More

    ದೇಶದಲ್ಲಿ ನೂರು ಕೋಟಿ ಲಸಿಕೆ; ಇಲ್ಲಿ ರಂಗೋಲಿ-ವಿದ್ಯುದ್ದೀಪಾಲಂಕಾರ, ಬಲೂನ್ ಸಹಿತ ಸಂಭ್ರಮಾಚರಣೆ!

    ಹಾಸನ: ಭಾರತದಲ್ಲಿ ಬೃಹತ್ ಲಸಿಕೆ ಅಭಿಯಾನ ಆರಂಭಿಸಿದ ಕೆಲವೇ ತಿಂಗಳಲ್ಲಿ ಶತಕೋಟಿ ಲಸಿಕೆ ಹಾಕಿಸಲಾಗಿದ್ದು, ಇದೀಗ ಆ ಬಗ್ಗೆ ಎಲ್ಲೆಡೆ ಸಂಭ್ರಮಾಚರಣೆ ಮಾಡಲಾಗುತ್ತಿದೆ.
    ಲಸಿಕೀಕರಣ ಶತಕೋಟಿಯನ್ನು ದಾಟಿರುವ ಹಿನ್ನೆಲೆಯಲ್ಲಿ ಇಂದು ದೆಹಲಿಯ ಕೆಂಪುಕೋಟೆಯಲ್ಲಿ ವಿಶೇಷ ಕಾರ್ಯಕ್ರಮವೊಂದನ್ನು ಆಚರಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವೀಯ ಶತಕೋಟಿ ಲಸಿಕೀಕರಣ ಕುರಿತ ವಿಶೇಷ ಗೀತೆ ಹಾಗೂ ದೃಶ್ಯಾವಳಿಯನ್ನು ಇಂದು ಬಿಡುಗಡೆ ಮಾಡಿದ್ದರು.

    ಅಲ್ಲದೆ ದೇಶದ ಹಲವೆಡೆ ಶತಕೋಟಿ ಲಸಿಕೆ ಹಾಕಿಸಿರುವುದಕ್ಕೆ ಸಂತಸ ವ್ಯಕ್ತವಾಗುತ್ತಿದೆ. ಸೋಷಿಯಲ್​ ಮೀಡಿಯಾದಲ್ಲೂ ಹಲವರು ಈ ಬಗ್ಗೆ ಸಂತೋಷವನ್ನು ಹಂಚಿಕೊಳ್ಳುತ್ತಿದ್ದು, ಎಲ್ಲರೂ ಆದಷ್ಟು ಬೇಗ ಎರಡನೇ ಡೋಸ್ ಲಸಿಕೆಯನ್ನೂ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ಹನಿಟ್ರ್ಯಾಪ್​ ಗ್ಯಾಂಗ್ ಅರೆಸ್ಟ್​: ಮೈಮುಟ್ಟದೆ ಬಟ್ಟೆ ಬಿಚ್ಚಿಸುತ್ತಿದ್ದರು, ಫೀಮೇಲ್ ಹೆಸರಲ್ಲಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದರು..

    ಈ ನಡುವೆ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲೂ ಶತಕೋಟಿ ಲಸಿಕೀಕರಣದ ಸಂಭ್ರಮವನ್ನು ಆಚರಣೆ ಮಾಡಲಾಗಿದೆ. ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಂಗೋಲಿ ಬಿಡಿಸಿ, ಕಚೇರಿಯನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿ, ಬಣ್ಣಬಣ್ಣದ ಬಲೂನ್​ಗಳನ್ನು ಹಾರಿಬಿಟ್ಟು ಸಂತೋಷ ವ್ಯಕ್ತಪಡಿಸಲಾಗಿದೆ. ಈ ಶತಕೋಟಿ ಲಸಿಕೀಕರಣದ ಸಂಭ್ರಮಾಚರಣೆಯನ್ನು ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಉದ್ಘಾಟಿಸಿದ್ದು, ಡಿಎಚ್​ಒ ಡಾ.ಸತೀಶ್​, ಎಸ್​ಪಿ ಆರ್​. ಶ್ರೀನಿವಾಸ ಗೌಡ, ಸಿಇಒ ಪರಮೇಶ್​ ಮತ್ತಿತರರು ಉಪಸ್ಥಿತರಿದ್ದರು.

    ಯುವತಿಯನ್ನು ಪ್ರೀತಿಸುತ್ತಿದ್ದಾತನ ಎದೆಗೇ ಚಾಕು ಚುಚ್ಚಿದ್ರು; ಆಕೆಯನ್ನು ಭೇಟಿ ಮಾಡ್ಬೇಡ ಅಂದ್ರೂ ಮಾಡಿದ್ದಕ್ಕೆ ಇರಿದಿದ್ದವರ ಸೆರೆ

    9 ವರ್ಷಗಳ ಬಳಿಕ ನಕ್ಸಲ್​ ನಂಟು ಆರೋಪದಿಂದ ಮುಕ್ತರಾದ್ರು ವಿಠಲ ಮಲೆಕುಡಿಯ ಮತ್ತು ತಂದೆ; ಆರೋಪಮುಕ್ತಗೊಳಿಸಿದ ನ್ಯಾಯಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts