More

    ಎಲ್ಲ ಮಹತ್ಮರ ಸ್ಮರಣೆ ಒಂದೇ ವೇದಿಕೆಯಲ್ಲಾಗಲಿ; ಪುರುಷೋತ್ತಮಾನಂದ ಶ್ರೀಗಳ ಆಶಯ

    ಹಟ್ಟಿಚಿನ್ನದಗಣಿ: ರಾಜ್ಯ ಸರ್ಕಾರ ಆಚರಿಸುತ್ತಿರುವ 31 ಮಹಾತ್ಮರ ದಿನಾಚರಣೆಗಳನ್ನು ಒಂದೇ ವೇದಿಕೆಯಡಿ ಸಾಮರಸ್ಯದಿಂದ ಆಚರಿಸಿದಾಗ ಭಾವೈಕ್ಯತೆಗೆ ಅರ್ಥ ಬರುತ್ತದೆ ಎಂದು ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದ ಶ್ರೀಗಳು ಅಭಿಪ್ರಾಯಪಟ್ಟರು.

    ಹಟ್ಟಿಯ ಲಿಂಗಾವಧೂತ ದೇವಸ್ಥಾನದ ಆವರಣದಲ್ಲಿ ಮಹರ್ಷಿ ಭಗೀರಥ ಜಯಂತಿ ಹಾಗೂ ಉಪ್ಪಾರ ಸಮಾಜದ ಸಮಾವೇಶದಲ್ಲಿ ಶನಿವಾರ ಆಶೀರ್ವಚನ ನೀಡಿದರು. ಶಿಕ್ಷಣ, ಸಂಸ್ಕಾರದಿಂದ ಮಾತ್ರ ಹಿಂದುಳಿದ ವರ್ಗಗಳು ಮುಂದುವರಿಯಲು ಸಾಧ್ಯ. ಹೊಸದುರ್ಗ ಪೀಠದಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಉಚಿತ ಶಿಕ್ಷಣ ಕಲ್ಪಿಸುತ್ತಿದ್ದು ಸದ್ಬಳಕೆ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

    ದೇವದುರ್ಗದ ಮಲದಕಲ್ಲಿನ ಬಸವರಾಜ ರಾಜಗುರು ಸ್ವಾಮೀಜಿ ಮಾತನಾಡಿ, ಯಾವ ಮಹಾತ್ಮರು ಮದ್ಯ-ಮಾಂಸ ಸೇವಿಸಿ ಎಂದು ಬೋಧಿಸಿಲ್ಲ. ಮಹಾತ್ಮರ ಆದರ್ಶಗಳನ್ನು ಬೋಧನೆಗೆ ಸೀಮಿತವಾಗಿರಿಸಿ, ದುಶ್ಚಟಗಳನ್ನು ಮಾಡುತ್ತ ಯುವಪೀಳಿಗೆ ಹಾಳಾಗುತ್ತಿರುವುದು, ಮಹಾತ್ಮರಿಗೆ ಮಾಡುವ ಅನ್ಯಾಯ ಎಂದು ಹೇಳಿದರು.

    ಶಾಸಕ ಡಿ.ಎಸ್.ಹೂಲಗೇರಿ, ಹಟ್ಟಿಚಿನ್ನದಗಣಿ ಕಂಪನಿ ನಿಗಮದ ಅಧ್ಯಕ್ಷ ಮಾನಪ್ಪ ಡಿ.ವಜ್ಜಲ್, ಉಪ್ಪಾರ ನಿಗಮದ ಅಧ್ಯಕ್ಷ ಗಿರೀಶ್ ಉಪ್ಪಾರ್, ಉಪ್ಪಾರ ಸಮಾಜದ ಮಹಿಳಾ ಘಟಕದ ರಾಜ್ಯಧ್ಯಕ್ಷೆ ಕಮಲಾ ಅಡಿವೆಪ್ಪ ಜೇಡರ್, ಜೆಡಿಎಸ್ ಮುಖಂಡ ಸಿದ್ದು ಬಂಡಿ, ಪಪಂ ಅಧ್ಯಕ್ಷೆ ಪಾರ್ವತಿ ನಿಂಗಪ್ಪ ಮನಗೂಳಿ ಮಾತನಾಡಿದರು.

    ಪಟ್ಟಣದ ಹನುಮಾನ ದೇವಸ್ಥಾನದಿಂದ ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣದ ಮೂಲಕ ಲಿಂಗಾವಧೂತ ದೇವಸ್ಥಾನದವರೆಗೆ ಶ್ರೀಗಳ ಹಾಗೂ ಕುಂಭ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ದಳಪತಿ ಗುಂಡಪ್ಪಗೌಡ ಪೊಲೀಸ್ ಪಾಟೀಲ್, ಪ್ರಥಮ ದರ್ಜೇ ಗುತ್ತೇದಾರ ಶ್ರೀನಿವಾಸ್ ಎಚ್.ಅಮ್ಮಾಪುರ್, ಅಮರಗುಂಡಪ್ಪ ಮೇಟಿ, ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಲೆಕ್ಕಹಾಳ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಭೂಪನಗೌಡ ಪಾಟೀಲ್ ಕರಡಕಲ್, ಜಿಪಂ ಮಾಜಿ ಉಪಾಧ್ಯಕ್ಷ ಪಾಮಯ್ಯ ಮುರಾರಿ, ಹಟ್ಟಿ ಉಪ್ಪಾರ ಸಮಾಜದ ಗೌರವಾಧ್ಯಕ್ಷ ಎನ್.ಸ್ವಾಮಿ ನಾಯಿಕೋಡಿ, ಅಧ್ಯಕ್ಷ ಶ್ರೀನಿವಾಸ್, ಪಪಂ ಸದಸ್ಯ ಬಾಬು ನಾಯಿಕೋಡಿ, ರಮೇಶ್ ಉಳಿಮೇಶ್ವರ, ವೆಂಕೋಬ್ ಪವಾಡೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts