More

    ಲಾರಿ ಡಿಕ್ಕಿಯ ರಭಸಕ್ಕೆ ಕುಸಿದ ಹೋಟೆಲ್ ಕಟ್ಟಡ: ಅದೃಷ್ಟವಶಾತ್​ ತಪ್ಪಿತು ಭಾರೀ ಅನಾಹುತ! ​

    ಕಲ್ಪೆಟ್ಟ: ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಇಡೀ ಹೋಟೆಲ್​ ಕಟ್ಟಡಕ್ಕೆ ಸಂಪೂರ್ಣ ಹಾನಿಯಾಗಿರುವ ಘಟನೆ ಕೇರಳದ ವೆಲ್ಲಾರಾಮ್ಕುನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.

    ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾದ ಕಟ್ಟಡವು ರಸ್ತೆ ಮೇಲೆಯೇ ಬೀಳುವ ಸಾಧ್ಯತೆ ಇರುವುದರಿಂದ ಆ ಮಾರ್ಗದಲ್ಲಿ ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ವಾಹನ ಚಲಾಯಿಸುತ್ತಲೇ ಚಾಲಕ ನಿದ್ರೆಗೆ ಜಾರಿದ ಪರಿಣಾಮ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.

    ಈ ಘಟನೆ ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ನಡೆದಿದೆ. ಅತಿ ವೇಗದಲ್ಲಿದ್ದ ಲಾರಿ, ನಿಯಂತ್ರಣ ಕಳೆದುಕೊಂದು ಮೊದಲು ಎದುರು ಬರುತ್ತಿದ್ದ ಟ್ರ್ಯಾವೆಲ್ಲರ್​ ವ್ಯಾನ್​ಗೆ ಡಿಕ್ಕಿ ಹೊಡೆದು, ಕಟ್ಟಡದತ್ತ ನುಗ್ಗಿದೆ. ಮೂರು ಅಂತಸ್ತಿನ ಕಟ್ಟಡ ಮುಂಜಾನೆ ಆರು ಗಂಟೆ ಸಮಯದಲ್ಲಿ ವಾಲುವುದಕ್ಕೆ ಆರಂಭಿಸಿದೆ.

    ಇದನ್ನೂ ಓದಿರಿ: ಯೂಟ್ಯೂಬ್ ತೆರಿಗೆ ಲಗಾಮು!; ಚಾನೆಲ್ ಕಂಟೆಂಟ್ ಕ್ರಿಯೇಟರ್ಸ್ ಮೇಲೆ ಪರಿಣಾಮ

    ರಾಷ್ಟ್ರೀಯ ಹೆದ್ದಾರಿ ಮೇಲೆಯೇ ಕಟ್ಟಡ ಬೀಳುವ ಸಾಧ್ಯತೆ ಇರುವುದರಿಂದ ಆ ಮಾರ್ಗದಲ್ಲಿ ಸಂಚಾರ ನಿಷೇಧಿಸಲಾಗಿದೆ. ವಾಹನಗಳನ್ನು ಬೇರೆ ಮಾರ್ಗದತ್ತ ಬದಲಾಯಿಸಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಅದೀಲಾ ಅಬ್ದುಲ್ಲಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಕಟ್ಟಡ ನಿರ್ಮಾಣ ಮಾಡಿರುವ ಗುಮಾನಿ ಆರಂಭವಾಗಿದ್ದು, ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಘಟನೆಯಿಂದ ಗಂಭೀರ ಗಾಯಗೊಂಡಿರುವ ಚಾಲಕನನ್ನ ಆಸ್ಪತ್ರೆಗೆ ದಾಖಲಿಸಿದ್ದು, ಆತನ ಆರೋಗ್ಯ ಸ್ಥಿರವಾಗಿದೆ. ಹೋಟೆಲ್​ನಲ್ಲಿ ಜನರು ಇಲ್ಲದಿದ್ದರಿಂದ ಯಾರಿಗೂ ಹಾನಿಯಾಗಿಲ್ಲ. ಒಂದು ವೇಳೆ ಗ್ರಾಹಕರಿದ್ದ ಸಮಯದಲ್ಲಿ ಅಪಘಾತ ಸಂಭವಿಸಿದ್ದರೆ ಭಾರಿ ಅನಾಹುತವೇ ನಡೆಯುತ್ತಿತ್ತು. (ಏಜೆನ್ಸೀಸ್​)

    ಅಂಬಾನಿಗೆ ಬಾಂಬ್​ ಬೆದರಿಕೆ: ಎಸ್​ಯುವಿ ಕಾರಿನ ನಂಬರ್​ ಪ್ಲೇಟ್, ನಗದು ತುಂಬಿದ್ದ ಮರ್ಸಿಡೀಸ್​ ಕಾರು ಸೀಜ್​

    ಚಿಕ್ಕಪ್ಪನನ್ನೇ ಭೀಕರವಾಗಿ ಕೊಂದ; ಕಣ್ಣಿಗೆ ಖಾರದ ಪುಡಿ ಎರಚಿದ, ಚಾಕುವಿನಿಂದ ಕತ್ತು ಕೊಯ್ದ!

    ಸಚಿವರ ಮನೆ ಮುಂದೆಯೇ ಧರಣಿ; ಮೂರು ದಿನಗಳಿಂದ ನಡೆಯುತ್ತಿದೆ ಕೆಪಿಎಸ್​​ಸಿಯಿಂದ ಆಯ್ಕೆ ಆದವರ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts