More

    ಗಣರಾಜ್ಯೋತ್ಸವದಲ್ಲಿ ಕುಸಿದುಬಿದ್ದ ತೆಲಂಗಾಣ ಮಾಜಿ ಡಿಸಿಎಂ

    ಹೈದರಾಬಾದ್​: ತೆಲಂಗಾಣ ಭವನದಲ್ಲಿ ಇಂದು ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ತೆಲಂಗಾಣ ಮಾಜಿ ಉಪಮುಖ್ಯಮಂತ್ರಿ ಮಹಮೂದ್ ಅಲಿ ಪ್ರಜ್ಞೆ ತಪ್ಪಿ ಬಿದ್ದಿರುವ ಘಟನೆ ನಡೆದಿದೆ. ದೇಶಾದ್ಯಂತ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಭಾರತ ಇಂದು ತನ್ನ 75ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ.

    ಇದನ್ನೂ ಓದಿ:30 ಸೆಕೆಂಡ್‌ಗಳಲ್ಲಿ 10 ಮೆಣಸಿನಕಾಯಿ ತಿಂದು ವಿಶ್ವದಾಖಲೆ ನಿರ್ಮಿಸಿದ ಭೂಪ

    ಇದೇ ವೇಳೆ ತೆಲಂಗಾಣದ ಮಾಜಿ ಉಪ ಮುಖ್ಯಮಂತ್ರಿ ಮಹಮೂದ್ ಅಲಿ ಅವರ ಆರೋಗ್ಯ ಹದಗೆಟ್ಟಿತ್ತು. ತೆಲಂಗಾಣ ಭವನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

    ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ವೇಳೆ ಅಲಿ ಇದ್ದಕ್ಕಿದ್ದಂತೆ ಮೂರ್ಛೆ ಹೋಗಿದ್ದರು. ನೀರು ಕೊಡಿ ಎಂದು ಜನರು ಕೈಮುಗಿದುಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ದೆಹಲಿಯಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಪರೇಡ್​ನಲ್ಲಿ ವಾಯುಪಡೆಯ 51 ವಿಮಾನಗಳು ಫ್ಲೈಪಾಸ್ಟ್‌ನಲ್ಲಿ ಭಾಗವಹಿಸಿವೆ.

    ಇವುಗಳಲ್ಲಿ 29 ಯುದ್ಧ ವಿಮಾನಗಳು, 7 ಸಾರಿಗೆ ವಿಮಾನಗಳು, 9 ಹೆಲಿಕಾಪ್ಟರ್‌ಗಳು ಮತ್ತು ಒಂದು ಪಾರಂಪರಿಕ ವಿಮಾನಗಳು ಸೇರಿವೆ. ಫ್ರೆಂಚ್ ಸೇನೆಯ ರಫೇಲ್ ಕೂಡ ಮೊದಲ ಬಾರಿಗೆ ಫ್ಲೈಪಾಸ್ಟ್‌ನಲ್ಲಿ ಭಾಗವಹಿಸಿವೆ.

    ಗಣರಾಜ್ಯೋತ್ಸವದಂದು ಫ್ರಾನ್ಸ್‌ನ 95 ಸೈನಿಕರು, 33 ಸೈನಿಕರ ಬ್ಯಾಂಡ್, ಫ್ರೆಂಚ್ ವಾಯುಪಡೆಯ ರಫೇಲ್ ಜೆಟ್ ಮತ್ತು ಮಲ್ಟಿರೋಲ್ ಟ್ಯಾಂಕರ್ ಸಾರಿಗೆ ವಿಮಾನಗಳು ಸಹ ಪರೇಡ್‌ನಲ್ಲಿ ಪಾಲ್ಗೊಂಡಿವೆ.

    30 ಸೆಕೆಂಡ್‌ಗಳಲ್ಲಿ 10 ಮೆಣಸಿನಕಾಯಿ ತಿಂದು ವಿಶ್ವದಾಖಲೆ ನಿರ್ಮಿಸಿದ ಭೂಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts