More

    ಗುಡಿಸಲುಮುಕ್ತ ನಿರ್ಮಾಣದ ಗುರಿ: ಶಾಸಕಿ ಕೆ.ಪೂರ್ಣಿಮಾ ಹೇಳಿಕೆ

    ಹಿರಿಯೂರು: ಹಿರಿಯೂರನ್ನು ಗುಡಿಸಲುಮುಕ್ತ ನಗರ ಮಾಡುವ ಜತೆಗೆ ಅರ್ಹರಿಗೆ ಹಕ್ಕುಪತ್ರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕಿ ಕೆ. ಪೂರ್ಣಿಮಾ ಹೇಳಿದರು.

    ನಗರದ ವಿವಿಧೆಡೆ ಭಾನುವಾರ ಹಮ್ಮಿಕೊಂಡಿದ್ದ ವಸತಿ ಯೋಜನೆ ಜಾಗೃತಿ ಸಭೆಯಲ್ಲಿ ಮಾತನಾಡಿ, ಬಡವರ ಕನಸಿನ ಸೂರು ನನಸಾಗಿಸುವ ಕಾಲ ಸನ್ನಿಹಿತವಾಗಿದೆ ಎಂದು ತಿಳಿಸಿದರು.

    ಗೋಪಾಲಪುರ, ತಮಿಳು ಕಾಲೊನಿ, ನಂಜಯ್ಯನಕೊಟ್ಟಿಗೆ ಮತ್ತಿತರ ಕಡೆ ಅನಧಿಕೃತ ಮನೆಗಳಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿದ್ದು, ಇಲ್ಲಿನ ನಿವಾಸಿಗಳಿಗೆ ದಶಕದಿಂದ ಹಕ್ಕುಪತ್ರ ನೀಡಿರಲಿಲ್ಲ. ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದು ಹಕ್ಕುಪತ್ರ ವಿತರಿಸಲು ಆದೇಶಿಸಲಾಗಿದೆ. ಅರ್ಹರು ಸೂಕ್ತ ದಾಖಲೆ ಸಲ್ಲಿಸಿ, ಹಕ್ಕುಪತ್ರ ಪಡೆಯಬೇಕು. ಈ ಕುರಿತು ಜನಜಾಗೃತಿ ಮೂಡಿಸಲಾಗುವುದು ಎಂದರು.

    ರಾಜ್ಯ ಸರ್ಕಾರ ಹಿರಿಯೂರಿಗೆ ಈಗಾಗಲೇ 4448 ಮನೆ ಮಂಜೂರು ಮಾಡಿದ್ದು, ಹಂತ ಹಂತವಾಗಿ ನಗರ-ಗ್ರಾಮೀಣ ಭಾಗದ ಜನರ ಬೇಡಿಕೆ ಈಡೇರಿಸುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ ಎಂದು ತಿಳಿಸಿದರು.

    ಗೊಲ್ಲ ಸಂಘದ ರಾಜ್ಯಾಧ್ಯಕ್ಷ ಡಿ.ಟಿ. ಶ್ರೀನಿವಾಸ್ ಮಾತನಾಡಿ, ಕ್ಷೇತ್ರದಲ್ಲಿ ಜನ ಮೆಚ್ಚುವಂತೆ ಶಾಸಕರು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ಸರ್ವರಿಗೂ ಸರ್ಕಾರದ ಸೌಲಭ್ಯ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.

    ನಗರಸಭೆ ಸದಸ್ಯರಾದ ಅಂಬಿಕಾ ಆರಾಧ್ಯ, ಅಪೂರ್ವ, ಸಣ್ಣಪ್ಪ, ಮಹೇಶ್ ಪಲ್ಲವ, ಸರವಣ, ಬಾಲಕೃಷ್ಣ, ರಾಜಣ್ಣ, ರವಿ, ಗಣೇಶ್, ತಾಪಂ ಮಾಜಿ ಸದಸ್ಯ ಯಶವಂತರಾಜ್, ಸ್ಲಂಬೋರ್ಡ್ ಎಇ ವೀರೇಶ್, ರವಿಕುಮಾರ್, ನಿರಂಜನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts