More

    ಸ್ಮಾಲ್-ಕ್ಯಾಪ್‌ಗಳ ಬೆಲೆಯಲ್ಲಿ ಅಪಾರ ಕುಸಿತ: ಹೂಡಿಕೆದಾರರಿಗೆ ಸೃಷ್ಟಿಯಾಗಿದೆಯೇ ದೊಡ್ಡ ಖರೀದಿ ಅವಕಾಶ?

    ಮುಂಬೈ: ಷೇರು ನಿಯಂತ್ರಕ ಮಂಡಳಿಯಾದ ಸ್ಟಾಕ್​ ಎಕ್ಸ್​ಚೇಂಜ್​ ಬೋರ್ಡ್​ ಆಫ್​ ಇಂಡಿಯಾ (ಸೆಬಿ) ಎಚ್ಚರಿಕೆಯ ಹೊರತಾಗಿಯೂ, ಭಾರತದ ಸ್ಮಾಲ್-ಕ್ಯಾಪ್ ಷೇರುಗಳಲ್ಲಿನ ಈ ತಿಂಗಳ ಕುಸಿತವನ್ನು ಕೆಲವು ಹೂಡಿಕೆದಾರರು ಖರೀದಿ ಅವಕಾಶ ಎಂದು ಕರೆಯುತ್ತಾರೆ.

    ಭಾರತದ ಆರ್ಥಿಕ ಬೆಳವಣಿಗೆ ದರ ಶೇಕಡಾ 8ರಷ್ಟು ದಾಟುವ ಮೂಲಕ ದಾಖಲೆ ಬರೆದಿದೆ. ಈ ಆರ್ಥಿಕ ಬೆಳವಣಿಗೆಯ ಪ್ರಮುಖ ಫಲಾನುಭವಿಗಳೆಂದು ಗುರುತಿಸಲ್ಪಟ್ಟಿರುವ ಸಣ್ಣ ಕಂಪನಿಗಳ ಷೇರುಗಳ ಬೆಲೆ ಕಳೆದ ಫೆಬ್ರವರಿ 27 ರಿಂದ ಸಾಕಷ್ಟು ಕುಸಿತ ಕಂಡಿದೆ. ಈ ಕುಸಿತದ ಕಾರಣದಿಂದಾಗಿ ನಿಫ್ಟಿ ಸ್ಮಾಲ್‌ಕ್ಯಾಪ್ 250 ಸೂಚ್ಯಂಕವು ಅಂದಾಜು 10% ರಷ್ಟು ಇಳಿಕೆಯಾಗಿದೆ. ಷೇರುಗಳ ಬೆಲೆ ಕುಸಿದಿರುವುದರಿಂದ ಮತ್ತೆ ಖರೀದಿಗೆ ಉತ್ತಮ ಅವಕಾಶ ಎಂಬ ಭಾವನೆ ಕಂಡುಬರುತ್ತಿದೆ.

    ಸಣ್ಣ ಮತ್ತು ಮಧ್ಯಮ-ಕ್ಯಾಪ್ ಷೇರುಗಳಲ್ಲಿ ಹೂಡಿಕೆದಾರರನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾವು ಮ್ಯೂಚುಯಲ್ ಫಂಡ್​ಗಳಿಗೆ ಸೂಚನೆಯನ್ನು ನೀಡಿದೆ.

    ಕಳೆದ ವರ್ಷ ಮಾರ್ಚ್‌ನಿಂದ ಸ್ಮಾಲ್-ಕ್ಯಾಪ್​ಗಳು 230 ಶತಕೋಟಿ ಡಾಲರ್​ಗಿಂತಲೂ ಹೆಚ್ಚಿನ ಏರಿಕೆಯನ್ನು ಕಂಡಿವೆ.

    “ಇದು ನಿಸ್ಸಂದೇಹವಾಗಿ ಉತ್ತಮ ಗುಣಮಟ್ಟದ ಸುವ್ಯವಸ್ಥಿತ ಕಂಪನಿಗಳನ್ನು ಹೆಚ್ಚು ಆಕರ್ಷಕ ಬೆಲೆಯಲ್ಲಿ ಖರೀದಿಸಲು ಅವಕಾಶವಾಗಿದೆ” ಎಂದು ಬ್ರಿಟನ್​ ಮೂಲದ ಆಲ್ಕ್ವಿಟಿ ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ ಜಾಗತಿಕ ಉದಯೋನ್ಮುಖ ಷೇರುಗಳ ಮುಖ್ಯಸ್ಥ ಮೈಕ್ ಸೇಲ್ ಹೇಳುತ್ತಾರೆ. “ಮೂಲಭೂತವಾಗಿ ಏನೂ ಬದಲಾಗಿಲ್ಲ” ಎಂದೂ ಅವರು ಹೇಳುತ್ತಾರೆ.

    ಭಾರತದ ಪ್ರಸ್ತುತ ಆರ್ಥಿಕ ವಿಸ್ತರಣೆಯು 2000 ರ ದಶಕದ ಮಧ್ಯಭಾಗದ ಉತ್ಕರ್ಷದ ಅವಧಿಯನ್ನು ಹೋಲುತ್ತದೆ ಎಂದು ಮೋರ್ಗನ್ ಸ್ಟಾನ್ಲಿ ಬ್ರೋಕರೇಜ್​ ಸಂಸ್ಥೆಯು ಈ ವಾರದ ಆರಂಭದಲ್ಲಿ ಹೇಳಿದೆ. ಇದರ ಬೆಳವಣಿಗೆ ದರಗಳು ಸರಾಸರಿ 8% ಕ್ಕಿಂತ ಹೆಚ್ಚು ಇದೆ. ಬಿಎಸ್​ಇ ಸ್ಮಾಲ್-ಕ್ಯಾಪ್ ಸೂಚ್ಯಂಕವು ಆ ಯುಗದಲ್ಲಿ 1,200% ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಇದು ಅಲ್ಪಾವಧಿಯ ತಿದ್ದುಪಡಿಯ ಹಲವಾರು ಅವಧಿಗಳನ್ನು ಕಂಡ ಬೆಳವಣಿಗೆಯಾಗಿದೆ ಎಂದು ಅದು ಹೇಳಿದೆ.

    ನಿಫ್ಟಿ ಸ್ಮಾಲ್-ಕ್ಯಾಪ್ ಸೂಚ್ಯಂಕವನ್ನು ಬಹಳ ನಂತರ ಪರಿಚಯಿಸಲಾಯಿತು. ಇದು ಮಾರ್ಚ್ 2020 ರಿಂದ ಎರಡು ತಿದ್ದುಪಡಿಗಳನ್ನು ಕಂಡಿದೆ. 27% ಮತ್ತು 14% ಕುಸಿತ ಕಂಡಿದೆ. ಈ ತಿದ್ದುಪಡಿಗಳ ನಂತರದ 6ರಿಂದ 12 ತಿಂಗಳುಗಳ ಅವಧಿಯಲ್ಲಿ ಬಲವಾದ ಆದಾಯವನ್ನು ಅನುಸರಿಸಲಾಗಿದೆ ಎಂದೂ ಬ್ರೋಕರೇಜ್​ ಸಂಸ್ಥೆ ಹೇಳಿದೆ.

    “ಈ ಶೇಕ್‌ಔಟ್ ಖಂಡಿತವಾಗಿಯೂ ಸ್ವಾಗತಾರ್ಹ. ಹೂಡಿಕೆದಾರರು ಈ ತಿದ್ದುಪಡಿಗೆ ಯಾವುದೇ ಆಕ್ಷೇಪಣೆ ಹೊಂದಿರುವುದಿಲ್ಲ” ಎಂದು ಡಿ ಚೋಕ್ಸಿ ಫಿನ್‌ಸರ್ವ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ದೇವೆನ್ ಚೋಕ್ಸಿ ಹೇಳಿದ್ದಾರೆ.

    5ರಿಂದ 380 ರೂಪಾಯಿಗೆ ಏರಿದ ಸ್ಟಾಕ್​: ಬೋನಸ್​ ಷೇರು, ಸ್ಟಾಕ್​ ಸ್ಪ್ಲಿಟ್ ಕಾರಣ ಮತ್ತೆ ಬೇಡಿಕೆ

    ಝೀ ನ್ಯೂಸ್- ಮ್ಯಾಟ್ರಿಜ್ ಚುನಾವಣೆ ಸಮೀಕ್ಷೆ: 390 ಸ್ಥಾನಗಳೊಂದಿಗೆ ಎನ್​ಡಿಎ ಮತ್ತೆ ಅಧಿಕಾರಕ್ಕೆ; ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್​ ಮೈತ್ರಿಕೂಟಕ್ಕೆ 23 ಸ್ಥಾನ

    2024ರ ಚುನಾವಣೆ ವರ್ಷದಲ್ಲಿ ಚಿನ್ನ ಎಷ್ಟು ಚೆನ್ನ?: ಹಳದಿ ಲೋಹದಲ್ಲಿ ಏಕೆ ಹೂಡಿಕೆ ಮಾಡಬೇಕು? ಬ್ರೋಕರೇಜ್​ ಸಂಸ್ಥೆಯ ವಿಶ್ಲೇಷಣೆ ಹೀಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts