More

    ಹೂಗಾರ ಮಾದಯ್ಯ ಜಯಂತ್ಯುತ್ಸವ ನ.5ರಂದು

    ರಾಯಚೂರು: ನಗರದ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ನ.5ರಂದು ಬೆಳಗ್ಗೆ 11.30ಕ್ಕೆ ಹೂಗಾರ ಮಾದಯ್ಯ ಜಯಂತ್ಯುತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಹೂಗಾರ ಸಮಾಜ ಸಂಘದ ಅಧ್ಯಕ್ಷ ಈರಣ್ಣ ಹೂಗಾರ ತಿಳಿಸಿದರು.

    ಇದನ್ನೂ ಓದಿ: ಕಾಯಕಯೋಗಿ ಶರಣ ಮಾದಯ್ಯ – ಈರಣ್ಣ ಪಟ್ಟಣಶೆಟ್ಟಿ ಹೇಳಿಕೆ

    ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಜಯಂತ್ಯುತ್ಸವ ನಿಮಿತ್ತ ಸೋಮವಾರಪೇಟೆ ಹಿರೇಮಠದಿಂದ ಕಲ್ಯಾಣ ಮಂಟಪದವರೆಗೆ ಕಲಾತಂಡಗಳೊಂದಿಗೆ ಹೂಗಾರ ಮಾದಯ್ಯ ಭಾವಚಿತ್ರದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.

    ಎಸ್ಸೆಸ್ಸೆಲ್ಸಿ, ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಶೇ.70ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ತೇರ್ಗಡೆ ಹೊಂದಿದ 70 ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂ. ಬಹುಮಾನ ನೀಡಿ ಗೌರವಿಸಲಾಗುವುದು. ಈ ಹಿಂದೆ ತಾಲೂಕುವಾರು ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಮೊದಲ ಬಾರಿಗೆ ಜಿಲ್ಲಾ ಮಟ್ಟದ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

    ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಕಾರ್ಯಕ್ರಮ ಉದ್ಘಾಟಿಸಲಿದ್ದು, ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಂಸದರಾದ ರಾಜಾ ಅಮರೇಶ್ವರ ನಾಯಕ, ಸಂಗಣ್ಣ ಕರಡಿ ಹಾಗೂ ಜಿಲ್ಲೆಯ ಶಾಸಕರು ಮತ್ತು ಸಮುದಾಯದ ಪ್ರಮುಖರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಈರಣ್ಣ ಹೂಗಾರ ತಿಳಿಸಿದರು.

    ರಾಜ್ಯ ಹೂಗಾರ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಹೂಗಾರ ಮಾತನಾಡಿ, ಸಣ್ಣ ಸಮುದಾಯವಾಗಿರುವ ಹೂಗಾರ ಸಮಾಜ ಏಳಿಗೆ ಕಾಣಲು ಸರ್ಕಾರದ ಸೌಲಭ್ಯಗಳನ್ನು ಪಡೆಯುವುದು ಅಗತ್ಯವಾಗಿದೆ. ಪ್ರತ್ಯೇಕ ಅಭಿವೃದ್ಧಿ ನಿಗಮ, ಸಮುದಾಯ ಭವನ ನಿರ್ಮಾಣ ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಸಮಾವೇಶದ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

    ಪದಾಧಿಕಾರಿಗಳಾದ ಉಗ್ರನರಸಿಂಹಪ್ಪ ಹೂಗಾರ, ಮಲ್ಲಿಕಾರ್ಜುನ ಹೂಗಾರ, ಬಸವರಾಜ ಹೂಗಾರ, ಅಮರೇಶ, ಬಲಭೀಮ, ಲಿಂಗರಾಜು, ಮಲ್ಲಪ್ಪ ಹೂಗಾರ, ಭೀಮಣ್ಣ ಹೂಗಾರ, ಶಶಿಧರ ಹೂಗಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts