More

    ಹಂಪಿಯಲ್ಲಿ ಒನ್‌ವೇ ಜಾರಿಯಿಂದ ಹೈರಾಣ

    ಹೊಸಪೇಟೆ: ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸ್ವಾಮಿ ದರ್ಶನಕ್ಕೆ ಒನ್‌ವೇ (ಏಕಮುಖ) ಪದ್ಧತಿ ಜಾರಿಯಾಗಿದ್ದು, ಹಿಂದುಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಯ ಈ ನೀತಿಗೆ ಭಕ್ತರು ಹೈರಾಣಾಗಿದ್ದಾರೆ.

    ಇದನ್ನೂ ಓದಿ: ಹಂಪಿ ಉತ್ಸವಕ್ಕೆ ನಾಲ್ಕು ವೇದಿಕೆ


    ದಕ್ಷಿಣ ಕಾಶಿ ಪ್ರಖ್ಯಾತಿ ಹಂಪಿಯಲ್ಲಿ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ದಿನವೂ ಭಕ್ತರು ಹಾಗೂ ಪ್ರವಾಸಿಗರು ಭೇಟಿ ನೀಡುತ್ತಾರೆ. ವೀಕೆಂಡ್ ಹಾಗೂ ವಿಶೇಷ ದಿನಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ದರ್ಶನ ಪಡೆಯುತ್ತಾರೆ. ಆ ವೇಳೆ ಜನಸಂಖ್ಯೆಗೆ ಅನುಗುಣವಾಗಿ ಒನ್ನವೇ ಮಾಡಿದರೆ. ಅನುಕೂಲವಾಗುತ್ತದೆ. ಇತರೆ ದಿನಗಳಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವರ ಸಂಖ್ಯೆ ಕಡಿಮೆ ಇರುವುದರಿಂದ ಒನ್‌ವೇ ಪದ್ಧತಿಯ ಅವಶ್ಯಕತೆಯಿಲ್ಲ ಎಂಬುದು ಭಕ್ತ ಅಭಿಪ್ರಾಯ. ಇದರಿಂದ ಅಂಗವಿಕಲರಿಗೆ, ವೃದ್ಧರಿಗೆ, ಮಕ್ಕಳಿಗೆ ಸಮಸ್ಯೆಯಾಗುತ್ತದೆ ಎಂಬುದು ಆರೋಪ ಕೇಳಿಬಂದಿದೆ.


    ಈ ಹಿಂದೆ ಪೂರ್ವದ ರಾಜಗೋಪುರದಿಂದ ಪ್ರವೇಶ ಪಡೆಯುವ ಭಕ್ತರು, ಗರ್ಭಗುಡಿಗೆ ದಕ್ಷಿಣದ ಕಡೆಯಿಂದ ಒಳಕ್ಕೆ ಹೋಗುತ್ತಾರೆ. ಸ್ವಾಮಿಯ ದರ್ಶನ ಪಡೆದ ನಂತರ ಉತ್ತರಭಿಮುಖವಾಗಿ ಹೊರಗೆ ಬಂದು ತಾಯಿ ಪಂಪಾಬಿಕೆ ದೇವಿ, ತಾಯಿ ಭುವನೇಶ್ವರಿ ಸೇರಿ ಸುತ್ತಮುತ್ತಲಿನ ದೇವರ ದರ್ಶನ ಪಡೆದು ಮತ್ತೆ ಪೂರ್ವಾಭಿಮುಖವಾಗಿ ರಾಜಗೋಪುರದ ಮೂಲಕ ಭಕ್ತರು ನಿರ್ಗಮಿಸುತ್ತಿದ್ದರು. ಆದರೆ, ಕೆಲ ತಿಂಗಳಿಂದ ಸ್ವಾಮಿ ದರ್ಶನ ಪಡೆದು ಉತ್ತಾರಭಿಮುಖದ ಗೋಪುರದ ಮೂಲಕ ಭಕ್ತರು ನಿರ್ಗಮಿಸಬೇಕು. ಈ ಮಾರ್ಗವಾಗಿ ಭಕ್ತರು ಅಂದಾಜು ಒಂದು ಕಿಮೀ ನಡೆಯುವ ಅನಿರ್ವಾತೆಯಾಗಿದೆ. ಇದರಿಂದ ಅಂಗವಿಕಲರು ಹಾಗೂ ವೃದ್ಧರು ನಡೆಯಲಾಗದೇ ದೇವಸ್ಥಾನದ ಮುಂದೆ ಉಳಿಯುತ್ತಾರೆ. ಇಲಾಖೆಯ ಕೆಲ ಹೊಸ ನೀತಿಯಿಂದ ಭಕ್ತರಿಗೆ ಬೇಸರವಾಗಿದೆ.


    ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಹೋಗಬೇಕು ಎಂದರೆ ಪಾರ್ಕಿಂಗ್ ಪ್ರದೇಶದಿಂದ ಒಂದು ಕಿಮೀನಷ್ಟು ನಡೆಯಬೇಕು. ಇನ್ನೂ ದೇವಸ್ಥಾನದಲ್ಲಿ ಒನ್‌ವೇ ಮಾಡಿರುವುದರಿಂದ ದೇವಸ್ಥಾನವನ್ನು ಸುತ್ತಿ ಬರುವಷ್ಟರಲ್ಲಿ ಭಕ್ತರು ಹೈರಾಣಾಗುತ್ತಾರೆ. ಉತ್ತರಾಭಿಮುಖವಾಗಿ ದುರ್ಗಮ್ಮ ದೇವಿ ದೇವಸ್ಥಾನ ಹಾಗೂ ಪುಷ್ಕರಣಿ ದಾಟಿ ಬರಬೇಕು. ಕೆಲವರು ದೇವಸ್ಥಾನದ ಅಂಚಿನಲ್ಲಿ ಹೋಗುತ್ತಾರೆ. ಸ್ವಲ್ಪ ಎಡವಿದರೆ ಪುಷ್ಕರಣಿಯಲ್ಲಿ ಬೀಳುತ್ತಾರೆ. ಇಂಥ ಕೆಲ ಘಟನೆಗಳು ಕೂಡ ನಡೆದಿವೆ. ಧಾರ್ಮಿಕ ದತ್ತಿ ಇಲಾಖೆಯಿಂದಾಗಲಿ, ಪುರಾತತ್ವ ಇಲಾಖೆಯಿಂದಾಗಲಿ ಇಲ್ಲಿ ಭದ್ರತೆ ಒದಗಿಸಿಲ್ಲ. ಇನ್ನೊಂದೆಡೆ ಒನ್‌ವೇಯಿಂದ ಬಿಸಿಲಿನಲ್ಲಿ ದೇವಸ್ಥಾನ ಸುತ್ತಿ ಬರುವಷ್ಟರಲ್ಲಿ ಬಿಸಿಲಿನ ತಾಪಕ್ಕೆ ಹೈರಾಣಾಗುತ್ತಾರೆ. ಬಹುತೇಕ ಭಕ್ತರು ಕಷ್ಟವಾದರೂ ದೇವಸ್ಥಾನದ ಕಲ್ಯಾಣ ಮಂಟಪದಿಂದ ಮೂಲಕ ಇಳಿಯುತ್ತಿದ್ದಾರೆ. ಇದರಿಂದ ದೇವಸ್ಥಾನದಲ್ಲಿ ಶಿಸ್ತು ಮಾಯವಾಗಿದೆ.


    ಅಧಿಕಾರಿಗಳ ಮಾತೇನು?


    ಒನ್‌ವೇ ಜಾರಿಯಿಂದ ದೇವಸ್ಥಾನದಲ್ಲಿ ಶಿಸ್ತು ಕಾಪಾಡಿದಂತಾಗುತ್ತದೆ. ಜನಸಂದಣಿಯಾಗದಂತೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಇನ್ನೂ ಕಳ್ಳತನ ಕೂಡ ತಡೆಗಟ್ಟಬಹದು. ಆದ್ದರಿಂದ ದೇವಸ್ಥಾನದಲ್ಲಿ ಒನ್‌ವೇ ಮಾಡಲಾಗಿದೆ. ಭಕ್ತರು ಸಹಕರಿಸಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವಿರೂಪಾಕ್ಷೇಶ್ವರ ದೇವಸ್ಥಾನ ಕೇವಲ ಸ್ವಾಮಿ ದರ್ಶನಕ್ಕೆ ಮಾತ್ರವಲ್ಲ, ಐತಿಹಾಸಿಕವಾಗಿ ದೇವಸ್ಥಾನ ಸುತ್ತಿ ನೋಡುವ ಪ್ರವಾಸಿಗರ ಕೂಡ ಇಲ್ಲಿ ಭೇಟಿ ನೀಡುತ್ತಾರೆ. ಇದರಿಂದ ತಿಳಿದುಕೊಳ್ಳುವರಿಗೆ ಮಾಹಿತಿ ಕೊರತೆಯಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.


    ದೇವಸ್ಥಾನದಲ್ಲಿ ಒನ್‌ವೇ ಪದ್ಧತಿಯಿಂದ ಇತರೆ ಸ್ಥಾಕರಗಳನ್ನು ನೋಡಬಹುದು. ಸಮಸ್ಯೆಯಾಗುವಂತಿದ್ದರೆ ಮತ್ತೋಮ್ಮೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.
    । ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ


    ದೇವಸ್ಥಾನದಲ್ಲಿ ಶಿಸ್ತು ಕಾಪಾಡಲು ಒನ್ ವೇ ಮಾಡಲಾಗಿದೆ. ದೇವಸ್ಥಾನದ ಉತ್ತರದಲ್ಲಿ ಕೂಡ ಹಲವು ದೇವಸ್ಥಾನಗಳ ದರ್ಶನ ಆಗುತ್ತವೆ ಹಾಗೂ ಇತರೆ ಅಹಿತಕರ ನಡೆಯುವುದನ್ನು ‘ಡೆಯಬಹುದು. ಮೇಲಧಿಕಾರಿಗಳ ಆದೇಶದ ಮೇರೆಗೆ ಒನ್‌ವೇ ಜಾರಿ ಮಾಡಲಾಗಿದೆ.
    । ಹನುಮಂತಪ್ಪ ಇಒ, ಹಿಂದು ಧಾರ್ಮಿಕ ಹಾಗೂ ಧರ್ಮಾದಾಯ ಧತ್ತಿಗಳ ಇಲಾಖೆ, ಹಂಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts