More

    ಬೆಳದಿಂಗಳ ಊಟಕ್ಕಿದೆ ಪರಂಪರೆ, ಪತಂಜಲಿ ಯೋಗ ಸಮಿತಿ ತಾಲೂಕು ಪ್ರಭಾರ ಡಿ.ಮೌನೇಶ್ ವ್ಯಾಖ್ಯಾನ

    ಕಂಪ್ಲಿ: ಬೆಳದಿಂಗಳ ಸಾಮೂಹಿಕ ಭೋಜನ ಸಾಮರಸ್ಯ ಮೂಡಿಸುತ್ತದೆ ಎಂದು ಪತಂಜಲಿ ಯೋಗ ಸಮಿತಿ ತಾಲೂಕು ಪ್ರಭಾರ ಡಿ.ಮೌನೇಶ್ ಹೇಳಿದರು. ಇಲ್ಲಿನ ಪತಂಜಲಿ ಯೋಗ ಸಮಿತಿ ಶಾರದಾ ಶಾಲೆ ಆವರಣದಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ ಬೆಳದಿಂಗಳ ಭೋಜನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳದಿಂಗಳ ಊಟಕ್ಕೆ ಪರಂಪರೆಯಿದ್ದು, ಪರಸ್ಪರ ನಂಬಿಕೆ, ವಿಶ್ವಾಸದೊಂದಿಗೆ ಕೂಡಿ ಬಾಳುವ ಮನೋಭಾವನೆ ಪ್ರೇರೇಪಿಸುತ್ತದೆ ಎಂದರು.

    ವೀರಶೈವ ಸಂಘದ ನಿರ್ದೇಶಕಿ ಕಲ್ಗುಡಿ ನಾಗರತ್ನಾ ನಿರ್ದೇಶನದಲ್ಲಿ ಪತಂಜಲಿ ಯೋಗ ಮಹಿಳಾ ಸಮಿತಿಯ ಸದಸ್ಯರು ‘ತೊದಲು ಕುಟುಂಬ’ ಎಂಬ ಹಾಸ್ಯ ಸಾಮಾಜಿಕ ನಾಟಕ ಪ್ರದರ್ಶಿಸಿದರು. ನಾನಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಯೋಗ, ಧ್ಯಾನ, ಪ್ರಾಣಾಯಾಮ ಪ್ರಚಾರ ಮತ್ತು ಸೇವೆಗಾಗಿ, ವೀರಶೈವ ಸಂಘದ ಅಧ್ಯಕ್ಷ ಪಿ.ಮೂಕಯ್ಯ ಸ್ವಾಮಿಗೆ ಪ್ರಶಸ್ತಿ ಪತ್ರ, ಕಂಚಿನ ಪದಕ ನೀಡಿ ಗೌರವಿಸಲಾಯಿತು.

    ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಟಿ.ಕೊಟ್ರೇಶ್, ಮಹಿಳಾ ಪ್ರಭಾರ ಕೆ.ರತ್ನಮ್ಮ, ಪ್ರಮುಖರಾದ ಎಸ್.ಜಿ.ಚಿತ್ರಗಾರ್, ಇಟಗಿ ವಿರೂಪಾಕ್ಷಿ, ಭೀಮನಗೌಡ, ಕೊಟ್ರೇಶ್, ಕೆ.ಎಂ.ಹೇಮಯ್ಯ ಸ್ವಾಮಿ, ಡಿ.ವಿ.ಸುಬ್ಬಾರಾವ್, ಭವಾನಿ, ಕಲ್ಗುಡಿ ನಾಗರತ್ನಾ, ಮಮತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts