More

    ಟಿಪ್ಪು ಸುಲ್ತಾನನ ನೂರಡಿ ಪ್ರತಿಮೆ ಮಾಡೇ ಮಾಡ್ತೀವಿ… ಯಾರು ತಡೆಯುತ್ತೀರೋ ತಡೆಯಿರಿ!

    ಮೈಸೂರು: ‘‘ಟಿಪ್ಪು ಸುಲ್ತಾನನ ಆಳ್ವಿಕೆಯ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಅವರ 100 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ಸರ್ಕಾರದಿಂದಾಗಲಿ, ಬೇರೆ ಯಾರಿಂದಲೇ ಆಗಲಿ ಎಷ್ಟೇ ವಿರೋಧ ಬಂದರೂ ಈ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ’’ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ತನ್ವೀರ್ ಸೇಠ್ ಹೇಳಿದ್ದಾರೆ.

    ‘‘ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಪ್ರತಿಮೆ ಪ್ರತಿಷ್ಠಾಪಿಸುವುದು ಖಚಿತ. ಅದನ್ನು ಕಂಚಿನಿಂದ ತಯಾರಿಸಬೇಕಾ, ಪಂಚಲೋಹದಿಂದ ಮಾಡಿಸಬೇಕಾ ಎಂಬುದರ ಬಗ್ಗೆ ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಚರ್ಚೆ ಮಾಡುತ್ತಿದ್ದೇನೆ. ಇದಕ್ಕೆ ಸರ್ಕಾರ ಅನುಮತಿ ನೀಡಿದರೆ ಸ್ವಾಗತಿಸುತ್ತೇನೆ.
    ಇಲ್ಲವಾದರೆ ನ್ಯಾಯಾಲಯದ ಮೊರೆ ಹೋಗಿ ಅಲ್ಲಿಂದ ಅನುಮತಿ ಪಡೆದು ಪ್ರತಿಮೆ ಸ್ಥಾಪನೆ ಮಾಡುತ್ತೇವೆ’’ ಎಂದು ಹೇಳಿದರು.

    ‘‘ಇಸ್ಲಾಂ ಧರ್ಮದಲ್ಲಿ ಪ್ರತಿಮೆಗೆ ಅವಕಾಶ ಇಲ್ಲ. ಇದ್ದಿದ್ದ್ದರೆ ಈಗಾಗಲೇ ಎಲ್ಲಾ ಕಡೆ ಅವರ ಪ್ರತಿಮೆ ಇರುತ್ತಿತ್ತು. ಅಷ್ಟೊಂದು ಒಳ್ಳೆಯ ಕೆಲಸಗಳನ್ನು ಟಿಪ್ಪು ಸುಲ್ತಾನ್ ಮಾಡಿದ್ದಾರೆ. ಯಾರು ಎಷ್ಟೇ ಅಡ್ಡಿ ಪಡಿಸಿದರೂ ಪ್ರತಿಮೆ ಮಾಡೇ ಮಾಡುತ್ತೇವೆ. ಇದು ಕಾಂಗ್ರೆಸ್ ಪಕ್ಷದ ತೀರ್ಮಾನವಲ್ಲ, ನಮ್ಮ ಸಮುದಾಯದ ತೀರ್ಮಾನ’’ ಎಂದು ಸವಾಲೆಸೆದರು.

    ಟಿಪ್ಪು ಪ್ರತಿಮೆ ಸ್ಥಾಪನೆ ಮಾಡಿದರೆ ಧ್ವಂಸ ಮಾಡುತ್ತೇವೆ ಎಂಬ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘‘ಮುತಾಲಿಕ್ ಅವರಿಗೆ ನಿರ್ಮಾಣದ ಕೆಲಸಗಳಲ್ಲಿ ಕೈ ಜೋಡಿಸಿ ಗೊತ್ತಿಲ್ಲ. ಹೀಗಾಗಿ ಈ ರೀತಿ ಮಾತನಾಡುತ್ತಾರೆ’’ ಎಂದು ಹೇಳಿದರು.

    ರಂಗಾಯಣದಲ್ಲಿ ಟಿಪ್ಪು ನಿಜ ಕನಸು ನಾಟಕ ಪ್ರದರ್ಶನ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಮಾತನಾಡಿದ ತನ್ವೀರ್ ಸೇಠ್, ‘‘ಆ ಬಗ್ಗೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು’’ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts