More

    ಹಸಿರು ಹುಲ್ಲಿನ ಹಾಸಿಗೆಯಿಂದ ಶೃಂಗಾರಗೊಂಡ ಗವಿಮಠ

    ಕೊಪ್ಪಳ: ಜಾತ್ರೋತ್ಸವ ಹಿನ್ನೆಲೆಯಲ್ಲಿ ದಿನ ಕಳೆದಂತೆ ಖಳೆಗಟ್ಟುತ್ತಿರುವ ಗವಿಮಠ ಹಸಿರು ಹುಲ್ಲಿನ ಹಾಸಿಗೆ ಹಾಗೂ ಶಿಲಾ ಮಂಟಪಗಳಿಂದ ಶೃಂಗಾರಗೊಂಡಿದ್ದು, ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ.

    ಮಠದ ಮುಂಭಾಗದ ಮಹಾದ್ವಾರ ಪ್ರವೇಶಿಸುತ್ತಿದ್ದಂತೆ ಒಳ ಆವರಣವು ಸಂಪೂರ್ಣ ಸುಂದರವಾದ ಹಸಿರು ಹೊದಿಕೆಯಿಂದ ಮಧುವಣಗಿತ್ತಿಯಂತೆ ಅಲಂಕೃತಗೊಳಿಸಲಾಗಿದೆ. ಮಹಾಮಂಟಪ ದ್ವಾರಬಾಗಿಲಿನ ಮುಂಭಾಗದ ಆವರಣ ಮಧ್ಯದಲ್ಲಿ ನಿಮಾರ್ಣಗೊಂಡಿದೆ. ಅದರ ಸುತ್ತಲು ಹಸಿರು ಹುಲ್ಲಿನ ಅಕರ್ಷಣೆ ಮಂಟಪವನ್ನು ಮತ್ತಷ್ಟು ಸುಂದರಗೂಳಿಸಿದೆ. ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪಿಠದ ಆವರಣ, ಶ್ರೀ ಗವಿಸಿದ್ಧೇಶ್ವರರ ಕರ್ತೃ ಗದ್ದುಗೆ ದರ್ಶನದ ಪ್ರವೇಶದ್ವಾರ ಮುಂಭಾಗ, ನೂತನವಾಗಿ ಆಕರ್ಷಕವಾಗಿ ನಿಮಾರ್ಣಗೊಂಡ ತೆಂಗಿನ ಕಾಯಿ ಒಡೆಯು ಮಂಟಪದ ಆವರಣ, ಕೆರೆಯ ಮುಂಭಾಗ, ದಾಸೋಹದ ಎದುರಿಗೆ ಇರುವ ಆವರಣ ಎಲ್ಲವು ಶ್ರೀಮಠದ ಸೊಬಗನ್ನು ಹೆಚ್ಚಿಸಿವೆ.

    ಹಸಿರು ಹುಲ್ಲಿನ ಹಾಸಿಗೆಯಿಂದ ಶೃಂಗಾರಗೊಂಡ ಗವಿಮಠ

    ಪ್ರವೇಶ ದ್ವಾರದ ಆರಂಭದಲ್ಲಿ ಎಡ ಮತ್ತು ಬಲದಲ್ಲಿ ಎರಡು ಸುಂದರ ಮಂಟಪಗಳು ನೂತನವಾಗಿ ನಿರ್ಮಾಣಗೊಂಡಿವೆ. ಮಲ್ಲಿಗೆ ಬಿಳುಪಿನ ಸುಂದರ ಕೆತ್ತನೆಗಳನ್ನು ಒಳಗೊಂಡಿದ್ದು, ಭಕ್ತರ ಮನಸ್ಸು ಆಕರ್ಷಿಸುತ್ತಿವೆ. ಸೌಂದರೀಕರಣದ ಕಾರ್ಯಗಳು ಭರದಿಂದ ಸಾಗಿದ್ದು, ಇನ್ನಷ್ಟು ಅಲಂಕಾರಿಕ ಸಸ್ಯಗಳನ್ನು ನಡೆಸುತ್ತಿದ್ದು, ಮಠದ ಅಂದ ಹೆಚ್ಚಿಸಲಿವೆ.

    ಹಸಿರು ಹುಲ್ಲಿನ ಹಾಸಿಗೆಯಿಂದ ಶೃಂಗಾರಗೊಂಡ ಗವಿಮಠ

    400ಬಾಣಸಿಗರಿಂದ ಮಿರ್ಚಿ ತಯಾರಿಕೆ: ಪ್ರತಿ ವರ್ಷದಂತೆ ಮಹಾದಾಸೋಹದಲ್ಲಿ ಈ ವರ್ಷ ಜ.28ರಂದು ಉತ್ತರ ಕರ್ನಾಟಕದ ವಿಶೇಷ ಖಾದ್ಯ ಮಿರ್ಚಿ ವಿತರಣೆಗೆ ಸಿದ್ಧತೆ ನಡೆದಿದೆ. 25 ಕ್ವಿಂಟಾಲ್​ ಹಿಟ್ಟು, 10 ಬ್ಯಾರಲ್​ ಎಣ್ಣೆ, 20 ಕ್ವಿಂಟಾಲ್​ ಮೆಣಸಿನಕಾಯಿ, 60 ಕೆಜಿ ಅಜವಾನ, 60 ಕೆಜಿ ಸಣ್ಣ ಉಪ್ಪು, 60 ಕೆಜಿ ತೂಕದ ಸಿಲಿಂಡರ್​ಗಳನ್ನು ಸಿದ್ಧಗೊಳಿಸಲಾಗಿದೆ. ನಾಲ್ಕು ತಂಡಗಳಲ್ಲಿ 400 ಬಾಣಸಿಗರು ಮಿರ್ಚಿ ತಯಾರಿಸಲಿದ್ದಾರೆ. ಮೈನಳ್ಳಿ, ಶಿರಗುಪ್ಪ, ಓತಗೇರಿ, ಬಿಸರಳ್ಳಿ, ಗೊಂಡಬಾಳ, ವೀರಾಪುರ, ಇರಕಲ್ಲಗಡ, ತಾಳಕನಕಾಪುರ, ಲಕಮಾಪುರ, ಬೇಟಗೇರಿ, ಡಂಬ್ರಳ್ಳಿ ಗ್ರಾಮದ ಸೇವಕರು ಭಾಗಿಯಾಗಲಿದ್ದಾರೆ.

    ಜಾಥಾ ಪೂರ್ವಭಾವಿ ಸಭೆ: ಈ ಬಾರಿ ಮಠದಿಂದ ಕಾಯಕ ದೇವೋಭವ ಹೆಸರಿನಲ್ಲಿ ಸ್ವಯಂ ಉದ್ಯೋಗ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜ.24ರಂದು ಜಾಗೃತಿ ಜಾಥಾ ಇರಲಿದೆ. ಅದರ ಅಂಗವಾಗಿ ಶುಕ್ರವಾರ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಪೂರ್ವಭಾವಿ ಸಭೆ ನಡೆಯಿತು. ಜಿಲ್ಲಾಡಳಿತ, ವಿವಿಧ ಇಲಾಖೆಗಳು, ಸಂ,ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಅನುಷ್ಠಾನ ಆಗಲಿದೆ. ಜ.24ರಂದು ಬೆಳಗ್ಗೆ 8.30ಕ್ಕೆ ಕೊಪ್ಪಳದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಿಂದ ಜಾಥಾ ಆರಂಭವಾಗಿ ಗವಿಮಠ ತಲುಪಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts