More

    ಉತ್ತಮ ಆರೋಗ್ಯದಿಂದ ಸಾಧನೆ ಸಾಧ್ಯ; ವಿನಯ್ ಅವಧೂತ ಗುರೂಜಿ ಹೇಳಿಕೆ

    ಹಂಪಿಯಲ್ಲಿ ಯೋಗೋತ್ಸವಕ್ಕೆ ಚಾಲನೆ | ವಚನಾನಂದ ಶ್ರೀಗಳು, ಸಚಿವ ಆನಂದಸಿಂಗ್ ಭಾಗಿ

    ಹೊಸಪೇಟೆ: ಅಂತಾರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಹಂಪಿಯ ವಿಜಯ ವಿಠ್ಠಲ ಸ್ಮಾರಕದ ಪ್ರಾಂಗಣದಲ್ಲಿ ಕೇಂದ್ರ ಸರ್ಕಾರದ ಆಯುಷ್ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಮುರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆ ಹಾಗೂ ಶ್ವಾಸ ಕೇಂದ್ರ ಆಯೋಜಿಸಿದ್ದ ಯೋಗೋತ್ಸವ ಕಾರ್ಯಕ್ರಮಕ್ಕೆ ಭಾನುವಾರ ಅದ್ದೂರಿ ಚಾಲನೆ ದೊರೆಯಿತು.

    ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಿನಯ್ ಅವಧೂತ ಗುರೂಜಿ, ವಿಜಯನಗರ ಸಾಮ್ರಾಜ್ಯ ರಾಜ್ಯಭಾರ ಕಲಿಸಿದ ಮಹಾ ಸಾಮ್ರಾಜ್ಯವಾಗಿದೆ. ವಚನಾನಂದರೆಂದರೆ ಅಭಿನಯ ಬಸವಣ್ಣನಿದ್ದಂತೆ. ಅವರು ಏನೇ ಮಾಡಿದರೂ ಹೊಸತನ ಇರುತ್ತದೆ. ಹಂಪಿ ಹಾಳು ಹಂಪಿಯಾಗುವುದಿಲ್ಲ, ಈ ಯೋಗ ಕಾರ್ಯಕ್ರಮದಿಂದ ಹೊಸ ಹಂಪಿಯಾಗುತ್ತದೆ. ಶ್ರೀಕೃಷ್ಣದೇವರಾಯ ಹೇಗೆ ಹಂಪಿಗೆ ಪ್ರಸಿದ್ಧಿಯೋ, ಹಂಪಿ ಇರುವವರೆಗೆ ಆನಂದ ಸಿಂಗ್ ಹೆಸರು ಕೂಡ ಇರುತ್ತದೆ. ಹಂಪಿಯಲ್ಲಿ ಯೋಗ ವಿಶ್ವವಿದ್ಯಾಲಯ ಆಗಲಿ ಎಂದರು.

    ಶ್ವಾಸ ಕೇಂದ್ರದ ಸಂಸ್ಥಾಪಕ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, ಹಂಪಿಯಲ್ಲಿ ಯೋಗೋತ್ಸವ ನಡೆಯಬೇಕು ಎಂದು ಶತಮಾನಗಳ ಹಿಂದೆಯೇ ವಿಜಯನಗರದ ಅರಸ ಶ್ರೀಕೃಷ್ಣದೇವರಾಯ ಸಂಕಲ್ಪ ಮಾಡಿದಂತಿದೆ. ಭಾರತವು ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ದೇಶದ 75 ಪ್ರಮುಖ ವಿಶೇಷ ಸ್ಥಳಗಳಲ್ಲಿ ಯೋಗ ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸಲಾಗಿತ್ತು. ಇದರಲ್ಲಿ ಹಂಪಿ ಕೂಡ ಒಂದು ಎಂದರು.

    ಸಚಿವ ಆನಂದ ಸಿಂಗ್ ಮಾತನಾಡಿ, ಯೋಗ ದೇಶದ ವಿದ್ಯೆಯಾಗಿದೆ. ಹಂಪಿಯಲ್ಲಿ ಯೋಗ ವಿವಿ ಆಗಲೆಂದು ವಿನಯ್ ಗುರೂಜಿ ಹೇಳಿದ್ದಾರೆ. ಶ್ರೀ ವಿರೂಪಾಕ್ಷನ ಕೃಪೆಯಿಂದ ವಿವಿ ಆಗಲಿ. ಯೋಗ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು. ಪತಂಜಲಿ ಯೋಗ ಸಮಿತಿಯ ಭವರ್ ಲಾಲ್ ಆರ್ಯ ಇತರರಿದ್ದರು.

    ಉತ್ತಮ ಆರೋಗ್ಯದಿಂದ ಸಾಧನೆ ಸಾಧ್ಯ; ವಿನಯ್ ಅವಧೂತ ಗುರೂಜಿ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts