More

    ಟಿಕೆಟ್‌ರಹಿತ ಪ್ರಯಾಣಕ್ಕೆ 30 ಲಕ್ಷ ರೂ. ದಂಡ

    ವಿರೂಪಾಕ್ಷಯ್ಯ ಗುದ್ನಯ್ಯನವರಮಠ ಹುಬ್ಬಳ್ಳಿ
    ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ 2023ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಎಂಟು ತಿಂಗಳಲ್ಲಿ ಟಿಕೆಟ್‌ರಹಿತ ಪ್ರಯಾಣಿಕರಿಂದ ಒಟ್ಟು 30,83,865 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
    ವಾಕರಸಾ ಸಂಸ್ಥೆ ವ್ಯಾಪ್ತಿಯು ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಬಾಗಲಕೋಟೆ ಹಾಗೂ ಬೆಳಗಾವಿ ಸೇರಿ ಒಟ್ಟು 6 ಜಿಲ್ಲೆಗಳನ್ನು ಒಳಗೊಂಡಿದೆ. ಎಂಟು ತಿಂಗಳಲ್ಲಿ 71 ತನಿಖಾ ಸಿಬ್ಬಂದಿ 12,331 ದಿನಗಳಲ್ಲಿ 1,32,196 ಬಸ್‌ಗಳಲ್ಲಿ ತಪಾಸಣೆ ನಡೆಸಿ, ಟಿಕೆಟ್ ರಹಿತವಾಗಿ ಸಂಚರಿಸುತ್ತಿದ್ದ 32,769 ಪ್ರಯಾಣಿಕರ ವಿರುದ್ಧ 9,148 ಪ್ರಕರಣ ದಾಖಲಿಸಿದ್ದಾರೆ.
    ಕಳೆದ ವರ್ಷ 9,919 ಪ್ರಕರಣ:
    ಕಳೆದ ವರ್ಷ ಎಂಟು ತಿಂಗಳಲ್ಲಿ (2022ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ) 68 ತನಿಖಾ ಸಿಬ್ಬಂದಿ 12,485 ದಿನಗಳಲ್ಲಿ 1,36,000 ಬಸ್‌ಗಳಲ್ಲಿ ತಪಾಸಣೆ ನಡೆಸಿ, ಟಿಕೆಟ್ ರಹಿತವಾಗಿ ಸಂಚರಿಸುತ್ತಿದ್ದ 31,410 ಪ್ರಯಾಣಿಕರಿಂದ 31,94,033 ರೂ. ದಂಡ ವಿಧಿಸಿ, 9,919 ಪ್ರಕರಣ ದಾಖಲಿಸಿದ್ದರು.
    ದೂರು ಆಧರಿಸಿ ಕ್ರಮ:
    ಕೆಲವೊಮ್ಮೆ ಚಾಲಕರ ಅಸುರಕ್ಷಿತ ಚಾಲನೆ, ನಿಗದಿತ ಕೋರಿಕೆ ನಿಲ್ದಾಣಗಳಲ್ಲಿ ಬಸ್‌ಗಳನ್ನು ನಿಲ್ಲಿಸದಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿರುತ್ತವೆ. ಅಂಥ ಕಡೆಗಳಲ್ಲಿ ತನಿಖಾಧಿಕಾರಿಗಳು ತೆರಳಿ ಪರಿಶೀಲಿಸುತ್ತಾರೆ. ನಿಗದಿತ ನಿಲ್ದಾಣಗಳಲ್ಲಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕರೆದೊಯ್ಯಬೇಕು ಎಂದು ಚಾಲಕ, ನಿರ್ವಾಹಕರಿಗೆ ಸೂಚಿಸುತ್ತೇವೆ. ಜತೆಗೆ ಟಿಕೆಟ್ ಪಡೆದು ಪ್ರಯಾಣಿಸುವಂತೆ ಪ್ರಯಾಣಿಕರಿಗೆ ತಿಳಿ ಹೇಳುತ್ತೇವೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

    6 ಜಿಲ್ಲೆಗಳ 9 ವಿಭಾಗಗಳಲ್ಲಿ ಕೇಂದ್ರೀಯ ತನಿಖಾ ದಳ, ವಿಭಾಗ ಮಟ್ಟದ ತನಿಖಾ ದಳ ಹಾಗೂ ಭದ್ರತಾ ಶಾಖೆ ಅಧಿಕಾರಿಗಳ ತಂಡ ನಿರಂತರವಾಗಿ ಬಸ್‌ಗಳಲ್ಲಿ ತಪಾಸಣೆ ನಡೆಸುತ್ತದೆ. ಟಿಕೆಟ್‌ರಹಿತ ಪ್ರಯಾಣಿಕರಿಂದ ದಂಡ ವಸೂಲಿ ಜತೆಗೆ ಚಾಲಕ, ನಿರ್ವಾಹಕರು ಆಯಾ ನಿಲ್ದಾಣಗಳಲ್ಲಿ ಸರಿಯಾಗಿ ಬಸ್ ನಿಲ್ಲಿಸುತ್ತಾರೋ, ಇಲ್ಲವೋ ಎಂಬುದನ್ನು ಪರಿಶೀಲಿಸುತ್ತೇವೆ. ಸುರಕ್ಷಿತ ಚಾಲನೆ, ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಿ, ಚಾಲಕ- ನಿರ್ವಾಹಕರಿಗೆ ಶಿಸ್ತು ಪಾಲಿಸುವಂತೆ ತಿಳಿ ಹೇಳುತ್ತೇವೆ.
    ರಾಜೇಶ ಹುದ್ದಾರ, ಮುಖ್ಯ ಸಂಚಾರ ವ್ಯವಸ್ಥಾಪಕರು
    ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ

    ಶಕ್ತಿ ಯೋಜನೆ ಶುರುವಾದ ಬಳಿಕ ಮಹಿಳೆಯರಿಗೆ ಪ್ರಯಾಣ ಉಚಿತವಾಗಿದೆ. ಆದರೆ, ಪುರುಷರು, ಶಾಲಾ ವಿದ್ಯಾರ್ಥಿಗಳಿಗೆ ಸಂಚರಿಸಲು ಸ್ವಲ್ಪ ಸಮಸ್ಯೆಯಾಗಿದೆ. ಬಸ್‌ಗಳ ಸಂಚಾರ ಮೊದಲಿನಷ್ಟೇ ಇದೆ. ಆದರೆ, ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು. ಇದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ.
    ಈರಯ್ಯ ಮರಯ್ಯನವರಮಠ, ಪ್ರಯಾಣಿಕ ಹುಬ್ಬಳ್ಳಿ


    6 ಜಿಲ್ಲೆಗಳಲ್ಲಿ ಟಿಕೆಟ್ ರಹಿತರ ಪ್ರಯಾಣ, ಸಂಗ್ರಹಿಸಿದ ದಂಡ
    ವಿವರ —– 2022-23 —- 2023-24
    ತನಿಖಾ ಸಿಬ್ಬಂದಿ 68 —- 71
    ತನಿಖಾ ದಿನಗಳು 12,485 —- 12,331
    ತನಿಖೆ ಮಾಡಿದ
    ವಾಹನಗಳು 1,36,000 —– 1,32,196
    ಪ್ರಕರಣ 9,919 —- 9,148
    ಸಂಗ್ರಹಿಸಿದ ಸೋರಿಕೆ
    ಮೊತ್ತ 2,74,753 —- 2,87,785
    ಸಂಗ್ರಹಿಸಿದ ದಂಡ 29,19,280 —- 27,96,080
    ದಂಡ ಪಾವತಿಸಿದ
    ಪ್ರಯಾಣಿಕರು 31,410 —- 32,769

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts