More

    ‘ಮಹಾರಾಷ್ಟ್ರ ಸರ್ಕಾರ ಬೆಳಗಾವಿಯಲ್ಲಿ ಕಛೇರಿ ಸ್ಥಾಪಿಸಬೇಕು’ ಎಂದು ಕಿಚ್ಚಿಟ್ಟ ಶಿವಸೇನೆ ನಾಯಕ

    ಮುಂಬೈ : ಮಹಾರಾಷ್ಟ್ರವು ದೇಶದಲ್ಲೇ ಅತಿ ಹೆಚ್ಚು ಕರೊನಾ ಸೋಂಕಿನ ಪ್ರಕರಣಗಳನ್ನು ದಾಖಲಿಸುತ್ತಾ ಸಂಕಟ ಅನುಭವಿಸುತ್ತಿರುವ ಈ ಸಮಯದಲ್ಲಿ ಶಿವ ಸೇನೆಯ ನಾಯಕ ಸಂಜಯ್ ರೌತ್ ಮಹಾರಾಷ್ಟ್ರ-ಕರ್ನಾಟಕ ಗಡಿವಿವಾದದ ಬೆಂಕಿಗೆ ಎಣ್ಣೆ ಸುರಿದಿದ್ದಾರೆ.

    ಶಿವ ಸೇನೆಯ ಪತ್ರಿಕೆ ‘ಸಾಮನಾ’ದಲ್ಲಿ ತಮ್ಮ ಸಾಪ್ತಾಹಿಕ ಅಂಕಣ ‘ರೋಕ್​ಠೋಕ್’​ನಲ್ಲಿ, ರೌತ್ ಅವರು, “ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರವು ಬೆಳಗಾವಿಯಲ್ಲಿ ಕಛೇರಿ ಸ್ಥಾಪಿಸಬೇಕು. ಸದರಿ ಕಛೇರಿಯು ಅಲ್ಲಿನ ಮರಾಠಿ ಮಾತನಾಡುವ ಜನರ ಒಳಿತಿಗಾಗಿ ಶ್ರಮಿಸಬೇಕು. ರಾಜ್ಯದ ಗಡಿಪ್ರದೇಶಗಳ ಸಂಚಾಲನಾ ಸಚಿವ ಏಕನಾಥ್ ಶಿಂಡೆ ಬೆಳಗಾವಿಗೆ ಆಗಾಗ್ಗೆ ಭೇಟಿ ನೀಡಬೇಕು” ಎಂದು ಬರೆದಿದ್ದಾರೆ ಎಂದು ಎನ್​ಡಿಟಿವಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಇದನ್ನೂ ಓದಿ: ಜೆಇಇ ಮೈನ್​ : ಏಪ್ರಿಲ್ ಪರೀಕ್ಷೆಗಳ ಮುಂದೂಡಿಕೆ

    ಸುಪ್ರೀಂ ಕೋರ್ಟ್​ನಲ್ಲಿರುವ ಗಡಿ ವಿವಾದದಲ್ಲಿ ಮಹಾರಾಷ್ಟ್ರ ಸರ್ಕಾರವು ತನ್ನ ನಿಲುವನ್ನು ಕರ್ನಾಟಕದ ವಿರುದ್ಧ ಬಲಪಡಿಸಬೇಕು. ಗಡಿಪ್ರದೇಶಗಳಲ್ಲಿರುವ ಜನರಿಗೆ ಈ ಮೊಕದ್ದಮೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದೂ ರೌತ್ ಬರೆದಿದ್ದಾರೆ ಎನ್ನಲಾಗಿದೆ.

    ಏಪ್ರಿಲ್ 17 ರಂದು ನಡೆದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಅಭ್ಯರ್ಥಿಯಾದ ಶುಭಂ ಶೇಲ್ಕೆ ವಿರುದ್ಧ ರಾಜ್ಯದ ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಪ್ರಚಾರ ಮಾಡಬಾರದಿತ್ತು ಎಂದೂ ರೌತ್ ಹೇಳಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

    ಓಡಿಹೋಗಿದ್ದ ಪ್ರೇಮಿಗಳನ್ನು ಹಿಡಿದುತಂದ ಪೊಲೀಸ್​; ಯುವತಿ ಮನೆಗೆ, ಯುವಕ ಮಸಣಕ್ಕೆ !

    ಆಗಾಗ್ಗೆ ಬಾಯಾಡಿಸುವ ಬಯಕೆಯೇ ? ಇಲ್ಲಿವೆ ನೋಡಿ, ಐದು ಆರೋಗ್ಯಕರ ಆಯ್ಕೆಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts