More

    ತೀರ್ಪು ಬಂದರೂ ಸಿಕ್ಕಿಲ್ಲ ನ್ಯಾಯ

    ಉಡುಪಿ: ಆಸ್ತಿಯನ್ನು ಮಕ್ಕಳಿಗೆ ಪಾಲು ಮಾಡಿಕೊಟ್ಟ ನಂತರ ಮನೆಯಿಂದ ಹೊರ ದಬ್ಬಲ್ಪಟ್ಟಿದ್ದ ಹಿರಿಯ ನಾಗರಿಕ ಹೆಬ್ರಿ ಸಮೀಪದ ಮುದ್ರಾಡಿ ಭೋಜ ಶೆಟ್ಟಿ ಪರ ನ್ಯಾಯಾಲಯ ತೀರ್ಪು ನೀಡಿದರೂ, ನ್ಯಾಯ ಸಿಕ್ಕಿಲ್ಲ ಎಂದು ಮಾನವ ಹಕ್ಕು ಪ್ರತಿಷ್ಠಾನ ಅಧ್ಯಕ್ಷ ಡಾ.ರವೀಂದ್ರನಾಥ್ ಶ್ಯಾನುಭಾಗ್ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಂಗಳವಾರ ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಪ್ರಕರಣದ ವಿವರ ನೀಡಿದ ಅವರು, ಜೀವನಪೂರ್ತಿ ದುಡಿದು ಮನೆ, 5 ಎಕರೆ ಕೃಷಿ ಭೂಮಿ ಹೊಂದಿದ್ದ ಮುದ್ರಾಡಿಯ ಭೋಜ ಶೆಟ್ಟಿ, ಎಲ್ಲ ಆಸ್ತಿಯನ್ನು ಮಕ್ಕಳಿಗೆ ಪಾಲು ಮಾಡಿಕೊಟ್ಟಿದ್ದಾರೆ. ವಯೋವೃದ್ಧರಾದ ಅವರು ಔಷಧ, ಊಟಕ್ಕಾಗಿ ಕೂಲಿ ಮಾಡಬೇಕಾದ ಸ್ಥಿತಿ ಬಂದಿದೆ. 3 ವರ್ಷಗಳಿಂದ ನ್ಯಾಯಕ್ಕಾಗಿ ಜಿಲ್ಲಾಧಿಕಾರಿ, ಕುಂದಾಪುರ ಎಸಿ, ಹೆಬ್ರಿ ಪೊಲೀಸ್ ಠಾಣೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಅಲೆಯುತ್ತಿದ್ದಾರೆ.ಅವರಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ಹೈಕೋರ್ಟ್‌ನಲ್ಲಿ ಪ್ರಕರಣದ ದಾವೆ ಹೂಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಶ್ಯಾನುಭಾಗ್ ತಿಳಿಸಿದರು.

    ಪುತ್ರರು ಉದ್ಯಮಿಗಳು!: ಕಷ್ಟದ ದಿನಗಳಲ್ಲಿ ಭೋಜ ಶೆಟ್ಟಿ 5 ಗಂಡು, 2 ಹೆಣ್ಣು ಮಕ್ಕಳನ್ನು ಸಾಕಿ ಬೆಳೆಸಿದವರು. ಹೆಣ್ಣುಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಮೂವರು ಗಂಡು ಮಕ್ಕಳು ಮುಂಬೈ, ಗೋವಾದಲ್ಲಿ ಹೋಟೆಲ್ ಉದ್ಯಮಿಗಳು. ಇಬ್ಬರು ಊರಿನಲ್ಲಿ ಜೀವನ ನಡೆಸುತ್ತಿದ್ದಾರೆ. ಕೃಷಿ ಭೂಮಿ ಹಾಗೂ ಮನೆ ಪಾಲು ಮಾಡಿ ಊರಲ್ಲಿದ್ದ ಗಂಡು ಮಕ್ಕಳಿಗೆ ನೀಡಿದ್ದಾರೆ. ಮಕ್ಕಳೊಂದಿಗೆ ಮಾಡಿಕೊಂಡ ಕರಾರಿನಂತೆ ಜೀವನ ನಿರ್ವಹಣೆಗೆ ಮಾಸಾಶನ ಪಡೆಯುತ್ತಿದ್ದರು. ಆಸ್ತಿ ವರ್ಗಾಯಿಸಿ ಎರಡು ವರ್ಷ ಕಳೆಯುವುದರೊಳಗೆ ನಿರ್ಲಕ್ಷೃಕ್ಕೆ ಒಳಗಾದರು. ಮನೆಯ ಇಬ್ಬರು ಗಂಡು ಮಕ್ಕಳು ಬೈಯಲು ಆರಂಭಿಸಿದರು. ಮಾಸಾಶನ ನಿಲ್ಲಿಸಿದರು. ಪರವೂರಿನಲ್ಲಿರುವ ಮಕ್ಕಳು ಆಗಾಗ ಹಣ ಕಳುಹಿಸುತ್ತಿದ್ದರೂ, ಇತ್ತೀಚೆಗೆ ನಿಲ್ಲಿಸಿದ್ದಾರೆ. ಮಾಸಾಶನ ತೆಗೆಸಿಕೊಡುವಂತೆ ಹೆಬ್ರಿ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಶ್ಯಾನುಭಾಗ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts