More

    ವಿವಾದಿತ ಭೂಮಿಯ ರಾಮ ಮಂದಿರಕ್ಕೆ ದುಡ್ಡು ಕೊಡಲ್ಲ: ಸಿದ್ದರಾಮಯ್ಯ

    ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಳ್ಳುತ್ತಿರುವುದು ವಿವಾದಿತ ಜಮೀನಿನಲ್ಲಿ. ಹೀಗಾಗಿ, ನಾನು ಅಲ್ಲಿ ಮಂದಿರ ನಿರ್ಮಾಣ ಮಾಡುವುದಕ್ಕೆ ದೇಣಿಗೆ ನೀಡದಿರಲು ತೀರ್ಮಾನಿಸಿದ್ದೇನೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ದೆಹಲಿಯಲ್ಲಿ ಹೇಳಿದ್ದಾರೆ.

    ಸುದ್ದಿಗಾರರ ಜತೆ ಮಾತನಾಡಿದ ಅವರು, ದೇಣಿಗೆ ಕೇಳಿಕೊಂಡು ನನ್ನ ಮನೆಗೂ ಕೆಲ ಮಂದಿ ಬಂದಿದ್ದರು. ಆದರೆ, ವಿವಾದಿತ ಜಮೀನಿನಲ್ಲಿ ನಿರ್ಮಾಣ ಆಗುತ್ತಿರುವ ಮಂದಿರಕ್ಕೆ ದುಡ್ಡು ಕೊಡಲ್ಲ. ಬೇರೆ ಎಲ್ಲಿಯಾದರೂ ನಿರ್ಮಾಣ ಮಾಡುವುದಿದ್ದರೆ ಕೊಡುತ್ತೇನೆ ಎಂದು ಹೇಳಿ ಕಳಿಸಿದೆ ಎಂದು ತಿಳಿಸಿದರು.

    ಅಯೋಧ್ಯೆಯದ್ದು ವಿವಾದಿತ ಭೂಮಿ ಅಲ್ಲ, ಅದನ್ನು ಸುಪ್ರೀಂಕೋರ್ಟ್ ಇತ್ಯರ್ಥಪಡಿಸಿದೆಯಲ್ಲ ಎಂಬ ಪ್ರತ್ರಕರ್ತರ ಪಶ್ನೆಗೆ, “ಕೋರ್ಟ್ ಇತ್ಯರ್ಥಪಡಿಸಿರಬಹುದು. ಆದರೆ ವಿವಾದ ಹಾಗೆಯೇ ಇದೆ. ನಮ್ಮೂರಲ್ಲಿ ಮಂದಿರ ಕಟ್ಟಲಿ. ಅಥವಾ ನಿಮ್ಮೂರಲ್ಲೇ ಕಟ್ಟಲಿ. ಅದಕ್ಕೆ ನಾನು ನೆರವು ನೀಡುತ್ತೇನೆ. ಅಷ್ಟಕ್ಕೂ, ಅಯೋಧ್ಯೆಯಲ್ಲೇ ಮಂದಿರ ಕಟ್ಟಬೇಕು ಎಂಬ ಹಠ ಏಕೆ? ಹೀಗಾಗಿಯೇ ಅಯೋಧ್ಯೆ ಮಂದಿರಕ್ಕೆ ದುಡ್ಡು ಕೊಡಲಾರೆ” ಎಂದು ಸ್ಪಷ್ಟನೆ ನೀಡಿದರು.

    ಅಯೋಧ್ಯೆಯದ್ದು ಆರ್.ಎಸ್.ಎಸ್.ನವರ ರಾಮ ಮಂದಿರ ಎಂದೆಲ್ಲಾ ನಾನು ಹೇಳಲಾರೆ. ದೇವರಿಗೆ ಆ ರೀತಿಯ ಹಣೆಪಟ್ಟಿ ಕಟ್ಟುವುದಿಲ್ಲ. ಈಗ ಕಟ್ಟುತ್ತಿರುವ ಮಂದಿರಕ್ಕೆ ಬಿಜೆಪಿ, ಆರ್.ಎಸ್.ಎಸ್.ನವರು ಲೆಕ್ಕ ಕೊಟ್ಟಿದ್ದಾರಾ? ಎಷ್ಟು ಸಂಗ್ರಹ ಆಗಿದೆ ಎಂದು ಏಕೆ ಮಾಹಿತಿ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.

    ‘3 ದಿನ ನಿಂಗೆ, 3 ದಿನ ನಂಗೆ​’ ಇಬ್ಬರು ಹೆಂಡತಿಯರ ಮುದ್ದಿನ ಗಂಡನ ಹಿಂದೆ ಬಿದ್ದ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts