More

    ಖಾಸಗಿ ವಿಡಿಯೋವನ್ನು ಮಾಧ್ಯಮಗಳಿಗೆ ನೀಡುವ ಬೆದರಿಕೆ! ಯುವಕನನ್ನು ಕೂಡಿ ಹಾಕಿ ಹಲ್ಲೆ ನಡೆಸಿದ ರೌಡಿ ಗ್ಯಾಂಗ್!

    ಹುಬ್ಬಳ್ಳಿ: ಪ್ರೀತಿಯ ಬಲೆಯಲ್ಲಿದ್ದ ಯುವಕನಿಗೆ ಖಾಸಗಿ ವಿಡಿಯೋಗಳನ್ನು ಮಾಧ್ಯಮಗಳಿಗೆ ನೀಡುವ ಬೆದರಿಕೆ ಹಾಕಿ ಹಣ ಕೀಳಲೆಂದು ಮನಸೋಇಚ್ಛೆ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ಕುಮಾರಸ್ವಾಮಿ ಕೊಡಗಿಮಠ(22) ಹೆಸರಿನ ಯುವಕ ಕಾವೇರಿ ಪಾಟೀಲ್‌ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಶನಿವಾರ ಸಂಜೆ ಕರೆ ಮಾಡಿದ್ದ ಕಾವೇರಿ ಮಾತನಾಡುವುದಿದೆ ಕುಮಾರಸ್ವಾಮಿಯನ್ನು ಕರೆಸಿಕೊಂಡಿದ್ದಳು. ಆ ಸಮಯದಲ್ಲಿ ಆತನನ್ನು ಅಪಹರಿಸಿ, ರೂಮಿನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಲಾಗಿದೆ. ನಿನ್ನ ಮತ್ತು ಯುವತಿಯ ಖಾಸಗಿ ವಿಡಿಯೋಗಳು ನಮ್ಮ ಬಳಿ ಇದೆ. ಐದು ಲಕ್ಷ ಹಣ ಕೊಡು, ಇಲ್ಲವಾದರೆ ಆ ವಿಡಿಯೋವನ್ನು ಮಾಧ್ಯಮಗಳಿಗೆ ಕೊಡುತ್ತೇವೆ ಎಂದು ಬೆದರಿಸಲಾಗಿದೆ. ಆತನ ಮೇಲೆ ಹಲ್ಲೆ ನಡೆಸಲಾಗಿದೆ.

    ಹೊಸೂರಿನ ರೌಡಿ ಗ್ಯಾಂಗ್​ನ ಶಕ್ತಿ ದಾಂಡೇಲಿ, ರಾಹುಲ್ ಪ್ರಭು ಹಾಗೂ ಅವರ ಸಹಚರರು ಬ್ಲ್ಯಾಕ್ಮೇಲ್ ಮಾಡಿ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಐದು ಲಕ್ಷ ಹಣ ನೀಡುವಂತೆ ಆತನ ಸ್ನೇಹಿತರ ಮೂಲಕ‌ ಕುಟುಂಬದವರಿಗೆ ಬೆದರಿಕೆ ಹಾಕಿರುವುದಾಗಿ ಹೇಳಲಾಗಿದೆ. ತಕ್ಷಣ ಜಾಗೃತರಾದ ಯುವಕನ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಗೋಕುಲ್ ರೋಡ್ ಠಾಣಾ ಪೊಲೀಸರು ಸಂತೋಷ ಬ್ಯಾಹಟ್ಟಿ,‌ ಮಂಜು ಸೇರಿದಂತೆ 10 ಜನರ ವಿರುದ್ಧ ಎಫ್.ಐ.ಆರ್ ದಾಖಲಿಸಿಕೊಂಡಿದ್ದಾರೆ.

    VIDEO| ಭೂತದ ಪಕ್ಷಿ ನೋಡಿ ಹೆದರಿದ ಮಹಿಳೆ: ಹತ್ತಿರ ಹೋದವಳಿಗೆ ಕಾದಿತ್ತು ಬಿಗ್​ ಶಾಕ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts