More

    ಮಾನವೀಯತೆ ಬದುಕಿಗೆ ಮನುಷ್ಯ ಸ್ನೇಹ ತಳಹದಿ

    ಗೋಣಿಕೊಪ್ಪ: ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗುಂಡಿಕೆರೆ ಮಖಾಂ ವಾರ್ಷಿಕ ಉರುಸ್‌ಗೆ ಶನಿವಾರ ವರ್ಣರಂಜಿತವಾಗಿ ತೆರೆ ಬಿದ್ದಿತು.
    ಗುಂಡಿಕೆರೆಯ ಮಖಾಂನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ಪ್ರತಿ ವರ್ಷ ಅದ್ದೂರಿಯಾಗಿ ನಡೆಯುವ ಉರುಸ್ 3 ದಿನ ಆಯೋಜಿಸಲಾಗಿತ್ತು.


    ಸಾರ್ವಜನಿಕ ಸಮ್ಮೇಳನವನ್ನು ವಿರಾಜಪೇಟೆಯ ಅನ್ವಾರಲ್ ಹುದಾ ಸಂಸ್ಥೆ ಪ್ರಾಂಶುಪಾಲ ಅಶ್ರಫ್ ಅಹ್ಸನಿ ಉದ್ಘಾಟಿಸಿದರು.


    ಕೊಡವ ಮುಸ್ಲಿಂ ಅಸೋಸಿಯೇಷನ್(ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ ಎಚ್. ಸೂಫಿ ಹಾಜಿ ಮಾತನಾಡಿ, ಎಲ್ಲ ಸ್ನೇಹಕ್ಕಿಂತಲೂ ಮನುಷ್ಯ ಸ್ನೇಹ ಮೌಲ್ಯಯುತವಾದದ್ದು. ಇದನ್ನು ಯಾವ ಮಾನದಂಡಗಳಿಂದಲೂ ಅಳೆಯಲು ಸಾಧ್ಯವಿಲ್ಲ. ಮನುಷ್ಯ ಸ್ನೇಹದ ಮೂಲಕ ಎಷ್ಟೇ ಕಠಿಣವಾದ ವೈರಾಗ್ಯವನ್ನೂ ದೂರ ಮಾಡಬಹುದು. ಅಲ್ಲದೆ ಈ ಸ್ನೇಹವೇ ಮಾನವೀಯತೆಯ ಬದುಕಿಗೆ ತಳಹದಿ ಎಂದು ಅಭಿಪ್ರಾಯಪಟ್ಟರು.


    ಹಿರಿಯ ಧಾರ್ಮಿಕ ಪಂಡಿತ ಇಸ್ಮಾಯಿಲ್ ಸಖಾಫಿ ರಿಪ್ಪನ್ ಪ್ರಧಾನ ಭಾಷಣ ಮಾಡಿದರು. ಬೇಟೋಳಿ ಗ್ರಾಪಂ. ಸದಸ್ಯ ಎಂ. ಎಂ. ರಜಾಕ್, ಕೆದಮುಳ್ಳೂರು ಗ್ರಾಪಂ ಸದಸ್ಯ ಎಂ.ಎಂ. ಇಸ್ಮಾಯಿಲ್, ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್ ಆಡಳಿತ ಮಂಡಳಿ ಉಪಾಧ್ಯಕ್ಷ ಎಂ.ವೈ.ಆಲಿ, ಕೋಶಾಧಿಕಾರಿ ಎಂ.ಎಂ.ಆಲಿ ಮುಸ್ಲಿಯರ್ ಹಾಜಿ, ಪ್ರಧಾನ ಕಾರ್ಯದರ್ಶಿ ಎಂ.ಎ. ಇಸ್ಮಾಯಿಲ್ ಹಾಜಿ, ಕಾರ್ಯದರ್ಶಿ ಸಿ.ಪಿ. ಆಲಿ, ಸದಸ್ಯರಾದ ಸಿ.ಯು.ಮಹಮ್ಮದ್ ಹಾಜಿ, ಗುಂಡಿಕೆರೆ ಜಮಾಅತ್ತಿನ 1ನೇ ತಕ್ಕರಾದ ಸಿ.ಎ. ಹಸೈನಾರ್ ಹಾಜಿ, 2ನೇ ತಕ್ಕರಾದ ಎಂ.ಪಿ. ಶಾದಲಿ ಇದ್ದರು. ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್‌ನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು.ಮಹಮ್ಮದ್ ಹಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts