More

    ಆಕ್ಸ್​ಫರ್ಡ್​ ವಿವಿ ಕರೊನಾ ಲಸಿಕೆ ಫಲಿತಾಂಶ ಪ್ರಕಟ; ಹೊಸ ಭರವಸೆ ಮೂಡಿದ್ದೇಕೆ?

    ನವದೆಹಲಿ: ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಸಂಶೋಧಕರು ಅಸ್ಟ್ರಾಜೆನೆಕಾ ಕಂಪನಿಯೊಮದಿಗೆ ಸೇರಿಕೊಂಡು ಅಭಿವೃದ್ಧಿಪಡಿಸಿರುವ ಕರೊನಾ ನಿಗ್ರಹ ಲಸಿಕೆ ಮೊದಲ ಹಾಗೂ ಎರಡನೇ ಹಂತದ ಕ್ಲಿನಿಕಲ್​ ಟ್ರಯಲ್​ನ ಫಲಿತಾಂಶ ಪ್ರಕಟಗೊಂಡಿದೆ.

    ವೈದ್ಯಕೀಯ ನಿಯತಕಾಲಿಕ ಲಾನ್ಸೆಟ್​ ಈ ಫಲಿತಾಂಶವನ್ನು ಪ್ರಕಟಿಸಿದ್ದು, ಲಸಲಿಕೆಯು ಮಾನವರ ಬಳಕೆಗೆ ಸುರಕ್ಷಿತ, ಸಹಿಷ್ಣು ಗುಣ ಹೊಂದಿದೆ. ಜತೆಗೆ, ಈವರೆಗೆ ಕಂಡು ಬಂದಿರುವ ಫಲಿತಾಂಶಗಳು ಉತ್ತೇಜನಕಾರಿಯಾಗಿವೆ ಎಂದು ಬಣ್ಣಿಸಿದೆ.

    ದೇಹಕ್ಕೆ ಪ್ರವೇಶಿಸಿದ ಕೂಡಲೇ ಪ್ರತಿರೋಧಕ ಶಕ್ತಿಯನ್ನು ತ್ವರಿತವಾಗಿ ಹೆಚ್ಚಿಸಿ ವೈರಸ್​ ವಿರುದ್ಧ ಪ್ರತಿಕ್ರಿಯೆ ನಿಡುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದು, ಸಂಶೋಧನಾ ತಂಡಕ್ಕೆ ಅಭಿನಂದನೆ ಸಲ್ಲಿಸಿದೆ.

    ಇದನ್ನೂ ಓದಿ; ಆಕ್ಸ್​ಫರ್ಡ್​ ವಿವಿ ತಜ್ಞರ ಕರೊನಾ ಲಸಿಕೆ ಅಭಿವೃದ್ಧಿಗೆ ಜೀವವನ್ನೇ ಪಣಕ್ಕಿಟ್ಟ ಭಾರತೀಯ…! |

    ಆಕ್ಸ್​ಫರ್ಡ್​ ವಿವಿಯ ಜೆನ್ನರ್​ ಇನ್​ಸ್ಟಿಟ್ಯೂಟ್​ ಈ ಲಸಿಕೆ ಅಭಿವೃದ್ಧಿ ಪಡಿಸಿದ್ದು, ಇದರ ಮುಖ್ಯಸ್ಥೆ ಸಾರಾ ಗಿಲ್ಬರ್ಟ್​ ಆರಂಭಿಕ ಹಂತದ ಫಲಿತಾಂಶಗಳು ತಂಡದಲ್ಲಿ ಭರವಸೆ ಮೂಡಿಸಿವೆ. ಇನ್ನೂ ಬಹಳಷ್ಟು ಕೆಲಸ ನಡೆಯಬೇಕಿದ್ದು, ಆ ಬಳಿಕವಷ್ಟೇ ಲಸಿಕೆ ಕರೊನಾ ಸಂಕಷ್ಟದಿಂದ ನಮ್ಮನ್ನು ಪಾರು ಮಾಡಲಿದೆ ಎಂದೇ ಹೇಳಬಹುದು ಎಂದು ತಿಳಿಸಿದ್ದಾರೆ.

    ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ ನಡೆಯಬೇಕಿದೆ. ಅದಕ್ಕೂ ಮುನ್ನ ಹಲವು ಸಂಗತಿಗಳನ್ನು ನಾವು ಅರಿಯಬೇಕಿದೆ. ಉದಾಹರಣೆಗೆ ಕರೊನಾ ವೈರಸ್​ ಮಣಿಸಲು ಎಷ್ಟು ಪ್ರಮಾಣಲ್ಲಿ ನಮ್ಮ ದೇಹ ಪ್ರತಿರೋಧಕ ಶಕ್ತಿಯನ್ನು ಹೊಂದಿರ ಬೇಕಾಗತ್ತದೆ ಎಂಬುದು ಗೊತ್ತಿಲ್ಲ. ಒಂದು ವೇಳೆ ಈ ಲಸಿಕೆ ಪರಿಣಾಮಕಾರಿಯಾಗಿದ್ದರೆ, ಇದನ್ನು ಬೃಹತ್​ ಪ್ರಮಾಣದಲ್ಲಿ ತಯಾರಿಸಲು ಸಾಧ್ಯವಿದೆ ಎಂದು ಸಾರಾ ಹೇಳಿದ್ದಾರೆ.

    ಇದನ್ನೂ ಓದಿ; ಕರೊನಾಗೆ ಚುಚ್ಚುಮದ್ದಿಗಿಂತ ಮೂಗಿನ ಔಷಧವೇ ಉತ್ತಮ; ಆಕ್ಸ್​ಫರ್ಡ್​ ವಿವಿ ಸಂಶೋಧಕರ ಅಭಿಮತ

    ಈ ಲಸಿಕೆ ಯಶಸ್ವಿಯಾದಲ್ಲಿ ಕರೊನಾ ಸೋಂಕು ತಡೆಗಟ್ಟಲು, ಕೋವಿಡ್​ಗೆ ಚಿಕಿತ್ಸೆ ನೀಡಲು, ಮರಣವನ್ನು ತಪ್ಪಿಸಲು ಬಳಸಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ. ಒಟ್ಟಿನಲ್ಲಿ ಆಕ್ಸ್​ಫರ್ಡ್​ ವಿವಿ ಲಸಿಕೆ ಉಳಿದೆಲ್ಲ ಸಂಶೋಧನೆಗಳಿಗಿಂತ ಮುಂದಿದ್ದು, ಆರಂಭಿಕ ಯಶಸ್ಸಿನಿಂದಾಗಿ ಭಾರಿ ಭರವಸೆ ಮೂಡಿಸಿದೆ.

    ಕರೊನಾಗೆ ಚುಚ್ಚುಮದ್ದಿಗಿಂತ ಮೂಗಿನ ಔಷಧವೇ ಉತ್ತಮ; ಆಕ್ಸ್​ಫರ್ಡ್​ ವಿವಿ ಸಂಶೋಧಕರ ಅಭಿಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts