More

    ‘ಎಷ್ಟು ಲಸಿಕೆ ಆರ್ಡರ್ ಮಾಡಿದ್ದೀರಿ ?’ – ಮೋದಿಗೆ ಮನಮೋಹನ್​ ಸಿಂಗ್ ಪ್ರಶ್ನೆ

    ನವದೆಹಲಿ : ಭಾರತದ ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್​​ ರಾಜ್ಯಸಭಾ ಸದಸ್ಯರಾದ ಡಾ. ಮನಮೋಹನ್ ಸಿಂಗ್ ಅವರು ಕರೊನಾ​ ಸಂಕಟದಿಂದ ಪಾರಾಗಲು ಲಸಿಕಾ ಅಭಿಯಾನವನ್ನು ಇನ್ನಷ್ಟು ಸಮರ್ಪಕವಾಗಿ ನಡೆಸುವುದು ಅವಶ್ಯಕವಾಗಿದೆ ಎಂದಿದ್ದಾರೆ. ಕರೊನಾ ವಿರುದ್ಧ ಹೋರಾಟದಲ್ಲಿ ಅತಿಮುಖ್ಯವಾದ ಲಸಿಕಾ ಕಾರ್ಯಕ್ರಮವನ್ನು ಹೆಚ್ಚು ತ್ವರಿತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಐದು ಸಲಹೆಗಳನ್ನು ನೀಡಿ ಪತ್ರ ಬರೆದಿದ್ದಾರೆ.

    “ಭಾರತದಲ್ಲಿ ಕರೊನಾದ ಎರಡನೇ ಅಲೆ ಎದ್ದಿರುವ ಈ ಸಮಯದಲ್ಲಿ ಜನರು ತಮ್ಮ ಬದುಕು ಮತ್ತೆ ಸರಿಹೋಗುವುದಕ್ಕಾಗಿ ಕಾಯುತ್ತಿದ್ದಾರೆ. ಈ ದೃಷ್ಟಿಯಿಂದ ಕರೊನಾ ವಿರುದ್ಧ ಹೋರಾಡಲು ಹಲವಾರು ಪ್ರಯತ್ನಗಳು ನಡೆಯಬೇಕು. ಅವುಗಳಲ್ಲಿ ಮುಖ್ಯವಾದುದು ಲಸಿಕಾ ಕಾರ್ಯಕ್ರಮ” ಎಂದು ಸಿಂಗ್ ಹೇಳಿದ್ದಾರೆ. ಅವರು ನೀಡಿರುವ ಐದು ಸಲಹೆಗಳು ಈ ಕೆಳಗಿನಂತಿವೆ:-

    1. ಮುಂದಿನ ಆರು ತಿಂಗಳಲ್ಲಿ ಎಷ್ಟು ಲಸಿಕೆ ಡೋಸ್​ಗಳ ಸರಬರಾಜು ಮಾಡಲು ಲಸಿಕೆ ಉತ್ಪಾದಕ ಕಂಪನಿಗಳಿಗೆ ಆರ್ಡರ್ ನೀಡಲಾಗಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಬೇಕು. ನಿರ್ದಿಷ್ಟ ಸಂಖ್ಯೆಯ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದ್ದರೆ ಅದಕ್ಕೆ ಸಾಕಾಗುವಷ್ಟು ಲಸಿಕೆಗಳನ್ನು ಆರ್ಡರ್​ ಮಾಡಬೇಕು.

    ಇದನ್ನೂ ಓದಿ: ಕರೊನಾಕ್ಕೆ ಸ್ಯಾಂಡಲ್​ವುಡ್ ನಟ, ನಿರ್ಮಾಪಕ ಬಲಿ

    2. ಹೀಗೆ ಸರಬರಾಜಾಗುವ ಲಸಿಕೆಗಳನ್ನು ಪಾರದರ್ಶಕ ನೀತಿಯ ಅನುಗುಣವಾಗಿ ರಾಜ್ಯಗಳಿಗೆ ಹೇಗೆ ವಿತರಿಸಲಾಗುವುದು ಎಂಬುದನ್ನು ತಿಳಿಯಪಡಿಸಬೇಕು. ಶೇ. 10 ರಷ್ಟು ಲಸಿಕೆಗಳನ್ನು ಮಾತ್ರ ತುರ್ತು ಬಳಕೆಗೆ ಕೇಂದ್ರ ಸರ್ಕಾರ ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು.
    3. 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೂ ಲಸಿಕೆ ಹಾಕಬಹುದಾದ ಮುಂಚೂಣಿ ಕಾರ್ಮಿಕರ ವರ್ಗಗಳನ್ನು ವ್ಯಾಖ್ಯಾನಿಸಲು ರಾಜ್ಯಗಳಿಗೆ ಸ್ವಾತಂತ್ರ್ಯ ನೀಡಬೇಕು. ಉದಾಹರಣೆಗೆ, ಶಾಲಾ ಶಿಕ್ಷಕರು, ಬಸ್, ಆಟೋ ಮತ್ತು ಟ್ಯಾಕ್ಸಿ ಚಾಲಕರನ್ನು, ಪುರಸಭೆ ಮತ್ತು ಪಂಚಾಯತ್ ಸಿಬ್ಬಂದಿ ಮತ್ತು ವಕೀಲರನ್ನು ಮುಂಚೂಣಿ ಕಾರ್ಯಕರ್ತರ ಪಟ್ಟಿಗೆ ರಾಜ್ಯ ಸರ್ಕಾರಗಳು ಸೇರಿಸಬಹುದು.
    4. ಸರ್ಕಾರ ಲಸಿಕೆ ಉತ್ಪಾದಕರಿಗೆ ಎಲ್ಲ ರೀತಿಯ ಬೆಂಬಲ ನೀಡಬೇಕು. ಕರೊನಾ ಲಸಿಕೆಯನ್ನು ಹೆಚ್ಚು ಕಂಪೆನಿಗಳು ಉತ್ಪಾದಿಸಲು ಸಾಧ್ಯವಾಗುವಂತೆ ಕಾನೂನಿನಲ್ಲಿ ಕಂಪಲ್ಸರಿ ಲೈಸೆನ್ಸಿಂಗ್​​ಗೆ ಇರುವ ಅವಕಾಶವನ್ನು ಉಪಯೋಗಿಸಬೇಕು.

    ಇದನ್ನೂ ಓದಿ: ಆಗಾಗ್ಗೆ ಬಾಯಾಡಿಸುವ ಬಯಕೆಯೇ ? ಇಲ್ಲಿವೆ ನೋಡಿ, ಐದು ಆರೋಗ್ಯಕರ ಆಯ್ಕೆಗಳು

    5. ದೇಶೀಯ ಲಸಿಕೆ ಉತ್ಪಾದನೆಯು ನಿಯಮಿತವಾಗಿರುವುದರಿಂದ ಯುರೋಪಿಯನ್ ಮೆಡಿಕಲ್ ಏಜೆನ್ಸಿ ಅಥವಾ ಯುಎಸ್‌ಎಫ್‌ಡಿಎಯಂತಹ ವಿಶ್ವಾಸಾರ್ಹ ಪ್ರಾಧಿಕಾರಗಳು ಬಳಕೆಗಾಗಿ ಅನುಮತಿ ನೀಡಿರುವಂತಹ ಅನ್ಯದೇಶದ ಲಸಿಕೆಗಳನ್ನು ಯಾವುದೇ ಪ್ರಯೋಗಗಳ ಷರತ್ತು ಹಾಕದೆ ಆಮದು ಮಾಡಿಕೊಳ್ಳಲು ಅನುಮತಿ ನೀಡಬೇಕು.

    ಈ ಸಲಹೆಗಳ ಜೊತೆಗೆ, “ಒಟ್ಟು ಎಷ್ಟು ಲಸಿಕೆಯ ಡೋಸ್​ಗಳನ್ನು ಕೊಟ್ಟಿದೆ ಎನ್ನುವುದನ್ನು ನೋಡುವುದಕ್ಕಿಂತ ಒಟ್ಟು ಎಷ್ಟು ಜನಸಂಖ್ಯೆಗೆ ಲಸಿಕೆ ನೀಡಲಾಗಿದೆ ಎಂದು ಅಳೆಯಬೇಕು. ಹಾಲಿ ಬಹಳ ಕಡಿಮೆ ಜನಸಂಖ್ಯೆಗೆ ಕರೊನಾ ಲಸಿಕೆ ತಲುಪಿದ್ದು, ಸೂಕ್ತ ನೀತಿ ನಿರ್ಧಾರಗಳಿಂದ ಅದನ್ನು ಹೆಚ್ಚು ತ್ವರಿತಗೊಳಿಸಬಹುದು” ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್)

    ‘ಮಹಾರಾಷ್ಟ್ರ ಸರ್ಕಾರ ಬೆಳಗಾವಿಯಲ್ಲಿ ಕಛೇರಿ ಸ್ಥಾಪಿಸಬೇಕು’ ಎಂದು ಕಿಚ್ಚಿಟ್ಟ ಶಿವಸೇನೆ ನಾಯಕ

    ಓಡಿಹೋಗಿದ್ದ ಪ್ರೇಮಿಗಳನ್ನು ಹಿಡಿದುತಂದ ಪೊಲೀಸ್​; ಯುವತಿ ಮನೆಗೆ, ಯುವಕ ಮಸಣಕ್ಕೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts