More

    ಭೀಕರ ಅಪಘಾತ: ಮದುವೆ ದಿಬ್ಬಣದ ಬಸ್​ ಉರುಳಿ ಬಿದ್ದು ಮೂವರು ಸ್ಥಳದಲ್ಲೇ ಸಾವು; 30ಕ್ಕೂ ಹೆಚ್ಚು ಮಂದಿಗೆ ಗಾಯ

    ಶಿರಾ: ಮದುವೆ ದಿಬ್ಬಣ ತೆರಳುತ್ತಿದ್ದ ಬಸ್ಸೊಂದು ಉರುಳಿ ಬಿದ್ದು ಇಂದು ಭೀಕರ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೆ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಶಿರಾ ತಾಲೂಕಿನ ಮೇಕೆರಹಳ್ಳಿ ಬಳಿ ಈ ಅಪಘಾತ ಇಂದು ರಾತ್ರಿ ಸಂಭವಿಸಿದೆ. ಚಿತ್ತಣ್ಣ ಮತ್ತು ಭಾಗ್ಯಮ್ಮ ಎಂಬವರು ಮೃತಪಟ್ಟಿದ್ದು, ಮೃತರಾಗಿರುವ ಇನ್ನೊಬ್ಬರ ಗುರುತು ಇನ್ನಷ್ಟೇ ಪತ್ತೆ ಆಗಬೇಕಿದೆ. ಅಪಘಾತದಲ್ಲಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಗಾಯಾಳುಗಳನ್ನು ಶಿರಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲೂ ತೀವ್ರವಾಗಿ ಗಾಯಗೊಂಡಿದ್ದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

    ಕೊರಟಗೆರೆ ತಾಲೂಕಿನ ಬೆಟ್ಟಶಮ್ಮನಹಳ್ಳಿಯಲ್ಲಿ ವಿವಾಹ ಮುಗಿಸಿ ಬಂಗಾರಹಟ್ಟಿಯಲ್ಲಿ ನಡೆಯುವ ಆರತಕ್ಷತೆಗೆ ಬಸ್​ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಅಪಘಾತಕ್ಕೀಡಾದ ಬಸ್​​ನಲ್ಲಿ 40ರಿಂದ 50 ಜನರು ಇದ್ದು ಮೇಕೆರಹಳ್ಳಿ ತಿರುವಿನಲ್ಲಿ ಬಸ್ ಉರುಳಿ ಬಿದ್ದಿದೆ. ಸಾವು ನೋವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ಶಿರಾ ಡಿವೈಎಸ್ಪಿ ಕುಮಾರಯ್ಯ ಸೇರಿ ಪೊಲೀಸ್ ಸಿಬ್ಬಂದಿ ಸ್ಥಳದಲ್ಲೇ ಇದ್ದು ಗಾಯಾಳುಗಳ ಚಿಕಿತ್ಸೆಗೆ ಕ್ರಮಕೈಗೊಂಡಿದ್ದಾರೆ.

    ಭೀಕರ ಅಪಘಾತ: ಮದುವೆ ದಿಬ್ಬಣದ ಬಸ್​ ಉರುಳಿ ಬಿದ್ದು ಮೂವರು ಸ್ಥಳದಲ್ಲೇ ಸಾವು; 30ಕ್ಕೂ ಹೆಚ್ಚು ಮಂದಿಗೆ ಗಾಯ
    ಉರುಳಿ ಬಿದ್ದಿರುವ ಬಸ್​

    ಮದುವೆಯಾಗಲು ಇಷ್ಟವಿಲ್ಲದ್ದಕ್ಕೆ ನೇಣು ಹಾಕಿಕೊಂಡಳು; ಐಒಸಿ ಇಂಜಿನಿಯರ್ ಆತ್ಮಹತ್ಯೆ

    ಅದೇ ಆಸ್ಪತ್ರೆಯಲ್ಲಿ ಈಗ ಮತ್ತೊಬ್ಬ ವೈದ್ಯರ ಆತ್ಮಹತ್ಯೆ!; ಇನ್ನೆಂದಿಗೂ ಎಚ್ಚರಗೊಳ್ಳಲ್ಲ ಈ ಅರಿವಳಿಕೆ ತಜ್ಞ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts