More

    ಹಣಕಾಸು ಸಚಿವರ ಬಳಿಯೇ ದುಡ್ಡಿಲ್ಲವಂತೆ! ಬಿಜೆಪಿ ಆಫರ್​ ತಿರಸ್ಕರಿಸಿದ ನಿರ್ಮಲಾ ಸೀತಾರಾಮನ್​

    ನವದೆಹಲಿ: ದೇಶದ ಆರ್ಥಿಕತೆಯನ್ನು ನಿರ್ವಹಿಸುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಳಿ ಲೋಕಸಭಾ ಚುನಾವಣೆಗೆ ಖರ್ಚು ಮಾಡುವಷ್ಟು ದುಡ್ಡಿಲ್ಲವಂತೆ! ಇದೇ ಕಾರಣಕ್ಕಾಗಿ ತಮ್ಮ ಪಕ್ಷ ನೀಡಿದ ಆಫರ್ ಅನ್ನು ತಿರಸ್ಕರಿಸಿದ್ದಾಗಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

    ಟೈಮ್ಸ್​ ನೌ ಶೃಂಗಸಭೆ 2024 ಯಲ್ಲಿ ಮಾತನಾಡಿದ ಸೀತಾರಾಮನ್​, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಪಕ್ಷವು ನನಗೆ ಆಫರ್​ ನೀಡಿತು. ಈ ಬಗ್ಗೆ ಹತ್ತು ದಿನಗಳ ಕಾಲ ಯೋಚಿಸಿ, ಹಿಂದಿರುಗಿ ಹೋಗಿ, ನನ್ನಿಂದ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ನನ್ನತ್ರ ಚುನಾವಣೆಗೆ ಖರ್ಚು ಮಾಡುವಷ್ಟು ಹಣವಿಲ್ಲದ ಕಾರಣ ನಾನು ಸ್ಫರ್ಧೆ ಮಾಡುವುದಿಲ್ಲ ಎಂದು ಹೇಳಿಬಂದೆ ಎಂದು ವಿತ್ತಸಚಿವೆ ಬಹಿರಂಗಪಡಿಸಿದರು.

    ಆಂಧ್ರಪ್ರದೇಶ ಅಥವಾ ತಮಿಳುನಾಡಿನಿಂದ ಲೋಕಸಭೆಗೆ ಸ್ಪರ್ಧಿಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ಆಫರ್​ ನೀಡಿ, ಆಯ್ಕೆಯನ್ನು ನನಗೇ ಬಿಟ್ಟಿದ್ದರು. ಆದರೆ, ಬಿಜೆಪಿ ಬಳಸುವ ವಿವಿಧ ಗೆಲುವಿನ ಮಾನದಂಡಗಳು ಮತ್ತು ಆ ಪಾತ್ರಕ್ಕೆ ತನ್ನ ಸೂಕ್ತತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ನನ್ನ ಸಂಬಳ, ನನ್ನ ಗಳಿಕೆ ಮತ್ತು ನನ್ನ ಉಳಿತಾಯ ನನ್ನದೇ ಹೊರತು ಭಾರತದ ಕ್ರೋಡೀಕರಿಸಿದ ನಿಧಿ ಅಲ್ಲ ಎಂದು ಸೀತಾರಾಮನ್ ಹೇಳಿದ್ದಾರೆ.

    ನಿರ್ಮಲಾ ಸೀತಾರಾಮನ್​ ಕರ್ನಾಟಕದಿಂದ ಆಯ್ಕೆಯಾದ ರಾಜ್ಯಸಭಾ ಸದಸ್ಯೆಯಾಗಿದ್ದೂ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಿಯೂಷ್ ಗೋಯೆಲ್, ಭೂಪೇಂದರ್ ಯಾದವ್, ರಾಜೀವ್ ಚಂದ್ರಶೇಖರ್, ಮನ್ಸುಖ್ ಮಾಂಡವಿಯಾ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಹಾಲಿ ರಾಜ್ಯಸಭಾ ಸದಸ್ಯರನ್ನು ಕಣಕ್ಕಿಳಿಸುವ ಬಿಜೆಪಿಯ ನಿರ್ಧಾರವನ್ನು ಇದೇ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್​ ಅವರು ಹೈಲೈಟ್ ಮಾಡಿದರು.

    ಇದಲ್ಲದೆ, ಚುನಾವಣೆಗೆ ಸ್ಪರ್ಧಿಸುತ್ತಿರುವ ಇತರೆ ಅಭ್ಯರ್ಥಿಗಳನ್ನು ಬೆಂಬಲಿಸುವ ಬದ್ಧತೆಯನ್ನು ಇದೇ ಸಂದರ್ಭದಲ್ಲಿ ಸೀತಾರಾಮನ್​ ದೃಢಪಡಿಸಿದರು. ರಾಜೀವ್ ಚಂದ್ರಶೇಖರ್ ಅವರ ಪರವಾಗಿ ಪ್ರಚಾರ ಮಾಡುವ ಮತ್ತು ಮಾಧ್ಯಮ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವರ ಚುನಾವಣಾ ಯೋಜನೆಗಳನ್ನು ತೆರೆದಿಟ್ಟರು. (ಏಜೆನ್ಸೀಸ್​)

    ಇದು ಕ್ಯಾಪ್ಟನ್ಸಿ ಅಂದ್ರೆ! ಪಂದ್ಯದ ನಡುವೆ ರೋಹಿತ್​ ಮಾಡಿದ ಮೋಡಿಗೆ ಹಾರ್ದಿಕ್​ ಕಕ್ಕಾಬಿಕ್ಕಿ, ನೋಡಿ ಕಲಿ ಅಂದ್ರು ಫಾನ್ಸ್

    ಗಲ್ಲಿ ಕ್ರಿಕೆಟ್​ ಆಟಗಾರರು ಕೂಡ ಇಂಥಾ ಮಿಸ್ಟೇಕ್​ ಮಾಡಲ್ಲ! ತುಂಬಾ ಚರ್ಚೆಯಾಗ್ತಿದೆ ಹಾರ್ದಿಕ್​ ಮಾಡಿದ ಈ ತಪ್ಪು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts