More

    ಆರೂವರೆ ವರ್ಷದಿಂದ ಲಾಕ್‌ಡೌನ್‌ನಲ್ಲಿರುವೆ!

    ನವದೆಹಲಿ: ಕರೊನಾ ಮಹಾಮಾರಿಯ ಹಾವಳಿ ಶುರುವಾದ ಬಳಿಕ ಕಳೆದ 2 ತಿಂಗಳಿನಿಂದ ಇಡೀ ದೇಶವೇ ಲಾಕ್‌ಡೌನ್‌ನಲ್ಲಿದೆ. ಆದರೆ ಇಲ್ಲೊಬ್ಬರು ಕಳೆದ ಆರೂವರೆ ವರ್ಷಗಳಿಂದ ಲಾಕ್‌ಡೌನ್‌ನಲ್ಲಿದ್ದಾರಂತೆ! ಹೌದು, ಅವರೇ ಟೀಮ್ ಇಂಡಿಯಾದ ಮಾಜಿ ವೇಗಿ ಶಾಂತಕುಮಾರನ್ ಶ್ರೀಶಾಂತ್!

    2013ರ ಐಪಿಎಲ್ ವೇಳೆ ಭುಗಿಲೆದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ಎಸ್. ಶ್ರೀಶಾಂತ್ ಅವರನ್ನು ಬಿಸಿಸಿಐ ನಿಷೇಧಿಸಿತು. ಇದರಿಂದಾಗಿ ಶ್ರೀಶಾಂತ್, ಕಳೆದ ಆರೂವರೆ ವರ್ಷಗಳಿಂದ ಕ್ರಿಕೆಟ್ ಆಡದಿರುವ ಸಮಯ ತಮ್ಮ ಪಾಲಿಗೆ ‘ಲಾಕ್‌ಡೌನ್’ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: ಮನೆಯಲ್ಲೇ ಪೋಲ್‌ವಾಲ್ಟ್! ಈಗ ಮಹಿಳೆಯರ ಸರದಿ

    ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾದ ಬಳಿಕ ಶ್ರೀಶಾಂತ್ ಸಿನಿಮಾ, ಕಿರುತೆರೆಗಳಲ್ಲಿ ಬಿಜಿಯಾಗಿದ್ದರು. ಆದರೆ ತಮ್ಮ ನೆಚ್ಚಿನ ಕ್ರೀಡೆಯಿಂದ ದೂರವಿದ್ದ ಕಾರಣದಿಂದಾಗಿ ಅವರು ಇದನ್ನು ತಮ್ಮ ಪಾಲಿನ ‘ಲಾಕ್‌ಡೌನ್’ ಎಂದೇ ಪರಿಗಣಿಸಿದ್ದಾರೆ. ನಿಷೇಧದಿಂದಾಗಿ ಅವರು ಮೈದಾನಕ್ಕಿಳಿದು ಅಭ್ಯಾಸ ನಡೆಸುವಂತಿಲ್ಲ. ಆದರೆ ಕೊಚ್ಚಿಯ ತಮ್ಮ ಮನೆಯಲ್ಲೇ ಒಳಾಂಗಣ ಕ್ರಿಕೆಟ್ ಅಭ್ಯಾಸ ವ್ಯವಸ್ಥೆಗಳನ್ನು ಮಾಡಿಕೊಂಡಿರುವ ಶ್ರೀಶಾಂತ್, ದಿಗ್ಬಂಧನದ ವೇಳೆ ಅಲ್ಲೇ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ.

    ಸೆಪ್ಟೆಂಬರ್‌ನಲ್ಲಿ ನಿಷೇಧ ಅಂತ್ಯ
    2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಶಾಂತ್‌ಗೆ ಬಿಸಿಸಿಐ ಮೊದಲಿಗೆ ಆಜೀವ ನಿಷೇಧ ಹೇರಿತ್ತು. ಬಳಿಕ ಸುಪ್ರೀಂ ಕೋರ್ಟ್ ಸೂಚನೆಯ ಮೇರೆಗೆ ಈ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಿದ್ದ ಬಿಸಿಸಿಐ, ನಿಷೇಧವನ್ನು 7 ವರ್ಷಗಳಿಗೆ ತಗ್ಗಿಸಿತ್ತು. ಇದರಿಂದ ಶ್ರೀಶಾಂತ್ ಮೇಲಿನ ನಿಷೇಧ ಮುಂದಿನ ಸೆಪ್ಟೆಂಬರ್ 13ರಂದು ಕೊನೆಗೊಳ್ಳಲಿದೆ. 37ನೇ ವಯಸ್ಸಿನಲ್ಲೂ ಮರಳಿ ಮೈದಾನಕ್ಕಿಳಿಯುವ ಉತ್ಸಾಹವನ್ನು ಬಿಟ್ಟುಕೊಡದ ಶ್ರೀಶಾಂತ್, ಮತ್ತೆ ಭಾರತ ತಂಡದ ಪರ ಆಡುವ ಛಲ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: VIDEO: ಇನ್‌ಸ್ಟಾಗ್ರಾಂ ವಿಡಿಯೋಗಳಲ್ಲಿ ಶಮಿ ಪತ್ನಿ ಮಿಂಚಿಂಗ್….!

    ‘30ನೇ ವಯಸ್ಸಿನಲ್ಲಿ ನಾನು ಕೊನೆಯ ಕ್ರಿಕೆಟ್ ಪಂದ್ಯ ಆಡಿದ್ದೆ. ನಿಷೇಧ ಮುಕ್ತಗೊಂಡು ಮರಳಿ ಕಣಕ್ಕಿಳಿದಾಗ ನಾನು ಮತ್ತೆ ಅದೇ 30ನೇ ವಯಸ್ಸಿನ ಉತ್ಸಾಹದೊಂದಿಗೆ ಆಡಲು ಬಯಸಿದ್ದೇನೆ. 25ನೇ ವಯಸ್ಸಿನ ಕ್ರಿಕೆಟಿಗರ ಫಿಟ್ನೆಸ್ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ನನ್ನ ಮನೆಯ ಒಂದು ಮಹಡಿ ಪೂರ್ತಿ ಫಿಟ್ನೆಸ್ ಪರಿಕರಗಳೇ ತುಂಬಿವೆ’ ಎಂದು ಶ್ರೀಶಾಂತ್ ಹೇಳಿದ್ದಾರೆ.

    ಇದನ್ನೂ ಓದಿ: ಐಪಿಎಲ್ ಯಾಕೆ ಸ್ಪೆಷಲ್? ಕೊಹ್ಲಿ ಕೊಡ್ತಾರೆ ಕಾರಣ

    ಎಂಜಲು ಬಳಸದಿದ್ದರೆ ಬೌಲರ್‌ಗೆ ಕಷ್ಟ
    ಕ್ರಿಕೆಟ್ ಈಗಾಗಲೆ ಬ್ಯಾಟ್ಸ್‌ಮನ್ ಆಟವಾಗಿ ಬಹುತೇಕ ಪರಿವರ್ತನೆಗೊಂಡಿದೆ. ಹೀಗಾಗಿ ಕರೊನಾ ವೈರಸ್ ಭೀತಿಯಿಂದಾಗಿ ಚೆಂಡಿಗೆ ಎಂಜಲು ಅಥವಾ ಬೆವರು ಹಚ್ಚಿ ಪಾಲಿಶ್ ಮಾಡದಿದ್ದರೆ, ರಿವರ್ಸ್ ಸ್ವಿಂಗ್ ಪಡೆಯುವುದು ಬಹಳ ಕಷ್ಟ. ಹೀಗಾಗಿ ಮತ್ತೆ ಕ್ರಿಕೆಟ್ ಆಟ ಆರಂಭಗೊಂಡಾಗ ಇದು ಮುಂದುವರಿಯಬೇಕು. ಯಾರೂ ಕರೊನಾ ಭೀತಿಯ ನಡುವೆ ಕ್ರಿಕೆಟ್ ಆಡಲಾರರು. ಯಾವ ಸೋಂಕಿತರಿಗೂ ಆಡುವ ಅವಕಾಶ ಲಭಿಸದು. ಹೀಗಾಗಿ ಸೋಂಕಿನ ಭೀತಿ ಇಲ್ಲದೆ ಆಡುವ ಕಾರಣ, ಚೆಂಡಿಗೆ ಎಂಜಲು-ಬೆವರು ಹಚ್ಚಲು ಅವಕಾಶ ಮಾಡಿಕೊಡಬೇಕೆಂದು ಶ್ರೀಶಾಂತ್ ಅಭಿಪ್ರಾಯಪಟ್ಟಿದ್ದಾರೆ. ಖಾಲಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಡುವ ಪ್ರಸ್ತಾಪಗಳಿಗೆ ಕೇರಳ ವೇಗಿ ಸಹಮತ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts