More

    ಸರ್ವ ರೋಗಗಳಿಗೆ ಯೋಗವೇ ಮದ್ದು

    ಹೊಸಪೇಟೆ: ಬೆನ್ನು ಹುರಿ ದೇಹದ ಸಂಪೂರ್ಣ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಸರಳ ಯೋಗ ಹಾಗೂ ಮುದ್ರೆಗಳ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ಹಿರಿಯ ಯೋಗ ಶಿಕ್ಷಕ ಡಾ.ಎಸ್.ಬಿ.ಹಂದ್ರಾಳ ಹೇಳಿದರು.

    ಇದನ್ನೂ ಓದಿ: ಬೆಳದಿಂಗಳ ಊಟಕ್ಕಿದೆ ಪರಂಪರೆ, ಪತಂಜಲಿ ಯೋಗ ಸಮಿತಿ ತಾಲೂಕು ಪ್ರಭಾರ ಡಿ.ಮೌನೇಶ್ ವ್ಯಾಖ್ಯಾನ

    ಪತಂಜಲಿ ಯೋಗ ಸಮಿತಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶೇಷ ಯೋಗ ತರಬೇತಿಯಲ್ಲಿ ಮಾತನಾಡಿದರು.
    ಪಚನಕ್ರಿಯೆ ಸರಿಯಾಗಿದ್ದರೆ ದೇಹ ಸಮತೋಲನದಲ್ಲಿರಲು ಸಾಧ್ಯ. ಹಸಿವಾದಾಗ ಸಮಸ್ಥಿತಿಯ ಆಹಾರ ಸೇವಿಸುವ ಪರಿಪಾಠ ಬೆಳೆಸಿಕೊಳ್ಳಬೇಕು. ವಾತ, ಪಿತ್ತ, ಕಫಗಳೆಂಬ ತ್ರಿದೋಷಗಳಿಂದ ಸಂಧಿವಾತ, ಸೊಂಟ, ಬೆನ್ನು ನೋವು ಮತ್ತು ನರಗಳ ದುರ್ಬಲ್ಯಗಳ ನಿವಾರಣೆಗೆ ಮುದ್ರೆಗಳು ನೆರವಾಗುತ್ತವೆ ಎಂದು ಹೇಳಿದರು.

    ವಾತ ಶಮನ ಮುದ್ರೆಗಳು, ವಿಶೇಷ ಪ್ರಾಣಾಯಾಮ ಕುರಿತು ಯೋಗ ಸಾಧಕರಿಗೆ ಮಾರ್ಗದರ್ಶನ ನೀಡಿದರು.
    ಯುವ ಭಾರತ ರಾಜ್ಯ ಪ್ರಭಾರಿ ಕಿರಣಕುಮಾರ್, ರಾಜೇಶ್ ಕರ್ವಾ, ಸತ್ಯಪ್ಪ, ಮಂಗಳಮ್ಮ, ಚಂದ್ರಿಕಾ, ಶ್ರೀರಾಮ, ಸುಜಾತಾ, ಶೈಲಜಾ ಕಳಕಪ್ಪ, ಮಲ್ಲಿಕಾರ್ಜುನ, ಶ್ರೀನಿವಾಸ, ಎಂ.ಅನಂತ ಜೋಶಿ ಇತರರಿದ್ದರು.


    ಪತಂಜಲಿ ಯೋಗ ಸಮಿತಿಯಿಂದ ಹೊಸಪೇಟೆಯ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ವಿಶೇಷ ಯೋಗ ತರಬೇತಿ ಶಿಬಿರದಲ್ಲಿ ಹಿರಿಯ ಯೋಗ ಶಿಕ್ಷಕ ಡಾ.ಎಸ್.ಬಿ.ಹಂದ್ರಾಳ ಮಾರ್ಗದರ್ಶನದಲ್ಲಿ ಯೋಗ ಪಟುಗಳು ಅಭ್ಯಾಸ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts