಯಕ್ತಿಕವಲ್ಲ,ಎಲ್ಲರ ಪರವಾಗಿ ಹೇಳಿಕೆ ನೀಡಿದ್ದೆ; ಎಸ್.ಟಿ. ಸೋಮಶೇಖರ್

    ಬೆಂಗಳೂರು : ಬಿಜೆಪಿ ಪಕ್ಷ ಮೊದಲು ಜಾಮೂನು ನೀಡಿ ಬಳಿಕ ವಿಷ ನೀಡುತ್ತಾರೆ ಎಂಬ ಹೇಳಿಕೆ ನನ್ನ ವೈಯಕ್ತಿವಾಗಿ ಇರಲಿಲ್ಲ. ಸಮ್ಮಿಶ್ರ ಸರ್ಕಾರದಿಂದ ಹೊರಬಂದ ಶಾಸಕರ ಪರವಾಗಿ ಹೇಳಿಕೆ ನೀಡಿದ್ದೆನೆ ಎಂದು ಶಾಸಕ ಎಸ್.ಟಿ. ಸೋಮಶೇಖರ್, ಸ್ಪಷ್ಟಪಡಿಸಿದ್ದಾರೆ.
    ಮೈಸೂರು ರಸ್ತೆ ಕುಂಬಳಗೂಡು ಪೊಲೀಸ್ ಠಾಣೆ ನೂತನ ಕಟ್ಟಡ ಉದ್ಘಾಟನೆ ಸಮಯದಲ್ಲಿ ಎಸ್.ಟಿ. ಸೋಮಶೇಖರ್, ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

    ಬಿಜೆಪಿ ಸೇರುವಾಗ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ನೀಡಿದ್ದ ಅಶ್ವಾಸನೆಗಳನ್ನು ಈಡೇರಿಸಿಲ್ಲ. ಅದೇ ರೀತಿ ಸಮಿಶ್ರ ಸರ್ಕಾರದಿಂದ ಹೊರಬಂದು ಬಿಜೆಪಿಗೆ ಬಂಬಲ ನೀಡಿದಾಗ ಶಂಕರ್, ಎಚ್. ನಾಗೇಶ್ ಸಚಿವರಾಗಿದ್ದರು. ಮತ್ತೆ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಇದೇ ರೀತಿ
    ಪಕ್ಷ ಬಿಟ್ಟು ಬಿಜೆಪಿ ಸೇರಿದ್ದ ಕೆಲವರಿಗೆ ಮಂತ್ರಿ ಮತ್ತು ಶಾಸಕ ಸ್ಥಾನವೇ ಸಿಗಲಿಲ್ಲ. ಹಾಗಾಗಿ ಎಲ್ಲ ಪರವಾಗಿ ಜಾಮೂನು ನೀಡಿ ಬಳಿಕ ವಿಷ ನೀಡುತ್ತಾರೆ ಎಂಬ ಹೇಳಿಕೆ ನೀಡಿದೆ.ಇದರಲ್ಲಿ ವೈಯಕ್ತಿಕ ಅಭಿಪ್ರಾಯ ಇರಲಿಲ್ಲ ಎಂದು ಸೋಮಶೇಖರ್ ತಿಳಿಸಿದರು.

    ಗ್ಯಾರಂಟಿ ಯೋಜನೆಗಳ ಬಗ್ಗೆ ಕ್ಷೇತ್ರದ ಜನತೆಗೆ ಕರೆ ಮಾಡಿ ಖಚಿತಪಡಿಸಿಕೊಳ್ಳುತ್ತಿದ್ದೆನೆ. ಇದು ಬಿಜೆಪಿಯ ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಯೋಜನೆಗಳು ಜನರಿಗೆ ತಲುಪಬೇಕು ಎಂಬ ದೃಷ್ಟಿಯಷ್ಟೆ ನನ್ನದು. ಮೈಸೂರು ಉಸ್ತುವಾರಿ ಸಚಿವನಾಗಿದ್ದ ವೇಳೆ ಕೇವಲ 3 ಕ್ಷೇತ್ರದಲ್ಲ ಮಾತ್ರ ಬಿಜೆಪಿ ಪ್ರಾಬಲ್ಯ ಇತ್ತು. ಇದೀಗ ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಸಂಘಟನೆ ಆಗುತ್ತಿದೆ.

    ಯಶವಂತಪುರ ಕ್ಷೇತ್ರಕ್ಕೆ ಮಾತ್ರ ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್.ಟಿ. ಸೋಮಶೇಖರ್, ಸಮ್ಮಿಶ್ರ ಸರ್ಕಾರದಲ್ಲಿ 8 ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ಆ ಸಮಯದಲ್ಲಿ ಮಲತಾಯಿ ಧೋರಣೆ ಮಾಡಲಾಗಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಸಹ ಅದನ್ನೇ ಮಾಡುತ್ತಿದೆ. ಈ ಎಲ್ಲವೂ ದಾಖಲೆಯಲ್ಲಿ ಇದ್ದು, ಹೊಸದೇನು ಇಲ್ಲ ಎಂದರು.

    ಚಾಮುಂಡಿ ಬೆಟ್ಟದಲ್ಲೇ ಬರೆಯಲಿ :

    ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಮ್ಮ ಪುಸ್ತಕದಲ್ಲಿ ಸಮ್ಮಿಶ್ರ ಸರ್ಕಾರ ಉರುಳುವಾಗ ಕೆಲ ಶಾಸಕರು ಹಣ ಪಡೆದ ಬಗ್ಗೆ ಉಲ್ಲೇಖಿಸುವ ವಿಷಯ ಉತ್ತರಿಸಿದ ಸೋಮಶೇಖರ್, ಧರ್ಮಸ್ಥಳ, ಚಾಮುಂಡಿ ಬೆಟ್ಟದಲ್ಲಿ ಕುಳಿತುಕೊಂಡು ಅಲ್ಲೇ ಬುಕ್ ಬರೆದು, ಓದಲಿ. ಅವರಿಗೆ ಚಾಮುಂಡಿ ಬೆಟ್ಟಕ್ಕೆ ಹೆಚ್ಚಾಗಿ ಹೋಗುತ್ತಾರಲ್ಲ. ಅಲ್ಲೆ ಕುಳಿತು ಬುಕ್ ಓದಲಿ ಎನ್ನುವ ಮೂಲಕ ವಿಶ್ವನಾಥ್‌ಗೆ ತಿರುಗೇಟು ನೀಡಿದರು.

    ಕಾಲಿಗೆ ಬಿದ್ದ ಎಸ್‌ಟಿಎಸ್ :

    ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಕಾರಿನಿಂದ ಕೆಳಗೆ ಇಳಿಯುತ್ತಿದಂತೆ ಸೋಮಶೇಖರ್ ಸಚಿವರ ಕಾಲಿಗೆ ಬಿದ್ದು ನಮಸ್ಕಾರಿಸಿದ ದೃಶ್ಯ ಅಚ್ಚರಿಗೆ ಕಾರಣವಾಗಿತ್ತು.

    ಶೇ.100 ಸೂಕ್ತವಾಗಿದೆ :

    ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ಎಸ್. ವಿಜಯೇಂದ್ರ ಅಯ್ಕೆ ಸರಿಯಾಗಿದೆ. ಇಂದಿನ ಪರಿಸ್ಥಿತಿಗೆ ಅವರ ಆಯ್ಕೆ ನೂರಕ್ಕೆ ನೂರರಷ್ಟು ಸರಿ ಇದೆ. ವಿಜಯೇಂದ್ರ ಅವರು ರಾಜ್ಯ ಉಪಾಧ್ಯಕ್ಷರಾಗಿದ್ದ
    ಅನುಭವ ಇದೆ. ಎಲ್ಲ ಜಿಲ್ಲಾ ನಾಯಕರು ಪರಿಚಯವಿದೆ. ಮುಂದಿನ ಚುನಾವಣೆಗೆ ಒಳ್ಳೆಯ ಬೆಳವಣಿಗೆ ಎಂದರು.
    ವಿಜಯೇಂದ್ರ ಆಯ್ಕೆ ಕುಟುಂಬ ರಾಜಕೀಯ ಅಲ್ಲ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಚುನಾವಣೆಗೆ ನಿಲ್ಲಲ್ಲ ಎಂದ ಮೇಲೆ ಅವರ ಮಗನಿಗೆ ಅಧಿಕಾರ ನೀಡಿದ್ದಾರೆ. ಈಗ ವಿಜಯೇಂದ್ರ ಶಾಸಕರಾಗಿದ್ದಾರೆ ಅಷ್ಟೇ. ಬಿ.ವೈ. ರಾಘವೇಂದ್ರ ಹಿಂದೆ ಲೋಕಸಭಾ ಸದಸ್ಯರಾಗಿದ್ದರು.
    15 ದಿನಗಳ ಹಿಂದೆಯೇ ಠಾಣೆ ನೂತನ ಕಟ್ಟಡ ಉದ್ಘಾಟನೆಗೆ ದಿನಾಂಕ ನಿಗದಿ ಆಗಿತ್ತು. ಇದು ನನ್ನ ಕ್ಷೇತ್ರದ ಕಾರ್ಯಕ್ರಮ. ನನ್ನ ಹಾಜರು ಮುಖ್ಯ. ಈ ಬಗ್ಗೆ ವಿಜಯೇಂದ್ರ ಗಮನಕ್ಕೆ ತಂದಿದ್ದೆನೆ. ಮೈಸೂರು ಜಿಲ್ಲಾ ಉಸ್ತುವಾರಿ ಮಾಡಿದ್ದೆ ವಿಜಯೇಂದ್ರ ಅವರೊಂದಿನ ಸಂಬಂಧ ಚೆನ್ನಾಗಿದೆ ಎಂದು ಸೋಮಶೇಖರ್ ತಿಳಿಸಿದರು.

    ಪಕ್ಷಕ್ಕೆ ಸೇರುವರ ದೊಡ್ಡ ಪಟ್ಟಿಯೇ ಇದೆ :

    ಇದೇ ವೇಳೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿ, ಎಸ್.ಟಿ. ಸೋಮಶೇಖರ್ ಜತೆಗಿನ ವೈಯಕ್ತಿಕ ಸಂಬಂಧವೇ ಬೇರೆ. ರಾಜಕೀಯ ಸಂಬಂಧವೇ ಬೇರೆ. ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು. ಅದು ರಾಜಕೀಯವಷ್ಟೇ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವ ಪಟ್ಟಿ ದೊಡ್ಡದು ಇದೆ. ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಆಯ್ಕೆ ಅವರ ಪಕ್ಷಕ್ಕೆ ಎಷ್ಟು ಲಾಭ ಎಂಬುದು ನಮಗೆ ತಿಳಿದಿಲ್ಲ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts