More

    ಹೊಸದುರ್ಗದಲ್ಲಿ ದಿಂಡಿ ಉತ್ಸವ ವಿಜೃಂಭಣೆ

    ಹೊಸದುರ್ಗ: ಪಟ್ಟಣದ ಶ್ರೀ ವಿಠ್ಠಲ ರುಕುಮಾಯಿ ಮಂದಿರದಲ್ಲಿ ಸೋಮವಾರ 85ನೇ ವರ್ಷದ ದಿಂಡಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಭಾವಸಾರ ಕ್ಷತ್ರಿಯ ಸಮುದಾಯದವರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

    ದಿಂಡಿ ಉತ್ಸವದ ಪೂರ್ವಭಾವಿಯಾಗಿ ಶನಿವಾರ ದೇವಾಲಯದಲ್ಲಿ ಪೋತಿ ಸ್ಥಾಪನೆ ಮಾಡಲಾಯಿತು. ಭಾನುವಾರ ಮಂಜಾನೆ ಕಾಕಡಾರತಿ, ವಿಠ್ಠಲ ರುಕುಮಾಯಿ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಹಾಪೂಜೆ, ಮಹಾಮಂಗಳಾರತಿ ಸೇವೆಗಳು ನೆರವೇರಿದವು.

    ಶನಿವಾರ ಸಂಜೆಯಿಂದ ಪೋತಿ ಸ್ಥಾಪನೆ ನಂತರ ಭದ್ರಾವತಿ ಬಸಪ್ಪ ಮಾಸ್ಟರ್ ಹಾಗೂ ಯು.ಎನ್. ಬದರಿನಾಥ್ ಸಂಗಡಿಗರು ಪಾಂಡುರಂಗ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಭಾನುವಾರ ಸಾಮೂಹಿಕ ಜಪನಾಮ, ಜ್ಞಾನೇಶ್ವರಿ ಪ್ರವಚನ, ಭಜನೆ ಮಾಡಲಾಯಿತು. ಸೋಮವಾರ ಬೆಳಗ್ಗೆ ವಿವಿಧ ಹೂಮಾಲೆಗಳಿಂದ ಶೃಂಗರಿಸಲಾಗಿದ್ದ ವಿಶೇಷ ವಾಹನದಲ್ಲಿ ರಾಜಬೀದಿ ಉತ್ಸವ ನಡೆಯಿತು.

    ಹೆಚ್ಚಿನ ಸಂಖ್ಯೆಯ ಭಕ್ತರು ಹಾಗೂ ಭಜನಾ ಮಂಡಳಿಯ ಕಲಾವಿದರು ಪಾಲ್ಗೊಂಡು ಸಂಭ್ರಮಿಸಿದರು. ಮೂರು ದಿನಗಳ ಕಾಲ ನಿರಂತರ ಭಜನೆ ಮಾಡುವ ಮೂಲಕ ದೇವರನ್ನು ಆರಾಧಿಸಲಾಯಿತು.

    ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಶ್ರೀನಿವಾಸ್, ಪುರಸಭಾ ಮಾಜಿ ಅಧ್ಯಕ್ಷೆ ನಾಗಮಣಿ ಸೀತಾರಾಂ, ಸದಸ್ಯ ಆರ್.ಎಸ್. ಪ್ರಶಾಂತ್, ವಿನಯ್ ಗುಜ್ಜಾರ್, ಶ್ಯಾಮ್, ಸಂಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts