More

    ಫೆ.17, ಫೆ.18 ರಂದು ದಾಂಡೇಲಿಯಲ್ಲಿ ಹಾರ್ನಬಿಲ್ ಹಬ್ಬ

    ದಾಂಡೇಲಿ: ಫೆಬ್ರವರಿ 17, 18ರಂದು ದಾಂಡೇಲಿಯಲ್ಲಿ ಹಾರ್ನ್​ಬಿಲ್ ಹಬ್ಬ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ.

    ದಾಂಡೇಲಿಯ ಹಾರ್ನ್​ಬಿಲ್ ಭವನದಲ್ಲಿ ಎ.ಸಿ.ಎಫ್ ಸಂತೋಷ ಚವ್ಹಾಣ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಜೊಯಿಡಾ ಹಾಗೂ ದಾಂಡೆಲಿಯ ವಿವಿಧ ಸಂಘ-ಸಂಸ್ಥೆಗಳ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಯಿತು.

    ಹಾರ್ನಬಿಲ್, ಪರಿಸರ ಮತ್ತು ವನ್ಯಜೀವಿ ಬಗ್ಗೆ ಅಧ್ಯಯನ ಮಾಡಿದ ಪರಿಣತರನ್ನು ಕರೆಸಿ ವಿವಿಧಗೋಷ್ಠಿಗಳನ್ನು ಏರ್ಪಡಿಸಲು, ಉದ್ಘಾಟನಾ ಸಮಾರಂಭದ ಪೂರ್ವದಲ್ಲಿ ಹಾರ್ನಬಿಲ್ ಪಕ್ಷಿ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಜಾಥಾ ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

    ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ದಾಂಡೇಲಿ, ಜೊಯಿಡಾ ತಾಲೂಕಿನಲ್ಲಿ ಏರ್ಪಡಿಸುವುದು ಸೇರಿದಂತೆ ಹಬ್ಬವನ್ನು ಸ್ಥಳೀಯರ ಬೆಂಬಲದಿಂದ ಅದ್ಧೂರಿಯಾಗಿ ಆಚರಿಸಲು ಸಭೆ ನಿರ್ಧರಿಸಿತು.

    ಆರ್.ಎಫ್.ಓ ಅಪ್ಪಾರಾವ್ ಕಲಶೆಟ್ಟಿ ವಂದಿಸಿದರು.

    ಸಭೆಯಲ್ಲಿ ಕ.ಸಾ.ಪ ಜಿಲ್ಲಾಧ್ಯಕ್ಷ ಬಿ.ಎನ್ ವಾಸರೆ, ಬಂಗೂರನಗರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎಲ್ ಗುಂಡೂರ, ಹಾರ್ನಬಿಲ್ ಪಕ್ಷಿ ತಜ್ಞ ಉಮೇಶ ಜಿ., ಪ್ರವಾಸೋದ್ಯಮ ಪರಿಣಿತ ಮಿಲಿಂದ್ ಕೊಡಕೋಣಿ, ನಗರಸಭಾ ಸದಸ್ಯ ಮೋಹನ ಹಲವಾಯಿ, ರಾಜ್ಯ ಹಾರ್ನಬಿಲ್ ಅಭಿವೃದ್ಧಿ ಸಮಿತಿಯ ಸದಸ್ಯರಾದ ಕೀರ್ತಿ ಗಾಂವಕರ, ಯು.ಎಸ್ ಪಾಟೀಲ, ಗಜಾನನ ಕರಗಾಂವಕರ, ವೆಸ್ಟ್​ಕೋಸ್ಟ್ ಪೇಪರ ಮಿಲ್ಲಿನ ಸಂಪರ್ಕ ಅಧಿಕಾರಿ ರಾಜೇಶ ತಿವಾರಿ, ಜೊಯಿಡಾದ ಸುರ್ದಶನ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts