More

    ಪಾಲಿಸ್ಟರ್​ ಅಬ್ಬರದಲ್ಲೂ ಕುಗ್ಗದ “ಖಾದಿ ರಾಷ್ಟ್ರ ಧ್ವಜ’; ಈ ಬಾರಿ ಎರಡೂವರೆ ಕೋಟಿ ರೂ. ವಹಿವಾಟು

    ಕೇಶವಮೂತಿ೯ ವಿ.ಬಿ. ಹುಬ್ಬಳ್ಳಿ
    ಕೇಂದ್ರ ಸರ್ಕಾರ ಧ್ವಜ ಸಂಹಿತೆಗೆ ತಿದ್ದುಪಡಿ ತರುವ ಮೂಲಕ ಪಾಲಿಸ್ಟರ್​ ಧ್ವಜ ಬಳಕೆಗೆ ಅನುಮತಿ ನೀಡಿದ ಬಳಿಕ ದೇಶದೆಲ್ಲೆಡೆಗೆ ಪಾಲಿಸ್ಟರ್​ ವರ್ಸಸ್​ ಖಾದಿ ರಾಷ್ಟ್ರಧ್ವಜ ಎಂಬ ಚರ್ಚೆ ಶುರುವಾಗಿತ್ತು. ಇದರಿಂದ ಖಾದಿ ಧ್ವಜಕ್ಕೆ ಹಿನ್ನೆಡೆಯಾಗಲಿದೆ ಎಂಬ ಆತಂಕ ಖಾದಿ ತಯಾರಕರಲ್ಲಿ ಮೂಡಿತ್ತು. ಈ ನಡುವೆಯೂ ದೇಶದ ಏಕೈಕ ಅಧಿಕೃತ ರಾಷ್ಟ್ರಧ್ವಜ ತಯಾರಿಸುವ ಇಲ್ಲಿನ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂದಲ್ಲಿ ಈ ಬಾರಿ ಎರಡೂವರೆ ಕೋಟಿ ರೂ. ವಹಿವಾಟು ನಡೆದಿದೆ. ಪಾಲಿಸ್ಟರ್​ ಅಬ್ಬರದ ನಡುವೆಯೂ ಖಾದಿ ರಾಷ್ಟ್ರಧ್ವಜ ತನ್ನದೇ ಆದ ವೈಶಿಷ್ಟತೆ ಮೆರೆದಿದೆ.
    75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆಂದು ಹೆಚ್ಚು ಖಾದಿ ರಾಷ್ಟ್ರಧ್ವಜ ತಯಾರಿಸಿದ್ದ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂ ಹಾಗೂ ಇದರ 70ಕ್ಕೂ ಹೆಚ್ಚು ಅಂಗ ಸಂಸ್ಥೆಗಳು ಆತಂಕಕ್ಕೀಡಾಗಿದ್ದವು. ಪಾಲಿಸ್ಟರ್​ ಆದೇಶದ ವಿರುದ್ಧ ಖಾದಿ ಸಂಸ್ಥೆಗಳು ಸೇರಿ ಇತರೆ ಸಂ& ಸಂಸ್ಥೆಗಳು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದವು. ಬಳಿಕ ಕೇಂದ್ರದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಜಿಲ್ಲಾಧಿಕಾರಿಗಳು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಖಾದಿ ರಾಷ್ಟ್ರಧ್ವಜವನ್ನೇ ಹಾರಿಸಬೇಕು ಎಂದು ಆದೇಶಿಸಿದರು. ಅಷ್ಟರಲ್ಲಾಗಲೇ ಪಾಲಿಸ್ಟರ್​ ಧ್ವಜಗಳ ಬಣ್ಣ ಬಯಲಾಗಿತ್ತು. ಖಾದಿ ಧ್ವಜಗಳ ಮಹತ್ವದ ಅರಿವಾಗಿತ್ತು. ಇದರಿಂದಾಗಿ ಖಾದಿ ಗ್ರಾಮೋದ್ಯೋಗದಲ್ಲಿ ಈ ಬಾರಿ ಖಾದಿ ತಿರಂಗಾ ಧ್ವಜಗಳು ದಾಖಲೆಯ ಮಾರಾಟವಾಗಿವೆ.
    ಸ್ವಾತಂತ್ರ್ಯ ಹೋರಾಟಗಾರ ವೆಂಕಟೇಶ ಮಾಗಡಿ ಅವರು 1957ರಲ್ಲಿ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂ ಪ್ರಾರಂಭಿಸಿದರು. ಅಂದಿನಿಂದ ಈವರೆಗೆ ಇಲ್ಲಿ ಧ್ವಜ ಸಂಹಿತೆ ಹಾಗೂ ಬಿಐಎಸ್​ ಗುರುತಿನ ನಿಯಮಾವಳಿ ಪ್ರಕಾರ ಖಾದಿ ತ್ರಿವರ್ಣ ಧ್ವಜಗಳನ್ನು ತಯಾರಿಸಲಾಗುತ್ತಿದೆ. ಸಂಸ್ಥೆಯಲ್ಲಿ 1200 ಕಾಮಿರ್ಕರು ಕೆಲಸ ಮಾಡುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ರಾಷ್ಟ್ರಧ್ವಜದ ಬಟ್ಟೆಗೆ ಬೇಕಾದ ನೂಲು ತಯಾರಾಗುತ್ತದೆ. ನಂತರ ಇಲ್ಲಿನ ಬೆಂಗೇರಿಯಲ್ಲಿ ಅದಕ್ಕೆ ಕೇಸರಿ, ಬಿಳಿ, ಹಸಿರು ಬಣ್ಣ ಹಾಗೂ ಅಶೋಕ ಚಕ್ರ ಮುದ್ರಿಸಿ ಧ್ವಜ ಸಿದ್ಧಪಡಿಸಲಾಗುತ್ತದೆ.
    ಇಲ್ಲಿ 2 ಇಂಚು ಅಳತೆಯ 5 ರೂ. ಬೆಲೆಯ ಪುಟಾಣಿ ಖಾದಿ ಧ್ವಜದಿಂದ ಹಿಡಿದು, 14/21 ಅಡಿ ಅಳತೆಯ 24,000 ರೂ. ಮೌಲ್ಯದ ಬೃಹತ್​ ರಾಷ್ಟ್ರಧ್ವಜಗಳೂ ಲಭ್ಯ. ಇಲ್ಲಿ ತಯಾರಿಸಿದ ರಾಷ್ಟ್ರಧ್ವಜಗಳು ದೆಹಲಿ ಸಂಸತ್​ ಭವನ, ಕೆಂಪುಕೋಟೆ, ಬೆಂಗಳೂರಿನ ವಿಧಾನಸೌಧದಲ್ಲಿ ರಾರಾಜಿಸುತ್ತವೆ. ಅಮೆರಿಕ, ರಷ್ಯಾ, ಇಂಗ್ಲೆಂಡ್​ ಸೇರಿದಂತೆ ವಿದೇಶಗಳಲ್ಲಿನ ಭಾರತೀಯ ರಾಯಭಾರಿ ಕಚೇರಿಗಳ ಮೇಲೂ ಇಲ್ಲಿ ತಯಾರಿಸಿದ ಧ್ವಜಗಳು ಹಾರಾಡುತ್ತವೆ ಎಂಬುದು ಹೆಮ್ಮೆಯ ಸಂಗತಿ.

    ಈ ಬಾರಿ ದಾಖಲೆಯ ಮಾರಾಟ
    2019ರಲ್ಲಿ 3 ಕೋಟಿ ರೂ., 2020ರಲ್ಲಿ 1.90 ಕೋಟಿ ರೂ., 2021ರಲ್ಲಿ ಎರಡೂವರೆ ಕೋಟಿ ರೂ. ಮೌಲ್ಯದ ರಾಷ್ಟ್ರಧ್ವಜಗಳು ಮಾರಾಟವಾಗಿದ್ದವು. ಈ ಬಾರಿ 2022ರ ಏಪ್ರಿಲ್​ನಿಂದ ಆಗಸ್ಟ್​ 15ರವರೆಗೆ ದಾಖಲೆಯ ಎರಡೂವರೆ ಕೋಟಿ ರೂ. ವಹಿವಾಟು ನಡೆದಿದೆ. 2023 ಮಾರ್ಚ್​ವರೆಗೆ ಒಟ್ಟು 5 ಕೋಟಿ ರೂ. ವಹಿವಾಟು ನಡೆಸುವ ಗುರಿ ಇದೆ ಎಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂದ ಕಾರ್ಯದಶಿರ್ ಶಿವಾನಂದ ಮಠಪತಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts