More

    ನೂರ ಐದು ವರ್ಷದ ಮಹಿಳೆ ಬೂತ್​ಗೆ ಹೋಗಿಯೇ ವೋಟ್​ ಮಾಡಿದ್ರು!

    ಚುರಾಹ್​: ಮತ ಚಲಾಯಿಸಿ ಎಂದು ರಜೆ ಕೊಟ್ಟರೆ ಪಿಕ್​ನಿಕ್​ಗೆ ಹೋಗುವವರು ಹೆಚ್ಚಾಗಿದ್ದಾರೆ. ಇಂತಹ ಕಾಲದಲ್ಲಿಯೂ ಇಲ್ಲೊಬ್ಬ ನೂರ ಐದು ವರ್ಷದ ಮಹಿಳೆ ಮತದಾನ ಕೇಂದ್ರಕ್ಕೆ ತೆರಳಿ ತಮ್ಮ ಮತ ಚಲಾಯಿಸಿದ್ದಾರೆ.

    ಹಿಮಾಚಲ ಪ್ರದೇಶದ ಚುನಾವಣೆ ರಂಗೇರಿ ನಡೆಯುತ್ತಿರುವಾಗ ಈ ವೃದ್ಧೆ ಉತ್ಸಾಹದಿಂದ ಮತದಾನ ಮಾಡಿದ್ದಾರೆ. ಇಂದು (ನ.12) ಹಿಮಾಚಲ ಪ್ರದೇಶದ ಚುರಾಹ್​ ಕ್ಷೇತ್ರದಲ್ಲಿ ಬರುವ ಲಧಾನ್​ ಎನ್ನುವಲ್ಲಿ ಇವರು ಮತ ಚಲಾಯಿಸಿದ್ದಾರೆ. ಅಂದ ಹಾಗೆ ಇವರ ಹೆಸರು ನಾರೋ ದೇವಿ.

    ಚುನಾವಣಾ ಆಯೋಗ ಎಂಭತ್ತು ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಲ್ಲೇ ಕುಳಿತು ಬ್ಯಾಲೆಟ್​ ಪೇಪರ್​ ಮೂಲಕ ಮತ ಚಲಾವಣೆ ಮಾಡುವ ಅವಕಾಶ ನೀಡಿತ್ತು. ಆದರೆ ನಾರೊ ದೇವಿ ಮತ ಕಟ್ಟೆಗೆ ಬಂದು ಇವಿಎಂ ಮೂಲಕ ಮತ ಚಲಾಯಿಸಿದ್ದಾರೆ.

    ’80 ವರ್ಷ ಮೇಲ್ಪಟ್ಟ 1.2 ಲಕ್ಷ ಮತದಾರರಿಗೆ ನಾನು ವಂದಿಸುತ್ತೇನೆ. ಅವರಿಂದ ಸ್ಫೂರ್ತಿ ಪಡೆದು ಯುವಕರು ಉತ್ಸಾಹದಿಂದ ಮತ ಚಲಾಯಿಸಬೇಕು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾವಣೆ ಮಾಡುವುದೇ ಭಾರತದ ಪ್ರಥಮ ಮತದಾರ ಶ್ಯಾಮ್​ ಶರಣ್​ ನೇಗಿಗೆ ಸಲ್ಲಿಸುವ ದೊಡ್ಡ ಗೌರವ’ ಎಂದು ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್​ ಕುಮಾರ್​ ಹೇಳಿದರು. (ಏಜೆನ್ಸೀಸ್​)

    ಮೋದಿ ಕಾರ್ಯಕ್ರಮಕ್ಕೆ ದೇವೇಗೌಡರಿಗೆ ಆಮಂತ್ರಣ; ನಿಜಕ್ಕೂ ನಡೆದಿದ್ದೇನು?

    ಟಿಪ್ಪು ಸುಲ್ತಾನನ ನೂರಡಿ ಪ್ರತಿಮೆ ಮಾಡೇ ಮಾಡ್ತೀವಿ… ಯಾರು ತಡೆಯುತ್ತೀರೋ ತಡೆಯಿರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts