More

    ಯುವಜನ ನಮ್ಮ ಸಂಸ್ಕೃತಿ ಮೈಗೂಡಿಸಿಕೊಳ್ಳಿ

    ಹೊಸಪೇಟೆ: ಫಲಪೂಜಾ ಪ್ರಯುಕ್ತ ಹಂಪಿ ವಿರೂಪಾಕ್ಷೇರ ದೇವಸ್ಥಾನದ ಆವರಣದಲ್ಲಿ ಶ್ರೀಮರಿದೇವ ಸಂಗೀತ ಸಾಂಸ್ಕೃತಿ ಕಲಾವೃಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 26ನೇ ವರ್ಷದ ಭಕ್ತಿಭಾವನಾ ಸಾಂಸ್ಕೃತಿ ಕಾರ್ಯಕ್ರಮ ಶುಕ್ರವಾರ ನಡೆಯಿತು.

    ಇದನ್ನೂ ಓದಿ : ದಕ್ಷಿಣ ಕಾಶಿ ಹಂಪಿಯಲ್ಲಿ ನಕಲಿ ಗೈಡ್​ಗಳ ಹಾವಳಿ

    ಹಂಪಿ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಸಾನಿದ್ಯ ವಹಿಸಿ ಆರ್ಶಿವಚನ ನೀಡಿದರು. ನಮ್ಮ ಭಾರತೀಯ ಸಂಗೀತವನ್ನು ಯುವಕರು ಮನಸ್ಸಿಟ್ಟು ಕಲಿಯಬೇಕು. ಭಾರತ ಎಂದರೆ ಭಾ ಎಂದರೆ ಭಾವ, ರ ಎಂದರೆ ರಾಘ, ತ ಎಂದರೆ ತಾಳ ಎಂದು ವಿಶ್ಲೇಷಿಸಿದರು. ಇಲ್ಲಿನ ಸಂಸ್ಕೃತಿ ಸಾಹಿತ್ಯ ಸಂಗೀತವನ್ನು ಯುವಜನ ಮೈಗೂಡಿಸಿಕೊಳ್ಳಬೇಕು ಎಂದರು.

    ಹೊಸಪೇಟೆ ಚಿಂತಾಮಣಿ ಮಠದ ಶ್ರೀ ಶಿವಾನಂದ ಭಾರತಿ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ಕೆ.ರಂಗಣ್ಣವರ್, ದೇವಸ್ಥಾನದ ಇಒ ಹನುಮಂತಪ್ಪ, ಹಂಪಿ ಗ್ರಾ.ಪಂ ಅಧ್ಯಕ್ಷೆ ರಜಿನಿ, ಪಿಡಿಒ ಗಂಗಾಧರ, ಕಲಾವೃಂದದ ಅಂಗಡಿ ವಾಮದೇವ, ಸಂಗೀತ ಪ್ರಾಧ್ಯಾಪಕ ವೀರೇಶ ಹಿಟ್ನಾಳ್, ಪ್ರಮುಖರಾದ ಶ್ರೀಮೋಹನ್ ಚಿಕ್‌ಭಟ್ ಜೋಷಿ, ಹನುಮಂತಪ್ಪ ಇತರರಿದ್ದರು.

    ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿಂದೂಸ್ಥಾನಿ ಸಂಗೀತ, ತತ್ವಪದ, ಭಕ್ತಿ ಗೀತೆಗಳು, ಭರತನಾಟ್ಯ, ಸಮೂಹ ನೃತ್ಯ, ಜಾನಪದ ನೃತ್ಯ, ಸಮೂಹ ನೃತ್ಯ, ಸುಗಮ ಸಂಗೀತ, ಜಾನಪದ ಗೀತೆ ಸೇರಿ ಇತರೆ ಕಾರ್ಯಕ್ರಮಗಳು ನೆರದ ಜನರಿಗೆ ಮನಸೂರೆಗೊಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts