More

  ನೆಲಕಚ್ಚಿದ ತೋಟಗಾರಿಕೆ ಬೆಳೆ

  ಹೊಸದುರ್ಗ: ತಾಲೂಕಿನಲ್ಲಿ ಭಾನುವಾರ ರಾತ್ರಿ ಮಳೆರಾಯ ಜೋರಾಗಿಯೇ ಅಬ್ಬರಿಸಿದ ಪರಿಣಾಮ ಮತ್ತೋಡು ಹಾಗೂ ಮಾಡದಕೆರೆ ಹೋಬಳಿಯಲ್ಲಿ ತೋಟಗಾರಿಕೆ ಬೆಳೆಗಳು ನೆಲಕಚ್ಚಿದ್ದು, ಅನೇಕ ಮನೆಗಳಿಗೆ ಹಾನಿಯಾಗಿದೆ.

  ಕಳೆದ ಹತ್ತು ವರ್ಷಗಳಲ್ಲಿಯೇ ದಾಖಲೆ ಎನ್ನಲಾದ ಮುಂಗಾರು ಮಳೆ ಭಾನುವಾರ ರಾತ್ರಿ ಮತ್ತೋಡು ಹೋಬಳಿಯಲ್ಲಿ ಸುರಿದಿದೆ. ರಾತ್ರಿ 12 ಗಂಟೆಗೆ ಆರಂಭವಾದ ಮಳೆ ಸತತ ಎರಡು ಗಂಟೆಗೂ ಅಧಿಕ ಕಾಲ ಸುರಿದಿದೆ. ಇದರ ಆರ್ಭಟಕ್ಕೆ ಮತ್ತೋಡು ಹಾಗೂ ಮಾಡದಕೆರೆ ಹೋಬಳಿಯಲ್ಲಿ ಅಪಾರ ಹಾನಿ ಸಂಭವಿಸಿದೆ.

  ಹಾನಿ: ಮಾಡದಕೆರೆ ಹೋಬಳಿಯ ಅತ್ತಿಮಗ್ಗೆ ಗ್ರಾಮದಲ್ಲಿ 2.24 ಎಕರೆ ಬಾಳೆ ತೋಟ ಹಾಗೂ 4 ವಾಸದ ಮನೆಗಳಿಗೆ ಹಾನಿಯಾಗಿದೆ. ಮತ್ತೋಡು ಹೋಬಳಿಯ ಕಸಪ್ಪನಹಳ್ಳಿ, ಇಟ್ಟಿಗೆಹಳ್ಳಿ, ಚಿಕ್ಕಬ್ಯಾಲದಕೆರೆ, ಕಸಪ್ಪನಹಳ್ಳಿ ಗ್ರಾಮಗಳಲ್ಲಿ ಆಡಕೆ ಮತ್ತು ಬಾಳೆ ಗಿಡಗಳು ನೆಲಕ್ಕುರುಳಿ ಹೆಚ್ಚಿನ ನಷ್ಟವಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts