More

    ಬಟ್ಟೆ ಹಾಕೋದು-ಬಿಚ್ಚುವುದರ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ: ಚೆನ್ನಾಗಿ ಕಾಣಿಸಬೇಕಂತ ಸಿದ್ದರಾಮಯ್ಯ ಕಲರ್ ಬಟ್ಟೆ ತಗೋಳೋಕೆ ಶುರುಮಾಡಿದ್ದಾರಂತೆ!

    ಬೆಂಗಳೂರು: ಬಟ್ಟೆ, ಧೋತಿ ಖರೀದಿ, ಬಟ್ಟೆ ಹಾಕೋದು, ಬಿಚ್ಚುವುದರ ಕುರಿತು ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆ ನಡೆಯಿತು.
    ಬೆಲೆ ಏರಿಕೆ ವಿಚಾರವಾಗಿ ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ದಾರಿಯಲ್ಲಿ ಓಡಾಡುವಾಗ ಅಂಗಡಿಗಳನ್ನು ನೋಡುತ್ತಿದ್ದು, ಅಂಗಡಿಗಳಿಗೆ ಯಾರೂ ಹೋಗುತ್ತಿಲ್ಲ. ಕೊಂಡುಕೊಳ್ಳಲು ಜನರ ಹತ್ತಿರ ಶಕ್ತಿ ಇಲ್ಲ. ಯಾರೋ ರೇವಣ್ಣನಂಥವರು ಹೋಗುತ್ತಾರೆ ಅಷ್ಟೇ ಎಂದು ಹಾಸ್ಯ ಮಾಡಿದರು.

    ಈ ವೇಳೆ ಮಧ್ಯಪ್ರವೇಶಿಸಿದ ಗೃಹ ಬಸವರಾಜ ಬೊಮ್ಮಾಯಿ, ರೇವಣ್ಣನವರದ್ದು ದೊಡ್ದ ಬೇಡಿಕೆಗಳಿರಲ್ಲ, ಯಾವ ಅಂಗಡಿಗೆ ಹೋಗಬಹುದು ನೀವೇ ಹೇಳಿ ಎಂದು ರೇವಣ್ಣ ವಿಷಯವನ್ನು ಮುಂದುವರಿಸಿದರು. ನಿಜ, ರೇವಣ್ಣ ಹೋಗಲ್ಲ, ಇವರಿಗೂ ಅವರ ಮನೆಯವರೇ ಬಟ್ಟೆ ತಂದುಕೊಡುತ್ತಾರೆ. ಆ ಪರಿಸ್ಥಿತಿ ಇರುವುದರಿಂದ ಇವರು ಅಂಗಡಿಗೆ ಹೋಗೋ ಪ್ರಶ್ನೆಯೇ ಇಲ್ಲ, ಎಂದು ಸಿದ್ದರಾಮಯ್ಯ ತಮ್ಮ ಹಿಂದಿನ ಮಾತನ್ನು ಹಿಂಪಡೆದಂತೆ ಹಾಸ್ಯ ಚಟಾಕಿ ಹಾರಿಸಿದರು. ಆದರೆ, ನಾನಂತೂ ಅಂಗಡಿಗೆ ಹೋಗುತ್ತೇನೆ, ನನ್ನ ಬಟ್ಟೆ ನಾನೇ ತಗೋತೀನಿ. ಮೊನ್ನೆ ಕೂಡ ಹೋಗಿದ್ದೆ, ಟಿವಿಯಲ್ಲೆಲ್ಲಾ ಬಂದ್ಬಿಡ್ತು ಎಂದರು ಸಿದ್ದರಾಮಯ್ಯ.

    ಇದನ್ನೂ ಓದಿ: ‘ಕಾಲೂರಲು’ ಸಿಗದ ‘ಬೆಂ’ಬಲ; ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ರಾಜಕೀಯ ನಿವೃತ್ತಿ? 

    ಸ್ಪೀಕರ್ ಕೂಡ ಈ ವೇಳೆ ಮಧ್ಯಪ್ರವೇಶಿಸಿ, ಜಾಸ್ತಿ ಬಟ್ಟೆ ತಗೊಂಡ್ರಿ, ಅದು ಯಾರ್ಯಾರಿಗೆ ಎಂದು ಕಾಲೆಳೆದರು. ಯಾರಿಗೂ ಇಲ್ಲ ನಂಗೊಬ್ಬನಿಗೇ.. ನನಗೆ ಸಣ್ಣ ಮಕ್ಕಳಿಲ್ಲ, ದೊಡ್ಡ ಮಗ ಇರೋದು, ಅವನ ಬಟ್ಟೆ ಅವನೇ ತಗೋತಾನೆ. ಹೆಣ್ಮಕ್ಕಳು ಅವರೇ ತಗೋತಾರೆ.. ನನ್ನ ಬಟ್ಟೆ ನಾನೇ ಯಾವಾಗಲೂ ತಗೋಳೋದು ಎಂದರು. ಮತ್ತೆ ಬಸವರಾಜ ಬೊಮ್ಮಾಯಿ ಚರ್ಚೆಯಲ್ಲಿ ಪಾಲ್ಗೊಂಡು, 90 ಸೆಟ್ ಒಟ್ಟಿಗೇ ತಗೊಂಡ್ರಂತೆ, ಅಷ್ಟು ದೊಡ್ಡ ಪ್ರಮಾಣದಲ್ಲಿ ಹೊಲಿಸಿದ್ರೆ ಹೆಚ್ಚುಕಡಿಮೆ ಆಗಲ್ವಾ? ಎಂದು ಪ್ರಶ್ನಿಸಿದರು. ನಾನು ಧೋತಿಗಳನ್ನು ತಗೊಂಡಿದ್ದು, ಅವೇನೂ ಬದಲಾಗಲ್ಲ. ಸ್ವಲ್ಪ ದಪ್ಪವಾಗಿದ್ದೇನೆ, ಆದ್ರೂ ನಡೀತದೆ. ಏನ್ ಸಮಸ್ಯೆ ಆಗಲ್ಲ ಎಂದು ಸಿದ್ದರಾಮಯ್ಯ ಪ್ರತ್ಯುತ್ತರ ನೀಡಿದರು.

    ಡಿಸಿಎಂ ಕಾರಜೋಳ ಸಹ ಆಸಕ್ತಿಯಿಂದ ಚರ್ಚೆಯಲ್ಲಿ ಪಾಲ್ಗೊಂಡು. ದಪ್ಪಗಾಗಿರೋದು, ತೆಳ್ಳಗಾಗಿರೋದು ಪ್ರಶ್ನೆ ಅಲ್ಲ. ಮುದುಕ ಆಗಿದ್ದಾರೆ, ಅದಕ್ಕೆ ಚೆನ್ನಾಗಿ ಕಾಣಿಸಬೇಕು ಅಂತ ಕಲರ್ ಬಟ್ಟೆ ತಗೋಳೋಕೆ ಶುರುಮಾಡಿದ್ದಾರೆ ಎಂದು ಹಾಸ್ಯ ಮಾಡಿದರು. ಪ್ರತ್ಯುತ್ತರ ನೀಡಿದ ಸಿದ್ದರಾಮಯ್ಯ, ಅದು ನಿಜಾನೇ… ಗೋವಿಂದ ಕಾರಜೋಳರನ್ನು ನೋಡ್ತಿದ್ದೆ. ಯಾವಾಗಲೂ ಕಲರ್. ಕಲರ್ ಬಟ್ಟೆ ಹಾಕ್ಕೊಂಡು ಬರೋರು. ಅದಕ್ಕೆ ನಾನು ಯಾಕೆ ಹಾಕ್ಕೊಂಡು ಬರಬಾರದು ಅಂತ ತಗೊಂಡೆ ಎಂದು ಸದನವನ್ನು ನಗೆಗಡಲಲ್ಲಿ ತೇಲಿಸಿದರು.

    ಇದನ್ನೂ ಓದಿ: ಗಾರ್ಮೆಂಟ್ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಯುವತಿ ಸಾವು; ಜೀವ ಕಳೆದುಕೊಳ್ಳುವಂತೆ ಮಾಡಿತು ಸಣ್ಣದೊಂದು ಆಕಸ್ಮಿಕ

    ಹಳೇ ಚಪ್ಪಲಿಗೆ ಜಾಸ್ತಿ ಪಾಲಿಷ್ ಹೊಡೀಬೇಕು ಎಂದು ಸಿಎಂ ಉದಾಸಿ ಹೇಳ್ತಿದ್ರು, ಹಂಗೆ ಬಟ್ಟೆಗಳಲ್ಲಿ ಚೆನ್ನಾಗಿ ಕಾಣಬೇಕು ಎಂದು ಬೊಮ್ಮಾಯಿ ಕಿಚಾಯಿಸಿದಾಗ, ಈಗ ಚೆನ್ನಾಗಿ ಕಾಣೋ ವಯಸ್ಸು ಹೋಗ್ಬಿಟ್ಟಿದೆ ಬಸವರಾಜ್ ಎಂದರು ಸಿದ್ದರಾಮಯ್ಯ.
    ಈ ವೇಳೆ ಮಧ್ಯಪ್ರವೇಶಿಸಿದ ರಮೇಶ್ ಕುಮಾರ್, ಬಟ್ಟೆ ಹಾಕೋದರ ಬಗ್ಗೆ ಇಡೀ ದಿನ ಮಾತನಾಡಿ.. ಬಟ್ಟೆ ಕಳಚೋ ಬಗ್ಗೆ ಬೇಡ ಎಂದಾಗ ಪುನಃ ಸಭೆ ನಗೆಗಡಲಲ್ಲಿ ಮುಳುಗಿತು. ಬಟ್ಟೆ ಹಾಕ್ಕೋಳೋದು ಮಾನ ಮುಚ್ಚಿಕೊಳ್ಳೋಕೆ. ಆದ್ರೆ, ಬಟ್ಟೆ ಕಳಚಿಕೊಳ್ಳುವಂತಹ ಹಲವು ನಿದರ್ಶನಗಳನ್ನು ನೋಡ್ತಿದ್ದೇವೆ. ಸಮಾಜದಲ್ಲಿ ಅದೆಲ್ಲಾ ಆಗಬಾರದು ಎಂದು ಸಿದ್ದರಾಮಯ್ಯ ಹಾಸ್ಯಮಯ ವಾತಾವರಣಕ್ಕೆ ತೆರೆ ಎಳೆದರು.

    ಅರಸೀಕೆರೆ ಹೆಂಗಸರು ನನ್ನ ಮುಖ ಕಂಡ ಕೂಡಲೇ ಬೈತಾರೆ: ಶಾಸಕ ಶಿವಲಿಂಗೇಗೌಡ ಅಳಲು

    ಪರಸ್ತ್ರೀಗೆ ಕಿಸ್​ ಕೊಟ್ಟಿದ್ದಕ್ಕೆ ಪತಿಗೆ ಪಂಚ್​ ಕೊಟ್ಟ ಪತ್ನಿ: ರಿತೀಶ್ ಕಿಸ್​, ಜೆನಿಲಿಯಾ ಜಲಸ್; ನನಗಿಂತ ಪ್ರೀತಿ ಝಿಂಟಾ ಹೆಚ್ಚಾದ್ಲಾ.. ಡಿಶೂಂ ಡಿಶೂಂ!

    ಪತಿಯ ಜೀವ ತೆಗೆದಿದ್ದ ಪತ್ನಿಗೆ ಜೀವಾವಧಿ ಶಿಕ್ಷೆ; ಕತ್ತು ಕತ್ತರಿಸಿ, ಶವ ಶೌಚದ ಗುಂಡಿಗೆ ಹಾಕಿದ್ದಳು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts