More

    ಪತ್ನಿಯಿಂದಲೇ ಜೀವನಾಂಶ ಕೇಳಿದ ಭೂಪ: ಮುಂದೇನಾಯ್ತು?

    ಬೆಂಗಳೂರು: ದಂಪತಿಗಳಲ್ಲಿ ವಿರಸ ಮೂಡಿ ವಿಚ್ಛೇದನದವರೆಗೂ ಹೋದಾಗ, ಡೈವೋರ್ಸ್ ಆದಂಥ ಸಂದರ್ಭದಲ್ಲಿ ಪತ್ನಿ ಜೀವನಾಂಶ ಕೇಳುವುದು ಸಹಜ. ಆದರೆ ಇಲ್ಲೊಬ್ಬ ಭೂಪ ಪತ್ನಿಯಿಂದಲೇ ಜೀವನಾಂಶ ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾನೆ.

    ಪತಿ-ಪತ್ನಿ ಇಬ್ಬರ ಸಂಸಾರದಲ್ಲಿ ವಿರಸ ಮೂಡಿದ್ದು, 2017ರಲ್ಲಿ ದಂಪತಿ ನಡುವೆ ಹೊಂದಾಣಿಕೆಯ ಕೊರತೆಯಾಗಿತ್ತು. ಈ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಪತಿ ವಿಚ್ಛೇದನ ಕೋರಿದ್ದ ಹಿನ್ನೆಲೆಯಲ್ಲಿ ಪತ್ನಿಗೆ ಮಾಸಿಕ ಹತ್ತು ಸಾವಿರ ರೂ. ಜೀವನಾಂಶ ನೀಡುವಂತೆ ಕೋರ್ಟ್ ಸೂಚಿಸಿತ್ತು.

    ಇದನ್ನು ಪ್ರಶ್ನಿಸಿ ಪತಿ, ಪತ್ನಿಯಿಂದಲೇ ಜೀವನಾಂಶ ಕೋರಿ ಮೇಲ್ಮನವಿ ಸಲ್ಲಿಸಿದ್ದ. ಈ ಮೇಲ್ಮನವಿಯನ್ನು ಇಂದು ಹೈಕೋರ್ಟ್ ವಜಾಗೊಳಿಸಿದೆ. ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ಈ ಮೇಲ್ಮನವಿಯನ್ನು ವಜಾಗೊಳಿಸಿದ್ದು, ದುಡಿಯಲು ಸಮರ್ಥ ಪತಿ ತನ್ನ ಪತ್ನಿಯಿಂದ ಜೀವನಾಂಶ ಕೇಳುವಂತಿಲ್ಲ ಎಂದು ಆದೇಶ ನೀಡಿದೆ. ಪತ್ನಿಯಿಂದ ಜೀವನಾಂಶ ಪಡೆಯುವುದು ಸೋಮಾರಿತನಕ್ಕೆ ಕಾರಣವಾಗಬಹುದು. ನೈತಿಕ ಸಂಪಾದನೆಯಿಂದ ಪತ್ನಿಯನ್ನು ಸಲಹುವುದು ಪತಿಯ ಕರ್ತವ್ಯ ಎಂದು ಪೀಠ ಅಭಿಪ್ರಾಯಪಟ್ಟಿದೆ.

    ಬಿಟ್ಟಿ ಪ್ರಚಾರಕ್ಕಾಗಿ ಚಿಲ್ರೆ ಕೆಲಸ: ತನ್ನ ಸಂಸ್ಥೆಯ ಮಾರ್ಕೆಟಿಂಗ್​ಗಾಗಿ ಫ್ಲೈಓವರ್​ ಮೇಲಿಂದ ಹಣ ಎಸೆದೆ ಎಂದು ತಪ್ಪೊಪ್ಪಿಕೊಂಡ

    ಪಾನಮತ್ತ ಯುವತಿ ಮುಂಬೈನಲ್ಲಿ ಕುಳಿತು ಜೊಮ್ಯಾಟೊದಲ್ಲಿ ಬೆಂಗಳೂರಿನ 2,500 ರೂ. ಮೌಲ್ಯದ ಬಿರಿಯಾನಿ ಆರ್ಡರ್​ ಮಾಡಿದ್ಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts