More

    ದಲಿತರನ್ನು ತುಳಿಯುವ ಸಂಸ್ಕೃತಿ ಕಾಂಗ್ರೆಸ್ ನಲ್ಲಿದೆ

    ಹೊಸಪೇಟೆ: ಸಮಾಜ ಕಲ್ಯಾಣ ಸಚಿವ‌ ಡಾ.ಎಚ್.ಸಿ.ಮಹಾದೇವಪ್ಪ ಲೋಕಸಭಾ ಚುನಾವಣೆಗೆ ಸ್ಪರ್ಧಿಸದಂತೆ, ಕಾಂಗ್ರೆಸ್ ಪಕ್ಷ ಕ್ರಮ ವಹಿಸಬೇಕು ಎಂದು ವಿಜಯನಗರ ಡಾ.ಬಿರ್.ಅಂಬೇಡ್ಕರ್ ಸಂಘದ ಅದ್ಯಕ್ಷ ಟಿ.ವಾಸುದೇವ್ ಒತ್ತಾಯಿಸಿದರು.

    ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪಕ್ಷದ ಮೇಲೆ ಕೆಲವು ಅಪಾದನೆಗಳಿವೆ, ಅವೇನೆಂದರೆ ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡವ ಸಂದರ್ಭದಲ್ಲಿ ಖರ್ಗೆರವರನ್ನು ಮುಖ್ಯಮಂತ್ರಿ ಸ್ಥಾನದಿಂದ ತಪ್ಪಿಸುವುದಕ್ಕಾಗಿಯೇ ಅವರನ್ನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಹೇಳಿ ಅವರನ್ನು ರಾಜ್ಯದಿಂದ ಹೊರದಬ್ಬಿದರು. ಹಾಗೂ ಡಾ.ಜಿ.ಪರಮೇಶ್ವರ್ ಅವರು 2013ರ ಚುನಾವಣೆಯಲ್ಲಿ ಪಕ್ಷದ ಕೆಲವು ಹಿರಿಯರು ಅವರನ್ನು ಸೋಲಿಸಲು ಜೇಡರ ಬಲೆ ಹೆಣೆದು ಅವರನ್ನು ಸೋಲಿಸಿ ಮುಖ್ಯಮಂತ್ರಿ ಪದವಿಯಿಂದ ಹಿಂದೆ ಸರಿಸಲು ವ್ಯವಸ್ಥಿತವಾಗಿ ಪಿತೂರಿ ನಡೆಸಿದರು. ದಲಿತರೆಂಬ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ವಂಚಿಸಿದರು. ಆದರೂ ದಲಿತರು ಕಾಂಗ್ರೆಸ್ ಪರವಾಗಿದ್ದೆವೆ ಎಂದರು.

    ಅಲೆಮಾರಿ ಸಮುದಾಯದ ರಾಜ್ಯಾಧ್ಯಕ್ಷ ಮುಖಂಡ ಸಣ್ಣಮಾರಪ್ಪ ಮಾತನಾಡಿ, ದಲಿತರ, ಹಿಂದುಳಿದ ವರ್ಗಗಳ ನಾಯಕನಾಗಿರಯವ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಎಚ್.ಸಿ.ಮಹಾದೇವಪ್ಪ ನವರು ಈಗಾಗಲೆ ಸರ್ಕಾರದ ಮಹತ್ವಾಕಾಂಕ್ಷೆಯ 5 ಗ್ಯಾರಂಟಿ ಯೋಜನಗಳನ್ನು ರೂಪಿಸಿ ಇಡೀ ರಾಜ್ಯದ ಶೋಷಿತ ಸಮುದಾಯಗಳನ್ನು ಮುನ್ನೆಲೆಗೆ ತರುವ ಮತ್ತು ಅವುಗಳನ್ನು ಜಾರಿಗೆ ತಂದು, ಕಾಂಗ್ರೇಸ್ ಪಕ್ಷಕ್ಕೆ ಬಹುದೊಡ್ಡ ಯಶಸ್ಸು ಮತ್ತು ಶಕ್ತಿಯನ್ನು ತಂದುಕೊಡುವಂತಹ ಕೆಲಸ ಮಾಡಿದ್ದಾರೆ. ದಲಿತ ಹಿಂದುಳಿದ ಸಮುದಾಯಗಳನ್ನು ರಾಜ್ಯಾದ್ಯಂತ ಒಗ್ಗೂಡಿಸಿ ಅವರಿಗೆ ಅರಿವು, ಸಾಮಾಜಿಕ ನ್ಯಾಯ, ಶೋಷಿತ ಸಮುದಾಯಗಳ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಈ ದಿನಮಾನದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಮತ್ತು ಕೇಂದ್ರ ಸಮಿತಿಗಳು ಇಂತಹ ಮನಸ್ಥಿತಿಯಿಂದ ಹೊರಬರಬೇಕು ಎಂದು ಆಗ್ರಹಿಸಿದರು.

    ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಬಣ್ಣದ ಮನೆ ಮಾತನಾಡಿ, ದಲಿತ, ಶೋಷಿತ ಸಮುದಾಯಗಳ ಚಿಂತಕ ಡಾ‌‌.ಎಚ್.ಸಿ. ಮಹಾದೇವಪ್ಪರನ್ನು ಸಹ ಈ ರಾಜ್ಯ ಸರ್ಕಾರವು ರಾಜ್ಯ ರಾಜಕಾರಣದಿಂದ ಹೊರದಬ್ಬುವ ಕೆಲಸ ಮಾಡುತ್ತಿದೆ. ಇಂತಹ ರಾಜಕೀಯ ಪಿತೂರಿಯನ್ನು ನಮ್ಮ ಸಂಘವು ತೀವ್ರವಾಗಿ ಖಂಡಿಸುತ್ತದೆ. ಒಂದು ವೇಳೆ ಸಚಿವ ಮಹಾದೇವಪ್ಪ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರೇರೆಪಿಸಿದ್ದೇ ಆದರೆ, ಕಾಂಗ್ರೆಸ್ ಪಕ್ಷವು ರಾಜ್ಯದ ಎಲ್ಲಾ 28 ಕ್ಷೇತ್ರದಲ್ಲಿ ದಲಿತ ಮತಗಳು ಅನಿವಾರ್ಯವಾಗಿ ಛಿದ್ರಗೊಂಡು ಪಕ್ಷಕ್ಕೆ ತುಂಬಾ ನಷ್ಟ ಅನುಭವಿಸುವ ಸಂಭವವಿದೆ. ಕುತಂತ್ರದ ವಿರುದ್ಧ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸಲಿದ್ದೇವೆ ಎಂದರು.

    ಪ್ರಮುಖರಾದ ತಮ್ಮನಳ್ಳಪ್ಪ, ಯರ್ರಿಸ್ವಾಮಿ, ರಾಮಲ್ಲಿ, ಎಚ್.ಸಿ.ರವಿ, ಜಯಣ್ಣ, ಬಿ.ಚಂದ್ರಶೇಖರ್, ಜೆ.ಶಿವಕುಮಾರ್, ಯಲ್ಲಪ್ಪ ಭಂಡಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts