More

    ರಾತ್ರಿ ಪಾಳಿ ಗಸ್ತಿನಲ್ಲಿದ್ದ ಪೊಲೀಸರಿಗೆ ಸಿಕ್ತು ಭಾರಿ ಚಿನ್ನ..!

    ಬೆಂಗಳೂರು: ರಾತ್ರಿ ಪಾಳಿ ಗಸ್ತಿನಲ್ಲಿದ್ದ ಪೊಲೀಸರಿಗೆ ಭಾರಿ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಪೊಲೀಸ್ ಸಿಬ್ಬಂದಿ ಹನುಮಂತ ಹಾಗೂ ಆನಂದ ಅವರು ದೊಡ್ಡ ಪೇಟೆ ವೃತ್ತದ ಬಳಿ ವಾಹನ ಪರಿಶೀಲಿಸುತ್ತಿದ್ದಾಗ ಆ್ಯಕ್ಟೀವ್ ಹೊಂಡಾ ದ್ವಿಚಕ್ರ ವಾಹನದಲ್ಲಿ ಭಾರಿ ಚಿನ್ನಾಭರಣ ಪತ್ತೆಯಾಗಿದೆ.

    ವಿಚಾರಣೆ ವೇಳೆ ನಗರ್ತ್ ಪೇಟೆಯ ಎಸ್.ಎಸ್ ಜ್ಯೂವೆಲ್ಲರ್ಸ್​ಗೆ ಸೇರಿದ ಚಿನ್ನಭಾರಣ ಎಂದು ತಿಳಿದುಬಂದಿದ್ದು, ಮುಂಬೈ ಮೂಲದ‌ ದಳಪತ್ ಸಿಂಗ್ ಹಾಗೂ ರಾಜಸ್ತಾನದ ವಿಕಾಸ್ ಎಂಬವವರ ಬಳಿ ಚಿನ್ನಾಭರಣ ಸಿಕ್ಕಿದೆ. ಒಟ್ಟು 6.55 ಗ್ರಾಂ ಚಿನ್ನ, 67 ನೆಕ್ಲೇಸ್ ಜಪ್ತಿಯಾಗಿದ್ದು, ಅಂದಾಜು 3 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಎನ್ನಲಾಗಿದೆ.

    ಇದನ್ನೂ ಓದಿ: 5 ವರ್ಷ ನಿಗೂಢವಾಗಿದ್ದ ಯುವತಿ ನಾಪತ್ತೆ ಪ್ರಕರಣ ರಹಸ್ಯ ಬಯಲು: ಕೊಲೆಗಾರ ಪತಿ ಸಿಕ್ಕಿ ಬಿದ್ದಿದ್ದೆ ರೋಚಕ!

    ಸದ್ಯ ಇಬ್ಬರನ್ನು ಕೆ.ಆರ್​ ಮಾರ್ಕೆಟ್​ ಪೊಲೀಸರು ಬಂಧಿಸಿದ್ದು, ಪತ್ತೆಯಾದ ಚಿನ್ನ ಅಸಲಿನಾ? ಅಥವಾ ನಕಲಿನಾ? ಎಂಬುದರ ಬಗ್ಗೆ ಪರಿಶೀಲನೆ ಮುಂದುವರೆಸಿದ್ದಾರೆ.

    ಜಪ್ತಿಯಾದ ಆಭರಣಗಳೆಲ್ಲ ಆ್ಯಂಟಿಕ್​ ಪೀಸ್
    ಜಪ್ತಿಯಾದ ಆಭರಣಗಳೆಲ್ಲ ಆ್ಯಂಟಿಕ್​ ಪೀಸ್ ಆಗಿದ್ದು, ಮುಂಬೈನಲ್ಲಿ ತಯಾರಾಗಿರುವುದಾಗಿ ತಿಳಿದುಬಂದಿದೆ. ಮುಂಬೈನಿಂದ ಬೆಂಗಳೂರಿಗೆ ಕೊರಿಯರ್ ಮೂಲಕ ಬಂದಿತ್ತು. ಬಳಿಕ ಬೆಂಗಳೂರಿನಲ್ಲಿ ಚಿನ್ನಾಭರಣ ತೆಗೆದುಕೊಂಡು ಬ್ಯಾಗ್​ನಲ್ಲಿ ಹಾಕಿಕೊಂಡು ಅಂಗಡಿಗೆ ಹೋಗಿ ಸ್ಯಾಂಪಲ್ ತೋರಿಸ್ತಿದ್ರು. ಅಂಗಡಿಯವರು ಆರ್ಡರ್ ಕೊಟ್ರೆ ಮತ್ತೆ ತಯಾರು ಮಾಡಿ ಕೊಡುತ್ತಿದ್ದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ. (ದಿಗ್ವಿಜಯ ನ್ಯೂಸ್​)

    ನೆಪ ಹೇಳಿ ಮನೆಗೆ ನುಗ್ಗಿ ಹಾಡಹಗಲೇ ದಂತ ವೈದ್ಯೆಯ ಬರ್ಬರ ಹತ್ಯೆ: ಬೆಚ್ಚಿಬಿದ್ದ ರಾಜ್ಯದ ಜನತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts