More

    ಮಾನವ ಕಳ್ಳಸಾಗಣೆ ಜಾಲ ಸಕ್ರಿಯ: ಜಾರ್ಖಂಡ್​ನಿಂದ ಕರೆತಂದು ದೌರ್ಜನ್ಯ

    ಬೆಂಗಳೂರು: ಮಾನವ ಕಳ್ಳಸಾಗಣೆ ಜಾಲ ದೇಶಾದ್ಯಂತ ವಿಸ್ತರಿಸಿದ್ದು, ಕೆಲಸ ಕೊಡಿಸುವ ನೆಪದಲ್ಲಿ ಉತ್ತರ ಭಾರತದಿಂದ ರೈಲಿನಲ್ಲಿ ಮಹಿಳೆಯರನ್ನು ನಗರಕ್ಕೆ ಕರೆತಂದು ಜೀತ ಹಾಗೂ ಅನೈತಿಕ ಚಟುವಟಿಕೆಗೆ ತಳ್ಳುತ್ತಿರುವ ಜಾಲವೊಂದು ಗುಪ್ತವಾಗಿ ಕಾರ್ಯನಿರ್ವಹಿಸುತ್ತಿದೆ. ಆರೋಪಿಗಳ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಬಂದ ಜಾರ್ಖಂಡ್ ಮೂಲದ 27 ವರ್ಷದ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಕೆಂಗೇರಿ ಹಾಗೂ ಕುಂಬಳಗೂಡು ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

    ಇದನ್ನೂ ಓದಿ: ಕೈ-ದಳ ಕೊಡುಕೊಳ್ಳುವಿಕೆ ಕಸರತ್ತು

    8 ತಿಂಗಳ ಹಿಂದೆ ಢಮರು ಎಂಬಾತ ಜಾರ್ಖಂಡ್​ನಲ್ಲಿ ಸಂತ್ರಸ್ತೆಯನ್ನು ಪರಿಚಯಿಸಿಕೊಂಡು ಕೆಲಸ ಕೊಡಿಸುವುದಾಗಿ ಹೇಳಿದ್ದ. ಸಂತ್ರಸ್ತೆ ಜತೆ ಇನ್ನೂ ಕೆಲ ಮಹಿಳೆಯರನ್ನು ದೆಹಲಿಗೆ ಕರೆದುಕೊಂಡು ಬಂದಿದ್ದ ಢಮರು, ಇಬ್ಬರು ಅಪರಿಚಿತರಿಗೆ ಮಹಿಳೆಯರನ್ನು ಒಪ್ಪಿಸಿ ಅವರಿಂದ ಹಣ ಪಡೆದು ತೆರಳಿದ್ದ. ಆ ಇಬ್ಬರು ಅಪರಿಚಿತರು ಮಹಿಳೆಯರನ್ನು ದೆಹಲಿಯಿಂದ ರೈಲಿನಲ್ಲಿ ಬೆಂಗಳೂರಿನ ಕುಂಬಳಗೂಡಿನಲ್ಲಿರುವ ಅಗರಬತ್ತಿ ಕಾರ್ಖಾನೆಗೆ ಕರೆತಂದು ಸುರೇಶ್ ಗೌರ್ ಮತ್ತು ಇಸ್ಲಾಂ ಅನ್ಸಾರಿ ಎಂಬುವವರ ಬಳಿ ಬಿಟ್ಟು ಹೋಗಿದ್ದರು. ಕಾರ್ಖಾನೆಯಲ್ಲಿ ಪ್ರತಿದಿನ ಕಿರುಕುಳ ಕೊಟ್ಟು ವಾರಕ್ಕೆ 200 ರೂ. ವೇತನ ನೀಡಿ ಹೊರ ಹೋಗಲು ಬಿಡದೇ ಹಿಂಸೆ ಕೊಡುತ್ತಿದ್ದರು.

    ಇದನ್ನೂ ಓದಿ: ನಟಿಯರ ಹಸಿರು ಪ್ರೀತಿ: ಹಿತ್ತಲು, ತಾರಸಿಯಲ್ಲಿ ಫಲ-ಪುಷ್ಪಗಳ ಘಮ

    ಲೈಂಗಿಕ ದೌರ್ಜನ್ಯ ಎಸಗಿದರು: ಕಾರ್ಖಾನೆಯಲ್ಲಿದ್ದ ಮತ್ತೋರ್ವ ಮಹಿಳೆ ಜತೆ ಸಂತ್ರಸ್ತೆ ಜ. 8ರಂದು ತಪ್ಪಿಸಿಕೊಂಡು ತೆರಳಲು ಯತ್ನಿಸಿದಾಗ ಆರೋಪಿಗಳು ಕೊಠಡಿಯೊಂದರಲ್ಲಿ ಕೂಡಿ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಕೆಲ ದಿನಗಳ ಬಳಿಕ ಸಂತ್ರಸ್ತೆ ಹಾಗೂ ಮತ್ತೋರ್ವ ಮಹಿಳೆ ಜತೆ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದರು. ಮೇ 5ರಂದು ಊರಿಗೆ ಹೋಗಲು ಅನುಮತಿ ನೀಡುವಂತೆ ಕುಂಬಳಗೂಡು ಠಾಣೆಗೆ ಬಂದಾಗ, ಅಲ್ಲಿಗೆ ಬಂದಿದ್ದ ಜಾರ್ಖಂಡ್​ನ ನಿಕೋಲಸ್ ಮುರ್ಮ ಎಂಬಾತನ ಪರಿಚಯವಾಗಿತ್ತು. ಆತ ಮಹಿಳೆಗಾದ ಅನ್ಯಾಯವನ್ನು ಟ್ವಿಟರ್​ನಲ್ಲಿ ಬರೆದಿದ್ದ. ಅದನ್ನು ಗಮನಿಸಿದ ಕರ್ನಾಟಕ ಜನಶಕ್ತಿ ಸಂಘಟನೆ ಕಾರ್ಯಕರ್ತರು ಮಹಿಳೆಗೆ ರಕ್ಷಣೆ ನೀಡಿ, ಮಾನವ ಕಳ್ಳ ಸಾಗಣೆ ಜಾಲವನ್ನು ಭೇದಿಸುವಂತೆ ಒತ್ತಾಯಿಸಿದ್ದಾರೆ.

    ರಾಮಮಂದಿರ ಶುರು: ನಿರ್ಮಾಣ ಕಾರ್ಯಕ್ಕೆ ಅಯೋಧ್ಯೆಯಲ್ಲಿ ಚಾಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts