More

    ಆಕೆಯ ಮದ್ವೆಗೆ 10 ದಿನಗಳಿದ್ದವು; ಆದರೆ ಮಧ್ಯರಾತ್ರಿ ನಡೆದ ಆ ಘಟನೆ, ಆ ಮೂವರನ್ನೂ ಬೆಚ್ಚಿ ಬೀಳಿಸಿತ್ತು!

    ಉತ್ತರಪ್ರದೇಶ: ಇನ್ನೊಂದು ಹತ್ತು ದಿನ ಕಳೆದಿದ್ದರೆ ಆಕೆಯ ಮದುವೆ ಜರುಗುವುದಿತ್ತು. ಆ ವಧು ಮನೆಯಲ್ಲಿ ಇಬ್ಬರು ಸೋದರಿಯರ ಜತೆ ಮಲಗಿದ್ದಾಗ, ಮಧ್ಯರಾತ್ರಿ ಆ ಮೂವರನ್ನೂ ಬೆಚ್ಚಿ ಬೀಳಿಸುವಂಥ ಭಯಂಕರ ಘಟನೆ ನಡೆದಿದೆ.

    ಹೀಗೆ ಆ ಭೀಕರ ಕೃತ್ಯಕ್ಕೆ ಒಳಗಾದ ಮೂವರೂ ಸೋದರಿಯರು ಅಪ್ರಾಪ್ತ ವಯಸ್ಸಿನ ದಲಿತ ಯುವತಿಯರು. ವಧುವಿಗೆ ಹದಿನೇಳು, ಇನ್ನಿಬ್ಬರಲ್ಲಿ ಒಬ್ಬಳಿಗೆ ವಯಸ್ಸು 12, ಮತ್ತೊಬ್ಬಳಿಗೆ ಎಂಟು. ಅಷ್ಟಕ್ಕೂ ಇವೆಲ್ಲ ನಡೆದಿದ್ದು ಇತ್ತೀಚೆಗಷ್ಟೇ ಹಾಥರಸ್​ ಅತ್ಯಾಚಾರ ಘಟನೆ ನಡೆದಿರುವ ಉತ್ತರ ಪ್ರದೇಶದಲ್ಲಿ. ಇಲ್ಲಿನ ಲಕ್ನೋದಿಂದ 150 ಕಿ.ಮೀ. ದೂರದ ಗೊಂಡಾ ಜಿಲ್ಲೆಯಲ್ಲಿ ಸೋಮವಾರ ಈ ಪ್ರಕರಣ ನಡೆದಿದೆ.

    ಜಿಲ್ಲೆಯ ಪರಸ್ಪುರ್​ ಪ್ರದೇಶದಲ್ಲಿನ ಮನೆಯ ಮಹಡಿಯಲ್ಲಿ ಮೂವರೂ ಸೋದರಿಯರು ಮಲಗಿದ್ದಾಗ ಈ ಘಟನೆ ಜರುಗಿದೆ. ಮಧ್ಯರಾತ್ರಿ ಇವರ ಮೇಲೆ ಯಾರೋ ಆ್ಯಸಿಡ್ ಎರಚಿದ್ದಾರೆ. ಅದು ಮೂವರ ಮೇಲೂ ಬಿದ್ದಿದ್ದು, ಎಲ್ಲರೂ ಒಮ್ಮೆಲೆ ಚೀರಾಡಿದ್ದಾರೆ. ತಕ್ಷಣ ಮೇಲ್ಗಡೆ ಧಾವಿಸಿ ಬಂದ ಪಾಲಕರು, ತಮ್ಮ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ವಧುವಿಗೆ ಕತ್ತು, ಮುಖ, ಎದೆ ಆ್ಯಸಿಡ್​ನಿಂದ ಸುಟ್ಟಿದ್ದು ಗಂಭೀರ ಗಾಯಗಳಾಗಿವೆ. ಆಕೆಯ ಸೋದರಿಯರಿಗೂ ಚಿಕ್ಕಪುಟ್ಟ ಗಾಯಗಳಾಗಿವೆ. ಸೋದರಿಯರ ಚೀರಾಟ ಕೇಳಿಸುತ್ತಿದ್ದಂತೆ ಕಿಡಿಗೇಡಿ ಪರಾರಿಯಾಗಿದ್ದ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts