More

    ಕ್ಯಾಪಿಟಲ್​ ಗಲಭೆ ಪ್ರಕರಣ: ಟ್ರಂಪ್​ ವಿರುದ್ಧ ಕಿಮಿನಲ್​ ಪ್ರಕರಣಕ್ಕೆ ಶಿಫಾರಸು, ಮಾಜಿ ಅಧ್ಯಕ್ಷರ ಅಕ್ರೋಶ

    ವಾಷಿಂಗ್ಟನ್‌: ಕಳೆದ ವರ್ಷ ಜನವರಿ 6ರಂದು ಕ್ಯಾಪಿಟಲ್​ ಹಿಲ್​ನಲ್ಲಿ ನಡೆದ ಹಿಂಸಾಚಾರ ಪ್ರಕರಣದ ತನಿಖೆ ನಡೆಸಿರುವ ಸದನ​ ಸಮಿತಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಿಸುವಂತೆ ಶಿಫಾರಸು ಮಾಡಿದೆ. ಇದರ ಬೆನ್ನಲ್ಲೇ ಆಕ್ರೋಶ ಹೊರ ಹಾಕಿರುವ ಟ್ರಂಪ್​, ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಯುವ ಪ್ರಯತ್ನ ಇದಾಗಿದೆ ಎಂದಿದ್ದಾರೆ.

    ದಂಗೆಗೆ ಪ್ರಚೋದನೆ, ಹೊಸ ಸರ್ಕಾರದ ಅಧಿಕೃತ ಪ್ರಕ್ರಿಯೆಗೆ ಅಡ್ಡಿ, ಯುಎಸ್ ಸರ್ಕಾರವನ್ನು ವಂಚಿಸಲು ಪಿತೂರಿ ಮತ್ತು ಸುಳ್ಳು ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಡೊನಲ್ಡ್​ ಟ್ರಂಪ್ ವಿರುದ್ಧ ಕ್ರಿಮಿನಲ್​ ಪ್ರಕರಣ ದಾಖಲಿಸಬೇಕೆಂದು ಸದನ ಸಮಿತಿ ಸರ್ವಾನುಮತದಿಂದ ನ್ಯಾಯಾಂಗ ಇಲಾಖೆಯನ್ನು ಒತ್ತಾಯಿಸಿದೆ.

    ನಮ್ಮ ಸಂವಿಧಾನದ ಅಡಿಯಲ್ಲಿ ಅಧಿಕಾರದ ಶಾಂತಿಯುತ ವರ್ಗಾವಣೆಗೆ ಅಡ್ಡಿಪಡಿಸಲು ಮಾಜಿ ಅಧ್ಯಕ್ಷ ಟ್ರಂಪ್ ಪ್ರಯತ್ನಿಸಿದರು ಎಂಬುದಕ್ಕೆ ಸದನ ಸಮಿತಿಯು ಮಹತ್ವದ ಪುರಾವೆಗಳನ್ನು ಪಡೆದುಕೊಂಡಿದೆ ಎಂದು ಪ್ರತಿನಿಧಿ ಜೇಮಿ ರಾಸ್ಕಿನ್ ಅವರು ಸಮಿತಿಯ ಸಂಶೋಧನೆಗಳನ್ನು ವಿವರಿಸಿದರು.

    ಇದರ ಬೆನ್ನಲ್ಲೇ ಸದನ ಸಮಿತಿಯ ಸದಸ್ಯರ ವಿರುದ್ಧ ಹರಿಹಾಯ್ದಿರುವ ಡೊನಾಲ್ಡ್​ ಟ್ರಂಪ್​, ಮುಂದಿನ ಅಧ್ಯಕ್ಷಿಯ ಚುನಾವಣೆಯನ್ನು ನನ್ನನ್ನು ತಡೆಯಲೆಂದೇ ನಕಲಿ ಪ್ರಕರಣ ದಾಖಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ನನ್ನನ್ನು ವಿಚಾರಣೆಗೆ ಒಳಪಡಿಸುವ ಈ ಸಂಪೂರ್ಣ ಪ್ರಕ್ರಿಯೆಯು ದೋಷಾರೋಪಣೆಯಂತೆಯೇ ಇದೆ. ನನ್ನನ್ನು ಮತ್ತು ರಿಪಬ್ಲಿಕನ್ ಪಕ್ಷವನ್ನು ಬದಿಗೆ ಸರಿಸುವ ಪಕ್ಷಪಾತದ ಪ್ರಯತ್ನ ಇದಾದಗಿದೆ ಎಂದು ಟ್ರಂಪ್​ ಅಸಮಾಧಾನ ಹೊರಹಾಕಿದ್ದಾರೆ.

    ಜನವರಿ 6ರಂದು ದಂಗೆಯೆದ್ದಿದ್ದ ಟ್ರಂಪ್ ಬೆಂಬಲಿಗರು ಅಮೆರಿಕ ಕ್ಯಾಪಿಟಲ್ ಹಿಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿ ಹಿಂಸಾಚಾರ ನಡೆಸಿತ್ತು. ಡೊನಾಲ್ಡ್ ಟ್ರಂಪ್ ಅವರ ಮೇಲೆ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪವನ್ನು ಹೊರಿಸಲಾಗಿತ್ತು. (ಏಜೆನ್ಸೀಸ್​)

    ಸರ್ಕಾರಿ ಕಾರ್ನರ್: ಬೇರೊಂದು ಹುದ್ದೆಗೆ ವರ್ಗಕ್ಕೆ ನಿಯಮಾವಳಿ

    ಉಪಾಹಾರ ಕೊಟ್ಟಿದ್ದ ದಲಿತರ ಮಕ್ಕಳಿಗೆ ಉಚಿತ ಶಿಕ್ಷಣ: ಗ್ರಾಮವಾಸ್ತವ್ಯದಲ್ಲಿ ಭೇಟಿ ನೀಡಿದ್ದ ಮನೆಯ ವಿದ್ಯಾರ್ಥಿಗಳಿಗೆ ಸೌಲಭ್ಯ; ಸಚಿವ ಅಶೋಕ್ ನಿರ್ಧಾರ

    ಓದಿದ್ದು 8ನೇ ತರಗತಿ ಆದ್ರೆ ವೈದ್ಯೆಯನ್ನೇ ಪಟಾಯಿಸಿದ ಈತನ ಹಿಸ್ಟರಿ ನೋಡಿ ದಂಗಾದ ಪೊಲೀಸರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts