More

    ಜ್ಞಾನ, ಅನ್ನ, ಅಕ್ಷರ ದಾಸೋಹದಲ್ಲಿ ಅಗ್ರಪಂಕ್ತಿ

    ಸವಣೂರ: ಜ್ಞಾನ ದಾಸೋಹದೊಂದಿಗೆ, ಅನ್ನ ದಾಸೋಹ ಹಾಗೂ ಅಕ್ಷರ ದಾಸೋಹಗಳನ್ನು ಶ್ರದ್ಧೆಯಿಂದ ಕೈಗೊಳ್ಳುತ್ತಿರುವ ಹೂವಿನಶಿಗ್ಲಿ ವಿರಕ್ತಮಠ ತನ್ನ ಕಾಯಕನಿಷ್ಠೆಯಿಂದ ಅಗ್ರಪಂಕ್ತಿಯಲ್ಲಿ ಕಂಗೊಳಿಸುತ್ತಿದೆ.


    ಶ್ರೀಮಠದ ಸಂಸ್ಥಾಪಕ ಪೀಠಾಧಿಪತಿಗಳಾದ ಲಿಂ. ನಿರಂಜನ ಸ್ವಾಮಿಗಳ ದೂರದೃಷ್ಟಿ ಫಲ ಹಾಗೂ ಇಂದಿನ ಪೀಠಾಧಿಪತಿ ಶ್ರೀ ಚನ್ನವೀರ ಸ್ವಾಮೀಜಿ ಅವರ ಕಾಯಕ ನಿಷ್ಠೆಯಿಂದಾಗಿ ಇಂದು ನಾಡಿನಾದ್ಯಂತ ಖ್ಯಾತಿ ಪಡೆದಿದೆ.


    ಹೂವಿನಶಿಗ್ಲಿ ವಿರಕ್ತಮಠದ ನಿರಂಜನ ಮಹಾಸ್ವಾಮೀಜಿ ಅವರು 2009ರ ಡಿಸೆಂಬರ್ 21ರಂದು ಲಿಂಗಕೈರಾದರು. ಪೂಜ್ಯರ ಪುಣ್ಯ ಸ್ಮರಣೋತ್ಸವ, ಜಾತ್ರಾ ಮಹೋತ್ಸವ ಕಾರ್ಯಕ್ರಮಗಳನ್ನು ಜ. 13ರಿಂದ 15ರ ವರೆಗೆ ಮಠಾಧೀಶರಾದ ಶ್ರೀ ಚನ್ನವೀರ ಮಹಾಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.


    13ರಂದು ಪ್ರಾತಃಕಾಲ ಮೈಸೂರು ಜಿಲ್ಲೆ ಬನ್ನಿಕೊಪ್ಪದ ಜಪದಕಟ್ಟಿಮಠ ಸುಜ್ಞಾನದೇವ ಶಿವಾಚಾರ್ಯ ಸ್ವಾಮಿಗಳಿಂದ ಲಿಂಗದೀಕ್ಷೆ ಹಾಗೂ ಅಯ್ಯಾಚಾರ, ನಂತರ ಹತ್ತಿಮತ್ತೂರ ವಿರಕ್ತಮಠದ ನಿಜಗುಣ ಸ್ವಾಮೀಜಿ ಅವರಿಂದ ಷಟಸ್ಥಲ ದ್ವಜಾರೋಹಣ, ಸಂಜೆ ಪುರಾಣ ಪ್ರವಚನ ಮಹಾಮಂಗಲ ಕಾರ್ಯಕ್ರಮ ಜರುಗಲಿದೆ. ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಬೆಳ್ಳಟ್ಟಿ ರಾಮಲಿಂಗೇಶ್ವರಮಠದ ಬಸವರಾಜ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು.


    14ರಂದು ಪ್ರಾತಃಕಾಲ ಲಿಂ. ಶ್ರೀ ನಿರಂಜನ ಸ್ವಾಮೀಜಿ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ವಿಶೇಷ ಹೂವಿನ ಅಲಂಕಾರ ಹಾಗೂ ಮಹಾಮಂಗಳಾರತಿ, ಭಾವಚಿತ್ರ ಮೆರವಣಿಗೆ ಹಾಗೂ ಗುರು ಗುಹೆಸಿದ್ಧೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ ಸೂರಣಗಿ ಹಾಗೂ ಯಲವಿಗಿ ಗ್ರಾಮದ ಪುರವಂತರ ವೀರಗಾಸೆಯೊಂದಿಗೆ ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀಮಠದ ಹಳೆಯ ವೈದಿಕ ವಿದ್ಯಾರ್ಥಿಗಳಿಂದ ಪೀಠಾಧ್ಯಕ್ಷರಾದ ಚನ್ನವೀರ ಸ್ವಾಮಿಗಳ ತುಲಾಭಾರ ನೆರವೇರಲಿದೆ. ಸಂಜೆ 5 ಗಂಟೆಗೆ ವಿವಿಧ ಶ್ರೀಗಳ ಸಾನ್ನಿಧ್ಯದಲ್ಲಿ ವಿವಿಧ ವಾಧ್ಯ ವೈಭವದೊಂದಿಗೆ ನಂದಿಕೋಲು, ಕೀಲುಕುದುರೆ ನೃತ್ಯದೊಂದಿಗೆ ಮಹಾರಥೋತ್ಸವ ನೆರವೇರಲಿದೆ. ಸಂಜೆ 7 ಗಂಟೆಗೆ ಲಿಂ. ಶ್ರೀಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಜರಗುವುದು.
    ಮುಂಡರಗಿ ಸಂಸ್ಥಾನಮಠದ ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಗುಡ್ಡದಆನ್ವೇರಿ ವಿರಕ್ತಮಠದ ಶಿವಯೋಗಿಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಗಂಜಿಗಟ್ಟಿ ಹಿರೇಮಠದ ವೈಜನಾಥ ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ ನೇತೃತ್ವ ವಹಿಸುವರು. ಚಿಕ್ಕೋಡಿಯ ವೀರೇಶ ಪಾಟೀಲ ನುಡಿ ನಮನ ಸಲ್ಲಿಸುವರು. ಹಾವೇರಿ ಸುಮುಖ ಆಯುರ್ವೆದ ಆಸ್ಪತ್ರೆಯ ವೈದ್ಯೆ ಡಾ. ಅಶ್ವಿನಿ ವಸ್ತ್ರದ ಅವರು ಶ್ರೀಮಠದ ವತಿಯಿಂದ ವೈದ್ಯ ನಿರಂಜನ ಪ್ರಶಸ್ತಿ ಸ್ವೀಕರಿಸುವರು. 15ರಂದು ಮಧ್ಯಾಹ್ನ 12:30ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮ ಜರಗುವುದು. ಸವಣೂರಿನ ದೊಡ್ಡಹುಣಸೆ ಕಲ್ಮಠದ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶ್ರೀಮಠದ ಪಟ್ಟಾಧ್ಯಕ್ಷರಾದ ಚನ್ನವೀರ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 3 ಗಂಟೆಗೆ ಪಟ್ಟಾಧ್ಯಕ್ಷರ ತುಲಾಭಾರ, 4 ಗಂಟೆಗೆ ಗುರುಕುಲದ ವಿದ್ಯಾರ್ಥಿಗಳಿಂದ ಮಲ್ಲಕಂಭ ಪ್ರದರ್ಶನ, 5 ಗಂಟೆಗೆ ಕಡುಬಿನಕಾಳು ಜರಗುವುದು. ಸಂಜೆ 6ಕ್ಕೆ ‘ಮಹಾತ್ಮರ ಬದುಕು-ಬೆಳಕು’ ಚಿಂತನಗೋಷ್ಠಿ ಕಾರ್ಯಕ್ರಮ ಜರುಗಲಿದೆ. ಹೊಸರಿತ್ತಿ ಗುದ್ದಲಿಶ್ವರಮಠದ ಗುದ್ಧಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಕ್ಕಿಆಲೂರು ವಿರಕ್ತಮಠದ ಶಿವಬಸವ ಸ್ವಾಮೀಜಿ ಅಧ್ಯಕ್ಷತೆ, ಹಿರೇಮಲ್ಲನಕೇರಿ ವಿರಕ್ತಮಠದ ಬಸವರಾಜ ಸ್ವಾಮೀಜಿ ನೇತೃತ್ವ ವಹಿಸುವರು. ಹುಲ್ಯಾಳದ ಶ್ರೀದೇವಿತಾಯಿ ಹಿರೇಮಠ ನುಡಿ ನಮನ ಸಲ್ಲಿಸುವರು.

    ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ, ಮಾಜಿ ಶಾಸಕ ಜಿ.ಎಸ್. ಗಡ್ಡದದೇವರಮಠ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಬಿ. ಶ್ರೀರಾಮುಲು, ಶಾಸಕ ಡಾ. ಚಂದ್ರು ಲಮಾಣಿ ಭಾಗವಹಿಸುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts