More

    ಗ್ಲಾಸ್​ ಹೌಸ್​ ಮಂಗನ ಕಾಟಕ್ಕೆ ಬ್ರೇಕ್​

    ಹುಬ್ಬಳ್ಳಿ: ಇಲ್ಲಿನ ಇಂದಿರಾ ಗಾಜಿನ ಮನೆ ಮತ್ತು ಉದ್ಯಾನದಲ್ಲಿ ಒಂದು ತಿಂಗಳಿಂದ ಮಕ್ಕಳಿಗೆ ಕಾಟ ಕೊಡುತ್ತಿದ್ದ ಮಂಗನನ್ನು ಹಿಡಿಯುವಲ್ಲಿ ಹು&ಧಾ ಮಹಾನಗರ ಪಾಲಿಕೆ ಯಶಸ್ವಿಯಾಗಿದೆ.
    ಗ್ಲಾಸ್​ ಹೌಸ್​ನಲ್ಲಿ ಮಂಗಗಳ ಹಾವಳಿ ಹೆಚ್ಚಾಗಿತ್ತು. ಅದರಲ್ಲೂ ಒಂದು ಮಂಗ ಮಕ್ಕಳನ್ನೇ ಟಾರ್ಗೆಟ್​ ಮಾಡಿತ್ತು. ರನ್ನಿಂಗ್​, ಸ್ಕೇಟಿಂಗ್​ ಮಾಡುವ ಮಕ್ಕಳ ಬೆನ್ನಟ್ಟಿ ಅವರ ಮೇಲೆ ಎರಗುತ್ತಿತ್ತು. ಇದರಿಂದ ಇಲ್ಲಿಗೆ ಬರುವ ಮಕ್ಕಳು ಭಯಭೀತರಾಗಿದ್ದರು. ಕೆಲ ಮಕ್ಕಳು ಉದ್ಯಾನಕ್ಕೆ ಬರುವುದನ್ನೇ ಬಿಟ್ಟಿದ್ದರು. ಈ ಕುರಿತು “ವಿಜಯವಾಣಿ’ ಆ.26ರಂದು “ಗ್ಲಾಸ್​ ಹೌಸ್​ ಉದ್ಯಾನದಲ್ಲಿ ಮಂಗನ ಕಾಟ’ ಎಂಬ ಶೀಷಿರ್ಕೆಯಡಿ ವರದಿ ಪ್ರಕಟಿಸಿತ್ತು.
    ಕೂಡಲೇ ಎಚ್ಚೆತ್ತ ಪಾಲಿಕೆ ವಲಯ 9ರ ಸಹಾಯಕ ಆಯುಕ್ತ ನಾಗರಾಜ.ಕೆ. ಮಂಗನನ್ನು ಹಿಡಿಯುವ ತಂಡ ಕರೆಸಿ ಕಾರ್ಯಾಚರಣೆ ನಡೆಸಿದರು. ಮಂಗನನ್ನು ಸುರತವಾಗಿ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
    ನವನಗರದಲ್ಲೂ ವಾನರ ಹಾವಳಿ :
    ನವನಗರ ಸುತ್ತಮುತ್ತಲಲ್ಲೂ ಮಂಗನ ಹಾವಳಿ ಹೆಚ್ಚಾಗಿತ್ತು ಎಂದು ಸಾರ್ವಜನಿಕರಿಂದ ದೂರು ಬಂದಿತ್ತು. ಹಾಗಾಗಿ, ಅಲ್ಲಿಯೂ ಮಂಗಗಳನ್ನು ಹಿಡಿಯಲಾಗಿದೆ ಎಂದು ವಲಯ 5ರ ಸಹಾಯಕ ಆಯುಕ್ತ ಶಂಕರ ಪಾಟೀಲ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts