More

    ಕಾಯಕಯೋಗಿ ಶರಣ ಮಾದಯ್ಯ – ಈರಣ್ಣ ಪಟ್ಟಣಶೆಟ್ಟಿ ಹೇಳಿಕೆ

    ಬಸವನಬಾಗೇವಾಡಿ: ಹನ್ನರಡನೇ ಶತಮಾನದಲ್ಲಿ ಕಲ್ಯಾಣದಲ್ಲಿರುವ ಬಸವಾದಿ ಶರಣರ ಮನೆ ಮನೆಗಳಿಗೆ ಹೂ, ಹಾರ ಕೊಡುವ ಕಾರ್ಯದಲ್ಲಿ ಶರಣ ಮಾದಯ್ಯನವರು ತೊಡಗಿಕೊಂಡಿದ್ದರು ಎಂದು ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಹೇಳಿದರು.

    ಪಟ್ಟಣದ ಹನುಮಾನ ಮಂದಿರದಲ್ಲಿ ತಾಲೂಕು ಹೂಗಾರ ಸಮಾಜ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಾಯಕ ಜೀವಿ ಶರಣ ಹೂಗಾರ ಮಾದಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಶರಣ ಮಾದಯ್ಯನವರ ಧರ್ಮಪತ್ನಿ ಶರಣೆ ಮಾದೇವಿಯವರೂ ಅನೇಕ ವಚನಗಳನ್ನು ರಚಿಸಿದ್ದಾರೆ. ಆದರೆ, ಅವುಗಳು ಜನರ ಕೈಗೆ ಸಿಕ್ಕಿಲ್ಲ ಎಂದು ಜಾನಪದ ಸಾಹಿತ್ಯದಲ್ಲಿ ಉಲ್ಲೇಖವಿದೆ ಎಂದರು.

    ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಹೂಗಾರ ಮಾದಯ್ಯನವರ ಇಷ್ಟಲಿಂಗ ಧರಿಸಿಕೊಂಡು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ತ್ವವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅನುಭವ ಮಂಟಪದ ಸದಸ್ಯರಾಗಿದ್ದರು ಎಂದರು.

    ಪಟ್ಟಣದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣ ಹಾಗೂ ಅವರ ಸಮಕಾಲಿನ ಶರಣರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜಕ್ಕೆ ಸಾಮರಸ್ಯ ಭಾವೈಕ್ಯದ ಬಗ್ಗೆ ಬದುಕು ಕಟ್ಟಿಕೊಟ್ಟ ಮಹಾನ್ ಶರಣರು ಎಂದರು.

    ಪಟ್ಟಣದ ವಿರಕ್ತಮಠದ ಸಿದ್ಧಲಿಂಗ ಶ್ರೀಗಳು ಮಾತನಾಡಿ, ಸಮಾಜದಲ್ಲಿ ನಾವು ಮಾಡುವ ಕಾಯಕದ ಮೇಲೆ ಜಾತಿ, ಧರ್ಮ ಸೃಷ್ಟಿಯಾಗುತ್ತದೆ. ಯಾರೂ ದೇವರಲ್ಲಿ ಇಂತ ಜಾತಿ, ಧರ್ಮದಲ್ಲೇ ಹುಟ್ಟಬೇಕೆಂದು ಅರ್ಜಿ ಹಾಕಿಲ್ಲ ಎಂದರು.

    ಹೂಗಾರ ಸಮಾಜದ ಮುಖಂಡ ಶೇಖಪ್ಪ ಹೂಗಾರ, ನಿವೃತ್ತ ಶಿಕ್ಷಕ ಎಫ್.ಡಿ.ಮೇಟಿ, ಬಸವಸೈನ್ಯದ ಮುಖಂಡ ಶಂಕರಗೌಡ ಬಿರಾದಾರ ಸೇರಿ ಆನೇಕರಿದ್ದರು. ಇದಕ್ಕೂ ಮುನ್ನ ಶರಣ ಮಾದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts