More

    ಲಾರಿ ಚಾಲಕರಿಗೆ ಆರ್‌ಟಿಒ ಅಧಿಕಾರಿ ದಾಸೋಹ: ನಿತ್ಯ ಪಲಾವ್, ಚಿತ್ರಾನ್ನ ವಿತರಿಸುವ ಎಸ್.ಎಸ್.ಕುಮಾರ್

    ಹೊಸಪೇಟೆ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ವಾಹನ ತಡೆದ ಕೂಡಲೇ ಚಾಲಕರ ಎದೆಬಡಿತ ಜೋರಾಗುವುದು ಸಹಜ. ಆದರೆ ಇಲ್ಲೊಬ್ಬ ಆರ್‌ಟಿಒ ಕಚೇರಿಯ ಸೀನಿಯರ್ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ ಎಸ್.ಎಸ್.ಕುಮಾರ್, ಕಠಿಣ ಲಾಕ್‌ಡೌನ್ ಸಂಕಷ್ಟದಲ್ಲಿರುವ ಲಾರಿ ಹಾಗೂ ಇತರ ವಾಹನ ಚಾಲಕರು, ಕ್ಲೀನರ್‌ಗಳಿಗೆ ನಿತ್ಯ ಆಹಾರ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ.

    ಸಂಪೂರ್ಣ ಲಾಕ್‌ಡೌನ್ ಪರಿಣಾಮ ನಗರ ಸೇರಿ ಹೆದ್ದಾರಿಗಳಲ್ಲೂ ಹೋಟೆಲ್, ಡಾಬಾಗಳು ಮುಚ್ಚಿವೆ. ಈ ವಿಚಾರ ಅರಿತ ಎಸ್.ಎಸ್. ಕುಮಾರ್ ಅವರು, ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನು ತಡೆದು ಚಾಲಕ ಮತ್ತು ಕ್ಲೀನರ್‌ಗಳಿಗೆ ನಿತ್ಯ 60 ಕೆ.ಜಿ. ಕ್ಕಿ ಬಳಸಿ ತಯಾರಿಸಿದ ಪಲಾವ್, ಚಿತ್ರಾನ್ನದ ಪ್ಯಾಕೇಟ್ ನೀಡಿ ಹಸಿವು ನೀಗಿಸುತ್ತಿದ್ದಾರೆ. ಈ ಸೇವೆಯಿಂದ ಸಂತೃಪ್ತರಾದ ಚಾಲಕರು ಆರ್‌ಟಿಒ ಆಫೀಸರ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts