More

    ಆಸ್ಪತ್ರೆಯಲ್ಲಿ ಪವರ್ ಕಟ್; ಮೊಬೈಲ್​ ಟಾರ್ಚ್​ನಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ ವೈದ್ಯರು

    ರಾಯ್​ಪುರ: ಸರ್ಕಾರಿ ಆಸ್ಪತ್ರೆಯಲ್ಲಿ ನಿರಂತರ ವಿದ್ಯುತ್​ ಕಡಿತದಿಂದಾಗಿ ವೈದ್ಯರು ರೋಗಿಗಳಿಗೆ ಮೊಬೈಲ್​ ಟಾರ್ಚ್​ನ ಬೆಳಕಿನಲ್ಲಿ ಚಿಕಿತ್ಸೆ ನೀಡಿರುವ ಘಟನೆ ಛತ್ತೀಸ್​ಗಢದ ಬಸ್ತಾರ್​ ಜಿಲ್ಲೆಯಲ್ಲಿ ನಡೆದಿದೆ.

    ಕಳೆದ ಐದು ದಿನಗಳಿಂದ ಆಸ್ಪತ್ರೆಗೆ ವಿದ್ಯುತ್​ ಸಂಪರ್ಕ ಕಡಿತಗೊಂಡಿದ್ದು, ಈ ಬಗ್ಗೆ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.

    ಇದನ್ನೂ ಓದಿ: VIDEO| ಜೆಎನ್ ಯು ಕ್ಯಾಂಪಸ್‍ನ ಗೋಡೆಗಳ ಮೇಲೆ ವಿವಾದಾತ್ಮಕ ಬರಹ

    ಬೆಳಕಿಗೆ ಬಂದದ್ದು ಹೇಗೆ

    ಶುಕ್ರವಾರ ಛತ್ತೀಸ್​ಗಢದ ಕಿಲೆಪಾಲ್​ ಎಂಬಲ್ಲಿ ಲಾರಿ ಹಾಗೂ ಬಸ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟು, 18ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಕೂಡಲೇ ಹತ್ತಿರದಲ್ಲಿದ್ದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಬಂದಾಗ ಅಲ್ಲಿ ವಿದ್ಯುತ್​ ಕಡಿತಗೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

    ಕೂಡಲೇ ಗಾಯಾಳುಗಳನ್ನು ಸ್ಥಳೀಯರ ನೆರವಿನಿಂದ ದಿಮ್ರಪಾಲ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿದ್ಯುತ್​ ಕಡಿತಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಗಾಯಾಳುಗಳ ಕುಟುಂಬಸ್ಥರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಆಸ್ಪತ್ರೆಯಲ್ಲಿ ಶಾಟ್​ ಸರ್ಕ್ಯೂಟ್​​ ಸಂಭವಿಸಿ ತುಂಬಾ ದಿನಗಳು ಕಳೆಯುತ್ತಾ ಬಂದರೂ ರಿಪೇರಿ ಮಾಡದೇ ಇರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts