More

    ಶಿವ ಸ್ಮರಣೆಯಿಂದ ಸಕಲ ಸಂಕಷ್ಟ ದೂರ – ಇಲಕಲ್‌ನ ಶ್ರೀ ಗುರುಮಹಾಂತ ಮಹಾಸ್ವಾಮೀಜಿ ಪ್ರತಿಪಾದನೆ

    ಹೊಸಪೇಟೆ: ಅಂಗದ ಮೆಲೆ ಲಿಂಗಧರಿಸಿ ಶಿವ ಸ್ಮರಣೆ ಮಾಡಿದರೆ ಸಕಲ ಸಂಕಷ್ಟಗಳೂ ನಿವಾರಣೆಯಾಗುತ್ತವೆ ಎಂದು ಇಲಕಲ್ ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರುಮಹಾಂತ ಮಹಾಸ್ವಾಮೀಜಿ ಪ್ರತಿಪಾದಿಸಿದರು.

    ನಗರದ ಶ್ರೀ ಕೊಟ್ಟೂರುಸ್ವಾಮಿ ಸಂಸ್ಥಾನ ಮಠದಲ್ಲಿ ಸರ್ವಧರ್ಮ ಸಮನ್ವಯ ಮಹಾರಥೋತ್ಸವ ಹಾಗೂ ಜಗದ್ಗುರು ಹಂಪಿಹೇಮಕೂಟ ಶೂನ್ಯಸಿಂಹಾಸನ ಪೀಠಾರೋಹಣ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ವಿಶ್ವಧರ್ಮ ಪ್ರವಚನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಯಾವುದೇ ತಂತ್ರ ಮಂತ್ರದಿಂದ ತಯಾರಿಸಿದ ತಾಯತ, ದಾರ ಕಟ್ಟಿಕೊಳ್ಳುವುದರಿಂದ ಪ್ರಯೋಜನವಿಲ್ಲ. ಲಿಂಗವಂತರು ನಿತ್ಯ ಲಿಂಗಪೂಜೆ ಕಾಯಕ ನಿಷ್ಠೆ ಬೆಳೆಸಿಕೊಳ್ಳಬೇಕು. ಮಕ್ಕಳ ಕೈಗೆ ಮೊಬೈಲ್ ಕೊಡುವ ಬದಲು ಲಿಂಗದೀಕ್ಷೆ, ಲಿಂಗಪೂಜೆ ಮಾಡಿಕೊಳ್ಳುವ ಸಂಸ್ಕಾರ ಕೊಡಿಸಬೇಕು. ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿ, ಅಧ್ಯಯನ ಶೀಲರಾಗುತ್ತಾರೆ. ನಿತ್ಯ ವಚನ ಪಠಣ ಮಾಡಿಸಿ ಮಕ್ಕಳಲ್ಲಿ ಜ್ಞಾನದೀವಿಗೆ ಹಚ್ಚಬೇಕು. ಮಗವಿದ್ದಾಗಲೇ ಮಕ್ಕಳಿಗೆ ಪೂಜೆ, ಸಂಸ್ಕಾರ ಕಲಿಸಿದರೆ ಜೀವನದುದ್ದಕ್ಕೂ ಇತರರಿಗೂ ಮಾದರಿಯಾಗಬಲ್ಲ ಶಕ್ತಿಯಾಬಲ್ಲರು. ಮಠದಲ್ಲಿ ನಡೆಯುವ ಪ್ರವಚನವನ್ನು ಕೇಳಿ ಜೀವನವನ್ನು ಪಾವನವನ್ನಾಗಿಸಕೊಳ್ಳಬೇಕು ಎಂದರು.

    ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮೀಜಿ ಭೌತಿಕವಾಗಿ ಲಿಂಗೈಕ್ಯರಾಗಿದ್ದರೂ ಅವರ ಅಂತರಾತ್ಮದ ಶಕ್ತಿ ಮಠದ 20ನೇ ಜಗದ್ಗುರುಗಳಾದ ಕೊಟ್ಟೂರು ಬಸವಲಿಂಗ ಮಹಾಸ್ವಾಮೀಜಿಯಲ್ಲಿದೆ ಎಂಬುದನ್ನು ಅರಿಯಬೇಕು. ಹಣದ ಬೆನ್ನು ಹತ್ತಿ ಸಂಪಾದಿಸಿದ ಸಂಪತ್ತು ಎಂದೂ ನೆಮ್ಮದಿ ನೀಡದು. ಸಂಸ್ಕಾರದ ಬೆನ್ನು ಹತ್ತಿದವರ ಬದುಕು ಎಂದೂ ಬರಡಾಗದು ಎಂದರು. ಶ್ರೀ ಮಹಾಂತ ಸ್ವಾಮೀಜಿ ಮುದಗಲ್ ಪ್ರವಚನ ನೀಡಿದರು.ಶ್ರೀಮಠದ ಸಿ.ಎಸ್.ಶರಣಯ್ಯ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts