More

    ‘ನನಗೆ ಹಿಂದಿ ಗೊತ್ತಿಲ್ಲ’: ತಮಿಳುನಾಡು ಜಡ್ಜ್

    ಚೆನ್ನೈ: ಭಾಷಾಭಿಮಾನ ಮೆರೆಯುವುದರಲ್ಲಿ ತಮಿಳರು ಮೊದಲಿನಿಂದಲೂ ಮುಂದೆ ಇರುತ್ತಾರೆ. ತಮಿಳು ಭಾಷೆಗೆ ಧಕ್ಕೆಯಾಗುತ್ತದೆ ಎಂದರೆ ಅವರು ಯಾವುದೇ ಹುದ್ದೆಯಲ್ಲಿದ್ದರೂ, ಇಲ್ಲದಿದ್ದರೂ ಹಿಂಜರಿಯುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ..

    ಇದನ್ನೂ ಓದಿ: ‘ಬಿಜೆಪಿ ಪ್ರಣಾಳಿಕೆಗೆ ಸಲಹೆ ನೀಡಿ..’ಯುವಜನತೆಗೆ ಪ್ರಧಾನಿ ಮೋದಿ ಸಲಹೆ

    ಕೇಂದ್ರ ಸರ್ಕಾರವು ಇತ್ತೀಚೆಗೆ ಐಪಿಸಿ, ಸಿಆರ್‌ಪಿಸಿ ಮತ್ತು ಎವಿಡೆನ್ಸ್ ಕಾಯ್ದೆಗಳಿಗೆ ತಿದ್ದುಪಡಿ ಮಾಡಿದ ನಂತರ ಅವುಗಳಿಗೆ ಹಿಂದಿ ನಾಮಕರಣ ಮಾಡಿ ಮೂರೂ ಕಾಯ್ದೆ ಜಾರಿಗೆ ತಂದಿತ್ತು. ಆದರೆ ಮದ್ರಾಸ್ ಹೈಕೋರ್ಟ್‌ನಲ್ಲಿ ವಿಚಾರಣೆಯೊಂದರ ವೇಳೆ ನ್ಯಾಯಾಧೀಶರೊಬ್ಬರು ಈ ಹಿಂದಿ ಹೆಸರು ಹೇಳಲು ನಿರಾಕರಿಸಿದ ಪ್ರಸಂಗ ನಡೆದಿದೆ.

    ಮಂಗಳವಾರ ನ್ಯಾಯಾಲಯ ಕಲಾಪದಲ್ಲಿ ಹಿಂದಿ ಹೆಸರುಳ್ಳ 3 ಕಾನೂನು (ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಹಾಗೂ ಭಾರತೀಯ ಸಾಕ್ಷ್ಯ ಸಂಹಿತಾ) ಬಗ್ಗೆ ಪ್ರಸ್ತಾಪವಾಯಿತು.

    ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಎನ್. ಆನಂದ್ ವೆಂಕಟೇಶ್, ‘ಎಲ್ಲ 3 ಕಾಯ್ದೆಗಳನ್ನು ಈ ಹಿಂದಿನ ಇಂಗ್ಲಿಷ್ ಭಾಷೆಯಲ್ಲೇ ಉಚ್ಚರಿಸುವೆ. ಐಪಿಸಿಯನ್ನು ಐಪಿಸಿ ಎಂದೇ ಕರೆಯುವೆ. ಏಕೆಂದರೆ ನನಗೆ ಅದು (ಹಿಂದಿ) ತಿಳಿಯದ ಭಾಷೆಯಾಗಿದೆ’ ಎಂದರು.
    ಇನ್ನು ಸಹಾಯಕ ಅಭಿಯೋಜಕ ಎ. ದಾಮೋದರನ್‌ಗೆ ಕೂಡಾ ಹಿಂದಿ ಉಚ್ಚರಿಸಲು ಕಷ್ಟವಾಗಿದ್ದು ಕಂಡುಬಂತು.

    ಷೇರು ಮಾರುಕಟ್ಟೆಯಲ್ಲಿ ಸೆನೆಕ್ಸ್‌, ನಿಫ್ಟಿ ಕುಸಿತ: ಋಣಾತ್ಮಕ ಪರಿಣಾಮ ಬೀರಿದ ವಿದೇಶಿ ನಿಧಿಗಳ ಹೊರಹರಿವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts