More

    ಶಿವಶರಣರ ಆದರ್ಶಗಳನ್ನು ಪಾಲಿಸಿ

    ಯಲಬುರ್ಗಾ: ಬಸವಲಿಂಗೇಶ್ವರ ಸ್ವಾಮೀಜಿ ಜನರಿಗೆ ಸಂಸ್ಕಾರ ನೀಡುವ ಮೂಲಕ ಸಮಾಜಮುಖಿ, ಧಾರ್ಮಿಕ ಕಾರ್ಯಗಳ ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದು ನವಲಗುಂದ ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.

    ಪಟ್ಟಣದ ಶ್ರೀಧರಮುರಡಿ ಹಿರೇಮಠದಲ್ಲಿ ಬಸವಲಿಂಗೇಶ್ವರ ಸ್ವಾಮೀಜಿ ಪೀಠಾರೋಹಣದ 22ನೇ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ವಿವಾಹ, ಅಡ್ಡಪಲ್ಲಕ್ಕಿ ಮಹೋತ್ಸವ ಸಮಾರಂಭದಲ್ಲಿ ಸೋಮವಾರ ಮಾತನಾಡಿದರು. ಮಠದಿಂದ ಪ್ರತಿ ವರ್ಷ ಅನೇಕ ಧಾರ್ಮಿಕ ಕಾರ್ಯಗಳನ್ನು ಕೈಗೊಂಡು ಭಕ್ತರ ಉದ್ಧಾರಕ್ಕಾಗಿ ಸ್ವಾಮೀಜಿ ಶ್ರಮಿಸುತ್ತಿದ್ದಾರೆ ಎಂದರು.

    ಬಡವರ ಪಾಲಿಗೆ ಸಾಮೂಹಿಕ ವಿವಾಹಗಳು ವರದಾನವಾಗಿವೆ. ನವಜೋಡಿಗಳು ಬದುಕಿನಲ್ಲಿ ಬರುವ ಸಿಹಿ-ಕಹಿಗಳನ್ನು ಸಮನಾಗಿ ಸ್ವೀಕರಿಸಬೇಕು. ಆದರ್ಶ ದಂಪತಿಗಳಾಗಿ ಸಮಾಜದಲ್ಲಿ ಬದುಕು ಸಾಗಿಸಬೇಕು. ಶಿವಶರಣರ ಆದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಬಾಳಬೇಕೆಂದು ಬಸವಲಿಂಗ ಸ್ವಾಮೀಜಿ ಸಲಹೆ ನೀಡಿದರು.

    ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಡಾ.ಮಹಾದೇವ ಸ್ವಾಮೀಜಿ ಮಾತನಾಡಿ, ಶ್ರೀಧರಮುರಡಿ ಮಠದ ಶ್ರೀಗಳು ಕಾಯಕಯೋಗಿಗಳಾಗಿದ್ದು, ಗೋಶಾಲೆ, ಶಿಕ್ಷಣ ಸಂಸ್ಥೆ, ಯೋಗ ಕೇಂದ್ರ ಸೇರಿ ನಾನಾ ಸಾಮಾಜಿಕ ಕೆಲಸಗಳನ್ನು ಭಕ್ತರಿಗಾಗಿ ಮಾಡುತ್ತಿದ್ದಾರೆ ಎಂದರು. ಆಡ್ನೂರು-ರಾಜೂರು ಅಭಿನವ ಶ್ರೀ ಪಂಚಾಕ್ಷರ ಸ್ವಾಮೀಜಿ, ಜಿಗೇರಿಯ ಶ್ರೀ ಗುರುಸಿದ್ದೇಶ್ವರ ಸ್ವಾಮೀಜಿ, ಇಟಗಿಯ ಶ್ರೀ ಗುರುಶಾಂತವೀರ ಸ್ವಾಮೀಜಿ, ಭಕ್ತರು ಇದ್ದರು.

    ಇದಕ್ಕೂ ಮುನ್ನ ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ ಅವರನ್ನು ಅಡ್ಡಪಲ್ಲಕ್ಕಿಯಲ್ಲಿ ಪಟ್ಟಣದ ಪ್ರಮುಖ ವೃತ್ತಗಳ ಮುಖಾಂತರ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಶ್ರೀಧರಮುರಡಿ ಹಿರೇಮಠದಿಂದ ಪಾದಗಟ್ಟೆವರೆಗೆ ವಿಜೃಂಭಣೆಯಿಂದ ಲಘು ರಥೋತ್ಸವ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts